ಬೆಳಗಾವಿ : ಸದನದಲ್ಲಿ ಅಂಜಲಿ ನಿಂಬಾಳ್ಕರ್ ಅವರನ್ನು ಅಮಾನತು ಮಾಡಬೇಕು, ಹೊರಗೆ ಹಾಕಬೇಕು ಎಂದು ಮಾಧುಸ್ವಾಮಿ ಒತ್ತಾಯಿಸಿದ್ದು, ಮಾಧುಸ್ವಾಮಿ ನಡೆ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಾಧುಸ್ವಾಮಿ ಮಾತನಾಡುವಾಗ ಅಂಜಲಿ ನಿಂಬಾಳ್ಕರ್ ಬಾವಿಯಲ್ಲಿ ಎದುರು ಮಾತನಾಡಿದ್ರು. ಇದಕ್ಕೆ ಮಾಧುಸ್ವಾಮಿ ಕಿಡಿಕಾರಿದ್ದು, ಅಂಜಲಿ ನಿಂಬಾಳ್ಕರ್ ಅವರನ್ನು ಅಮಾನತು ಮಾಡಬೇಕು, ಹೊರಗೆ ಹಾಕಬೇಕು ಎಂದು ಮಾಧುಸ್ವಾಮಿ ಒತ್ತಾಯಿಸಿದ್ದಾರೆ.
ನಾನು ಸಂಸದೀಯ ವ್ಯವಹಾರಗಳ ಸಚಿವನಾಗಿ ಹೇಳುತ್ತೇನೆ. . ಸದನದಿಂದ ಆಚೆ ಹಾಕಲೇಬೇಕು ಹೊರಗಡೆ ಹಾಕ್ತೀರೋ ಇಲ್ವೋ ಎಂದು ಕುಮಾರ್ ಬಂಗಾರಪ್ಪ ಅವರಿಗೆ ಮಾಧುಸ್ವಾಮಿ ಪ್ರಶ್ನೆ ಮಾಡಿದ್ರು. ಇದಕ್ಕೆ ಗರಂ ಆದ ವಿಪಕ್ಷ ನಾಯಕ ಸಿದ್ದರಾಮಯ್ಯ ಇದು ಪ್ರಜಾಪ್ರಭುತ್ವ ರೀತಿಯಲ್ಲಿ ಸರಿಯಾದ ನಡೆಯಲ್ಲ ಎಂದರು.