ಚಾಮರಾಜನಗರ : ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ನಡೆಸುತ್ತಿರುವ ‘ಭಾರತ್ ಜೋಡೋ ಯಾತ್ರೆ’ ಇಂದು ರಾಜ್ಯಕ್ಕೆ ಆಗಮಿಸಲಿದ್ದು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗೆ ‘ಭಾರತ್ ಜೋಡೋ ಯಾತ್ರೆ’ ಎಂಟ್ರಿ ಯಾಗಲಿದೆ.
ಗುಂಡ್ಲುಪೇಟೆಯಲ್ಲಿ ಒಂದೆಡೆ ಭಾರತ್ ಜೋಡೋ ಯಾತ್ರೆ ಸಂಭ್ರಮ ವಿದ್ದರೆ ಮತ್ತೊಂದೆಡೆ ಲೋಕಾಯುಕ್ತ ಟೀಮ್ ದಾಳಿ ನಡೆಸಿದೆ. ಗುಂಡ್ಲುಪೇಟೆ ಪ್ರವಾಸಿ ಮಂದಿರ ವೃತ್ತದಲ್ಲಿರುವ ಆರ್ ಟಿ ಒ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಎಸ್ ಪಿ ಸುರೇಶ್ ಬಾಬು ನೇತೃತ್ವದಲ್ಲಿ ದಾಳಿ ನಡೆದಿದೆ.
ಆರ್ ಟಿ ಒ ಅಧಿಕಾರಿ ಮಹೇಶ್ ಕರ್ತವ್ಯದಲ್ಲಿದ್ದ ವೇಳೆ ದಾಳಿ ಮಾಡಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಹಣ ವಸೂಲಿ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನೆಲೆ ಈ ದಾಳಿ ನಡೆದಿದೆ. ಬೀದರ್ ನ ಹುಮನಾಬಾದ್ ನಲ್ಲಿರುವ ಆರ್ ಟಿ ಒ ಚೆಕ್ ಪೋಸ್ಟ್ ಮೇಲೂ ದಾಳಿ ನಡೆಸಿದೆ.
‘ಭಾರತ್ ಜೋಡೋ ಯಾತ್ರೆ’ ಬರಮಾಡಿಕೊಳ್ಳಲು ಕಾಂಗ್ರೆಸ್ ತಯಾರಿ ಜೋರಾಗಿದೆ. ತಮಿಳುನಾಡಿನ ಗೂಡಲೂರು ಕಡೆಯಿಂದ ರಾಜ್ಯ ಪ್ರವೇಶ. ಬಂಡೀಪುರ ಗಡಿಯಿಂದ ವಾಹನದಲ್ಲಿ ಗುಂಡ್ಲುಪೇಟೆಗೆ ಬೆಳಗ್ಗೆ 9ಕ್ಕೆ ರಾಹುಲ್ ಹಾಗೂ ಅವರ ಸಹವರ್ತಿಗಳ ಆಗಮನವಾಗಲಿದ್ದು, ಗುಂಡ್ಲುಪೇಟೆಯ ಅಂಬೇಡ್ಕರ್ ಭವನದ ಎದುರಿನ ಖಾಸಗಿ ಜಾಗದಲ್ಲಿ ಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಕನಿಷ್ಠ 25ರಿಂದ 30 ಸಾವಿರ ಮಂದಿ ಕಾರ್ಯಕರ್ತರು ಸೇರುವ ನಿರೀಕ್ಷೆಯಿದೆ. ಗುಂಡ್ಲುಪೇಟೆ ಪಟ್ಟಣದ ಹೊರ ವಲಯದ ಶನೇಶ್ವರ ದೇವಾಲಯದ ಬಳಿಯಲ್ಲಿ ವೇದಿಕೆ ನಿರ್ಮಿಸಲಾಗಿದ್ದು, ಬುಡಕಟ್ಟು ಜನರು ಹಾಗೂ ಚಾಮರಾಝನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರೊಂದಿಗೆ ರಾಹುಲ್ ಸಂವಾದ ನಡೆಸಲಿದ್ದಾರೆ. ಸಂವಾದದ ನಂತರ ಪಾದಯಾತ್ರೆ ಮುಂದುವರಿಯಲಿದ್ದು, ಸಂಜೆ ವೇಳೆಗೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಬಳಿ ಶುಕ್ರವಾರ ಪಾದಯಾತ್ರೆ ಅಂತ್ಯವಾಗಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.
BIGG NEWS : ರಾಜ್ಯ ಹೈಕೋರ್ಟ್ ಗೆ ಅ. 3 ರಿಂದ ಐದು ದಿನ ದಸರಾ ರಜೆ : ರಜಾಕಾಲದ ಪೀಠದಿಂದ ಕಾರ್ಯ ನಿರ್ವಹಣೆ