ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ ಪೊಲೀಸರು ಬಂಧಿಸಿರುವ ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಇದೀಗ ಈ ವಿಚಾರವಾಗಿ ನಟಿ ಮತ್ತು ನಿರ್ಮಾಪಕಿ ಪ್ರಿಯಾ ಹಾಸನ್ ಅವರು ದರ್ಶನ್ ಅಭಿಮಾನಿಗಳಿಗೆ ಕಿವಿ ಮಾತು ಒಂದನ್ನು ಹೇಳಿದ್ದು, ಮೊದಲು ನಿಮ್ಮ ಕುಟುಂಬಕ್ಕೆ ಆದ್ಯತೆ ಕೊಡಿ, ದರ್ಶನ್ ನಿಂದ ನಿಮಗೆ ಏನು ಸಿಗಲ್ಲ ಫ್ಯಾಮಿಲಿ ಮೊದಲು ಅಂತ ಕಿವಿಮಾತು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವೊಂದು ಸಮಯ ಸಂದರ್ಭ ಅವರು ತಪ್ಪು ಮಾಡಿರುವುದು ನಿಜ ಆಗಿದೆ ಅದು ಪ್ರೂಫ್ ಸಹ ಆಗಿದೆ. ಉಪ್ಪು ತಿಂದವರು ನೀರು ಕುಡಿಯಬೇಕು ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು. ಸುಪ್ರೀಂ ಕೋರ್ಟ್ ನೀಡಿರುವ ಈ ಒಂದು ಐತಿಹಾಸಿಕ ತೀರ್ಪು ಇಡೀ ಸಮಾಜಕ್ಕೆ ಒಳ್ಳೆಯ ಸಂದೇಶ ಸಿಕ್ಕಿದೆ. ಕಾನೂನಿನ ಮುಂದೆ ಎಲ್ಲಾ ಒಂದೇ ಅನ್ನೋದು ಪ್ರೂವ್ ಆಗಿದೆ. ರಮ್ಯಾ ಗೂ ಫ್ಯಾನ್ಸ್ ಕೆಟ್ಟದಾಗಿ ಮೆಸೇಜ್ ಮಾಡಿದ್ದರು.
ರಮ್ಯಾ ಅವರ ಧೈರ್ಯ ಮೆಚ್ಚಬೇಕು ಅವರ ಬಗ್ಗೆ ಹೆಮ್ಮೆ ಇದೆ. ಕಾನೂನನ್ನು ನಾವು ಯಾರು ಕೈಗೆ ತೆಗೆದುಕೊಳ್ಳಲಾಗುವುದಿಲ್ಲ ಕಾನೂನು ಏನು ಹೇಳುತ್ತೋ ಅದಕ್ಕೆ ನಾವು ತಲೆಬಾಗಲೇಬೇಕು ಇಲ್ಲ ಅಂದರೆ ನಮ್ಮ ಸಮಾಜಕ್ಕೆ ನಾವು ಏನು ಸಂದೇಶ ಕೊಟ್ಟ ಹಾಗೆ ಆಗುತ್ತದೆ? ನಮ್ಮ ಸಮಾಜದಲ್ಲಿ ಕಾನೂನಿನ ಬಗ್ಗೆ ಭಯನೇ ಹೋಗಿ ಬಿಡುತ್ತೆ ಎಂದು ನಟಿ ಮತ್ತು ನಿರ್ಮಾಪಕಿ ಪ್ರಿಯಾ ಹಾಸನ್ ದರ್ಶನ್ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.