ಕೊಡಗು: ಸಂಘ ನೋಂದಣಿ ಮಾಡಿಕೊಡೋದಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಂತ ಸಹಕಾರ ಸಂಘಗಗಳ ಉಪ ನಿಬಂಧಕರ ಕಚೇರಿಯ ಹಿರಿಯ ನಿರೀಕ್ಷಕರೊಬ್ಬರು, ಇಂದು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಡಿಕೇರಿ ಜಿಲ್ಲೆಯ ಜಿಲ್ಲಾ ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ಸಂಘದ ನೋಂದಣಿಗಾಗಿ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಈ ಸಂಘದ ನೋಂದಣಿ ಮಾಡಿಸಿಕೊಡೋದಕ್ಕಾಗಿ 10 ಸಾವಿರ ಲಂಚಕ್ಕೆ ಸಹಕಾರ ಸಂಘಗಗಳ ಉಪ ನಿಬಂಧಕರ ಕಚೇರಿಯ ಹಿರಿಯ ನಿರೀಕ್ಷಕ ಮಂಜುನಾಥ್ ಬೇಡಿಕೆ ಇಟ್ಟಿದ್ದರು.
ಮಂಜುನಾಥ್ ಲಂಚಕ್ಕೆ ಬೇಡಿಕೆ ಇಟ್ಟಂತ ವಿಷಯವನ್ನು ಜಿಲ್ಲಾ ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರ ಸಂಘದಿಂದ ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು. ಈ ದೂರಿನ ಹಿನ್ನಲೆಯಲ್ಲಿ ಇಂದು ಮೊದಲ ಹಂತದಲ್ಲಿ 8 ಸಾವಿರ ಲಂಚವನ್ನು ನೀಡುವ ಸಂದರ್ಭದಲ್ಲಿ, ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಮಂಜುನಾಥ್ ನನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಭಟ್ಕಳದಲ್ಲಿ ‘ಟಿಪ್ಪು ಸುಲ್ತಾನ್’ ಹೆಸರಿನಲ್ಲಿ ಸ್ವಾಗತ ಗೋಪುರ ವಿವಾದ: ಬೂದಿ ಮುಚ್ಚಿದ ಕೆಂಡವಾದ ‘ಕರಾವಳಿ’