ಯುಎಸ್: ಯುನೈಟೆಡ್ ಸ್ಟೇಟ್ಸ್ನಲ್ಲಿ ಮಂಕಿಪಾಕ್ಸ್(Monkeypox) ಕಾಯಿಲೆಯಿಂದ ಮೊದಲ ಸಾವು ವರದಿಯಾಗಿದೆ ಎಂದು ಲಾಸ್ ಏಂಜಲೀಸ್ ಕೌಂಟಿ ಸಾರ್ವಜನಿಕ ಆರೋಗ್ಯ ಇಲಾಖೆ ತಿಳಿಸಿದೆ.
US ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಕೂಡ ಸಂತ್ರಸ್ತನ ಸಾವು ಮಂಕಿಪಾಕ್ಸ್ ಸೋಂಕಿನಿಂದ ಉಂಟಾಗಿದೆ ಎಂದು ದೃಢಪಡಿಸಿದೆ. ಸೋಂಕು ಪತ್ತೆಯಾದ ನಂತ್ರ, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಇದೀಗ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಮರಣೋತ್ತರ ಪರೀಕ್ಷೆಯ ವರದಿಯಿಂದ ಸಾವನ್ನು ದೃಢಪಡಿಸಲಾಗಿದೆ ಎಂದು ಲಾಸ್ ಏಂಜಲೀಸ್ ಕೌಂಟಿ ಸಾರ್ವಜನಿಕ ಆರೋಗ್ಯ ಇಲಾಖೆ ತಿಳಿಸಿದೆ.
ಇದು ಯುನೈಟೆಡ್ ಸ್ಟೇಟ್ಸ್ನಲ್ಲಿ ಮಂಗನ ಕಾಯಿಲೆಯಿಂದ ಸಂಭವಿಸಿದ ಮೊದಲ ಸಾವು. ರಾಷ್ಟ್ರೀಯ ಅಂಕಿಅಂಶಗಳು, ಈ ವರ್ಷ US ನಲ್ಲಿ ಸುಮಾರು 22,000 ಮಂಕಿಪಾಕ್ಸ್ ಪ್ರಕರಣಗಳು ದೃಢೀಕರಿಸಲ್ಪಟ್ಟಿದೆ.
BIG NEWS : ʻಕೊಹಿನೂರು ವಜ್ರʼ ಭಗವಾನ್ ಜಗನ್ನಾಥನಿಗೆ ಸೇರಿದ್ದು, ವಾಪಸ್ ಕೊಡಿ: ಒಡಿಶಾದ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ
BIGG NEWS : ಬೆಂಗಳೂರಿನಲ್ಲಿ ಆಪರೇಷನ್ ಬುಲ್ಡೋಜರ್ ಡೇ-2 : ಶಾಂತಿನಿಕೇತನ ಲೇಔಟ್ನಲ್ಲಿ ತೆರವು ಕಾರ್ಯ ಆರಂಭ