ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನಗಳಲ್ಲಿ ಜೀವನ ಸಂಗಾತಿ ಸಿಗುವುದು ತುಂಬಾ ಕಷ್ಟವಾಗಿದೆ. ನಾವಯ ಯಾರೊಂದಿಗೆ ಜೀವನ ಕಳೆಯಲು ಬಯಸುತ್ತೀವೋ ಅವರ ಜೊತೆ ಹೊಂದಾಣಿಕೆ ಬಹಳ ಮುಖ್ಯವಾಗಿದೆ. ಅಷ್ಟೇ ಅಲ್ಲದೆ ಅವರನ್ನ ಯಾಕೆ ಮಾಡಿಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು.
ನಿಮ್ಮ ಮೊಬೈಲ್ನಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ʻಫೋನ್ ಹ್ಯಾಕ್ʼ ಆಗಿದೆ ಎಂದರ್ಥ… ಅದೇನು ಅಂತಾ ಇಲ್ಲಿ ನೋಡಿ!
ಏಕೆಂದರೆ ನಿಮ್ಮ ಜೀವನದ ಪ್ರತಿ ಕಷ್ಟದ ತಿರುವಿನಲ್ಲಿಯೂ ನಿಮ್ಮ ಸಂಗಾತಿಯೇ ನಿಮ್ಮ ಜೊತೆ ಇರಬೇಕು. ನಿಮ್ಮನ್ನು ಅರ್ಥಮಾಡಿಕೊಳ್ಳುವ ಜೀವನ ಸಂಗಾತಿಯ ಅಗತ್ಯವಿದೆ. ಸಂಬಂಧ ಗಟ್ಟಿಯಾಗಿರಬೇಕೆಂದರೆ ಸಂಗಾತಿಗಳ ನಡುವೆ ಹೊಂದಾಣಿಕೆ ಇರಬೇಕು. ಉತ್ತಮ ಜೀವನ ಸಂಗಾತಿಯನ್ನು ಆಯ್ಕೆಮಾಡುವಾಗ ಯಾವ ವಿಷಯಗಳನ್ನು ಗಮನಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ
* ಪ್ರೀತಿ – ಕಾಳಜಿ ಬಹಳ ಮುಖ್ಯ
ಒಂದು ಸಂಸಾರ ಸುಖವಾಗಿರಬೇಕಾದರೆ ನೀವು ನಿಮ್ಮ ಸಂಗಾತಿ ಮೇಲೆ ತೋರುವ ಪ್ರೀತಿ ಹಾಗೂ ಕಾಳಜಿ ಅತಿ ಮುಖ್ಯವಾದದ್ದು. ಹೀಗಾಗಿ ನೀವು ಯಾರನ್ನು ನಿಮ್ಮ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದೀರೋ ಆ ವ್ಯಕ್ತಿಗೆ ನಿಮ್ಮ ಮೇಲೆ ಪ್ರೀತಿ- ಕಾಳಜಿ ಇದೆಯೇ ನೋಡಿಕೊಳ್ಳಬೇಕು.
*ಕುಟುಂಬದ ಬಗ್ಗೆ ಜವಾಬ್ದಾರಿ ಇರಬೇಕು
ಜೀವನದಲ್ಲಿ ಮೋಜು-ಮಸ್ತಿ ಸಾಮಾನ್ಯ. ಆದರೆ ಇದೇ ಜೀವನವಾಗಿರಬಾರದು. ಕುಟುಂಬದ ಬಗ್ಗೆ ಜವಾಬ್ದಾರಿಯೂ ಇರುವ ಮನಸ್ಥಿತಿ ಹೊಂದಿರುವ ವ್ಯಕ್ತಿಯನ್ನು ನಿಮ್ಮ ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳಬೇಕು.
*ಆಂತರಿಕ ಸೌಂದರ್ಯ
ವ್ಯಕ್ತಿಯ ಬಾಹ್ಯ ಸೌಂದರ್ಯಕ್ಕೆ ಮರುಳಾಗಿ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಡಿ. ಏಕೆಂದರೆ ಬಾಹ್ಯ ಸೌಂದರ್ಯ ಕೆಲ ಸಮಯದ ವರೆಗೆ ಮಾತ್ರ ಇರುತ್ತದೆ. ಆದರೆ ಆಂತರಿಕ ಸೌಂದರ್ಯ ಜೀವನದುದ್ದಕ್ಕೂ ಇರುತ್ತದೆ. ಹೀಗಾಗಿ ಬಾಹ್ಯ ಸೌಂದರ್ಯಕ್ಕೆ ಮರುಳಗದೆ, ಆತಂಕರಿಕವಾಗಿ ಜೀವನ ನಡೆಸುವ ಸಂಗಾತಿಯನ್ನು ನೋಡಿಕೊಳ್ಳಬೇಕು.
ನಿಮ್ಮ ಮೊಬೈಲ್ನಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ʻಫೋನ್ ಹ್ಯಾಕ್ʼ ಆಗಿದೆ ಎಂದರ್ಥ… ಅದೇನು ಅಂತಾ ಇಲ್ಲಿ ನೋಡಿ!