ಮಹಾರಾಷ್ಟ್ರ : ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಲವ್ ಜಿಹಾದ್ ಕುರಿತು ಪ್ರತಿಕ್ರಿಯಿಸಿದ ಕೆಲವು ದಿನಗಳ ನಂತರ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಬಗ್ಗೆ ಮಾತನಾಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು,ಲವ್ ಜಿಹಾದ್ ಕಾನೂನಿನ ಬಗ್ಗೆ ಸರ್ಕಾರ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೆ ಇತರ ರಾಜ್ಯಗಳ ಕಾನೂನುಗಳನ್ನು ಅಧ್ಯಯನ ಮಾಡುವುದಾಗಿ ಹೇಳಿದ್ದಾರೆ.
We have not taken any decision yet, but we will study the laws made by different states in this regard: Maharashtra Dy CM Devendra Fadnavis on making a law against 'love jihad' pic.twitter.com/Gn8ztm8cp1
— ANI (@ANI) December 9, 2022
ಶ್ರದ್ಧಾ ಅವರ ತಂದೆ ವಿಕಾಸ್ ವಾಕರ್ ಅವರ ಪತ್ರಿಕಾಗೋಷ್ಠಿಯ ನಂತರ ಬೆಳವಣಿಗೆ ನಡೆದಿದೆ.
ಮಹಾರಾಷ್ಟ್ರ ಪೊಲೀಸರು ತನಗೆ ಸಹಾಯ ಮಾಡಿದ್ದರೆ ಆಕೆ ಬದುಕಿರುತ್ತಿದ್ದಳು ಎಂದು ಶ್ರದ್ಧಾ ತಂದೆ ವಿಕಾಸ್ ವಾಕರ್ ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಪ್ರಕರಣದ ತನಿಖೆಯಲ್ಲಿ ವಸಾಯಿ ಪೊಲೀಸರು ವಿಲಂಬನೆ ತೋರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನವೆಂಬರ್ನಲ್ಲಿ ಎಎನ್ಐ ಜೊತೆ ಮಾತನಾಡಿದ ಶ್ರದ್ಧಾ ಅವರ ತಂದೆ ವಿಕಾಸ್ ವಾಕರ್ ಅವರು ತಮ್ಮ ಮಗಳ ಪ್ರಕರಣದಲ್ಲಿ ಲವ್ ಜಿಹಾದ್ ಶಂಕೆ ಇದೆ ಎಂದು ಹೇಳಿದ್ದರು. ಇದಾ ಬಳಿಕ ಶ್ರದ್ಧಾ ಹತ್ಯೆ ಮಹಾರಾಷ್ಟ್ರದಲ್ಲಿ ಲವ್ ಜಿಹಾದ್ ಚರ್ಚೆಗೆ ಕಾರಣವಾಗಿತ್ತು.
ಶ್ರದ್ಧಾಳನ್ನು ಆಕೆಯ ಸ್ನೇಹಿತ ಅಫ್ತಾಬ್ ಕೊಲೆಗೈದು 35 ತುಂಡುಗಳನ್ನಾಗಿ ಮಾಡಿ ದೆಹಲಿಯ ಸುತ್ತಮುತ್ತ ಎಸೆದಿದ್ದರು. ಕೊಲೆ ನಡೆದ ಆರು ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು.
BIGG NEW : ಮ್ಯಾಂಡೌಸ್ ಚಂಡಮಾರುತ ಹಿನ್ನೆಲೆ : ಚೆನ್ನೈನಲ್ಲಿ 10 ವಿಮಾನಗಳು ರದ್ದು | Cyclone Mandous