ಲಕ್ನೋ: 18 ವರ್ಷದ ಯುವತಿಯೊಬ್ಬಳ ಮೇಲೆ ಆಟೋ ಚಾಲಕ ಮತ್ತು ಆತನ ಸಹಾಯಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಶನಿವಾರ ಲಕ್ನೋದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಈ ಯುವತಿ ಟ್ಯೂಷನ್ ಮುಗಿಸಿ ಮನೆಗೆ ಮರಳಲು ಆಟೋ ಹತ್ತಿದ್ದಾಳೆ. ಈ ವೇಳೆ ಆಟೋ ಚಾಲಕ ಹಾಗೂ ಆತನ ಸಹಾಯಕ ಇಬ್ಬರೂ ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ನಂತ್ರ ಆಕೆಯನ್ನು ನಗರದ ಮಧ್ಯ ಭಾಗದಲ್ಲಿರುವ ಪ್ರಮುಖ ಕ್ರಾಸಿಂಗ್ ಬಳಿ ಆಟೋದಿಂದ ತಳ್ಳಿ ಹೋಗಿದ್ದಾರೆ.
ಆರೋಪಿಗಳು ಆಕೆಯನ್ನು ಬಿಟ್ಟು ಹೋದ ಸ್ಥಳದ ಸಮೀಪದಲ್ಲಿ ಪೊಲೀಸ್ ವ್ಯಾನ್ ಅನ್ನು ಗಮನಿಸಿದ ಯುವತಿ ಸಹಾಯಕ್ಕಾಗಿ ಅವರನ್ನು ಸಂಪರ್ಕಿಸಿದ್ದಾಳೆ. ಪ್ರಾಥಮಿಕ ವಿಚಾರಣೆಯ ನಂತರ ಆಕೆಯನ್ನು ಮನೆಗೆ ತಲುಪಿಸಲಾಗಿದೆ.
ಘಟನೆ ಸಂಬಂಧ ಯುವತಿ ದೂರು ನೀಡಿದ್ದು, ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಆರೋಪಿಗಳನ್ನು ಬಂಧಿಸಲು ಅನೇಕ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
BIGG BREAKING NEWS : ಮಳಲಿ ಮಸೀದಿ ವಿವಾದ : ನವೆಂಬರ್ 9 ಕ್ಕೆ ಆದೇಶ ಕಾಯ್ದಿರಿಸಿದ ಮಂಗಳೂರು ಕೋರ್ಟ್
BIGG NEWS : ಮಂಡ್ಯದಲ್ಲಿ ಮತ್ತೊಂದು ರೇಪ್ ಕೇಸ್ : ಅಪ್ರಾಪ್ತೆ ಬಾಲಕಿ ಮೇಲೆ ವೃದ್ಧನಿಂದ ಅತ್ಯಾಚಾರ!