ಬೆಂಗಳೂರು: ಇದೀಗ ಕಾಡುತ್ತಿರುವ ಮಾರಣಾಂತಿಕ ಚರ್ಮಗಂಟು ರೋಗ ಕರ್ನಾಟಕಕ್ಕೂ ಕಾಲಿಟ್ಟಿದೆ. ವಿಧಾನಸಭೆಯಲ್ಲಿ ಈ ಗಂಭೀರ ವಿಷಯವನ್ನು ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ರುದ್ರಪ್ಪ ಬಳ್ಳಾರಿ ಪ್ರಸ್ತಾಪಿಸಿದರು. ಹಾವೇರಿ, ಶಿಗ್ಗಾಂವಿ ಮತ್ತು ಬ್ಯಾಡಗಿ ತಾಲ್ಲೂಕಿಗಳಲ್ಲಿ ರೋಗವು ವ್ಯಾಪಿಸಿದೆ.
ಈವರೆಗೆ 143 ಜಾನುವಾರುಗಳು ಸತ್ತಿವೆ. ರೋಗವು ಕ್ಷಿಪ್ರಗತಿಯಲ್ಲಿ ವ್ಯಾಪ್ತಿಸುತ್ತಿದ್ದು ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.ಜನರು ಮೂರು ವರ್ಷಗಳ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ. ಜಾನುವಾರುಗಳು ಪ್ರವಾಹದಲ್ಲಿ ಕೊಚ್ಚಿಹೋದರೆ, ಗೋಡೆ ಕುಸಿದು ಸತ್ತರೆ ಮಾತ್ರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಲ್ಲಿ ಪರಿಹಾರ ಕೊಡುತ್ತಾರೆ. ಆದರೆ ರೋಗದಿಂದ ಮೃತಪಟ್ಟರೆ ಪರಿಹಾರ ಕೊಡುತ್ತಿಲ್ಲ. ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪುವ ಜಾನುವಾರುಗಳಿಗೂ ಪರಿಹಾರ ಕೊಟ್ಟು ರೈತರನ್ನು ಕಾಪಾಡಬೇಕು ಎಂದು ಅವರು ಆಗ್ರಹಿಸಿದರು.