ಉತ್ತರಾಖಂಡ : ಉತ್ತರಾಖಾಂಡ್ ನಲಿ ಆಘಾತಕಾರಿ ಘಟನೆಯೊಂದು ಬಳಕಿಗೆ ಬಂದಿದೆ. ಮದುವೆಯಾದ ಮೊದಲ ರಾತ್ರಿಯೇ ತನ್ನ ಪತ್ನಿ ಟ್ರಾನ್ಸ್ಜೆಂಡರ್ ಎಂದು ತಿಳಿದ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಉತ್ತರಾಖಂಡ ಯುವಕ, ಹರಿಯಾಣದ ಹಿಸಾರ್ ನಲ್ಲಿ ವಾಸುಸುತ್ತಿದ್ದ ಹುಡುಗಿಯನ್ನು ಮದುವೆಯಾಗಿದ್ದನು. ಇಬ್ಬರದ್ದೂ ಪ್ರೇಮ ವಿವಾಹವಾಗಿತ್ತು. ಆದರೆ ಮದುವೆಯಾದ ಮೊದಲ ರಾತ್ರಿಯೇ ವರನಿಗೆ ಪತ್ನಿ ಟ್ರಾನ್ಸ್ಜೆಂಡರ್ ಎಂಬ ವಿಚಾರ ತಿಳಿದು, ತನಗೆ ಮೋಸವಾಗಿದೆ ಎಂದು ಆರೋಪಿಸಿದ್ದಾನೆ.
ಮಾಧ್ಯಮ ವರದಿಗಳ ಪ್ರಕಾರ, ಘಟನೆ ಸಂಬಂಧ ಸಂತ್ರಸ್ತ ಯುವಕ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಈ ವಿಷಯವನ್ನು ಲಕ್ಸರದ ದರ್ಗಾಪುರ ಗ್ರಾಮದಲ್ಲಿ ಹೇಳಲಾಗುತ್ತಿದೆ. ಇಲ್ಲಿ ನೆಲೆಸಿರುವ
ಯುವಕನಿಗೆ ಸೋಷಿಯಲ್ ಮೀಡಿಯಾದಲ್ಲಿ ಯುವತಿಯ ಪರಿಚಯವಾಗಿದ್ದು, ನಂತರ ಇಬ್ಬರ ನಡುವೆ ಪರಸ್ಪರ ಪ್ರಿತಿ ಬೆಳೆದು ಇಬ್ಬರು ಒಪ್ಪಿ ವಿಹಾವಾಗಿದ್ದರು. ಯುವಕ ಯಾವುದೇ ವರದಕ್ಷಿಣೆಯನ್ನು ಪಡೆಯದೆ ವಿವಾಹವಾಗಿದ್ದನು ಎಂದು ತಿಳಿದು ಬಂದಿದೆ.
ಇದೀಗ ಪತ್ನಿಯ ಬಗ್ಗೆ ವಿಚಾರ ತಿಳಿದ ಬಳಿಕ ಸಂತ್ರಸ್ತ ಯುವಕ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ವಿಚ್ಛೇದನ ನೀಡುವ ಬದಲು ಭಾರಿ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಅಪರಿಚಿತ ವ್ಯಕ್ತಿಯಿಂದ ಆತನ ಟ್ರಾನ್ಸ್ಜೆಂಡರ್ ಬಗ್ಗೆ ನನಗೆ ತಿಳಿಯಿತು. ನಾನು ನನ್ನ ಹೆಂಡತಿಯನ್ನು ಕೇಳಿದಾಗ ಅವಳು ಉತ್ತರಿಸದೆ ತನ್ನ ತಾಯಿಯ ಮನೆಗೆ ಹೋದಳು ಎಂದು ಯುವಕ ದೂರಿದ್ದಾನೆ.
ಈ ಕುರಿತು ಯುವಕನ ದೂರಿನ ಮೇರೆಗೆ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
‘ಮಗುವಿಗೆ ತಮ್ಮ ಹೋಲಿಕೆಗಳಿಲ್ಲ’ ಎಂದು ವೈದ್ಯರ ಬಳಿಯೋದ ಮಹಿಳೆ ; ಪರೀಕ್ಷೆಯಿಂದ ಆಘಾತಕಾರಿ ಸತ್ಯ ಬಹಿರಂಗ
BIGG NEWS : ನಾಳೆ ದೇವನಹಳ್ಳಿಯ ಆವತಿ ಬೆಟ್ಟಕ್ಕೆ ಅಮಿತ್ ಶಾ ಭೇಟಿ : 500 ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ
BREAKING NEWS : ಬೀದರ್ ನಲ್ಲಿ ಬಿ.ಎಸ್ಸಿ ನರ್ಸಿಂಗ್ ಕೋರ್ಸ್ ಆರಂಭಕ್ಕೆ ರಾಜ್ಯ ಸರ್ಕಾರ ಆದೇಶ