ಬೆಂಗಳೂರು : ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ-2, ಬೆಂಗಳೂರು ಗ್ರಾಮಾಂತರ-1, ಚಿತ್ರದುರ್ಗ-1, ದಾವಣಗೆರೆ-2, ಹಾವೇರಿ-2, ಬೀದರ್-1, ಉಡುಪಿ-1, ಬಾಗಲಕೋಟೆ-1 ಮತ್ತು ಹಾಸನ-1 ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಒಟ್ಟು 12 ಸರ್ಕಾರಿ ಅಧಿಕಾರಿಗಳು ತಮ್ಮ ಬಲ್ಲ ಆದಾಯದ ಮೂಲಗಳಿಗಿಂತ ಹೆಚ್ಚು ಅಸಮತೋಲನ ಆಸ್ತಿಯನ್ನು ಹೊಂದಿದ್ದ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತವೆ.
ಈ ಕುರಿತಂತೆ ಕರ್ನಾಟಕ ಲೋಕಾಯುಕ್ತದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ: 14.10.2025 ರಂದು ಆರೋಪಿತ ಸರ್ಕಾರಿ ಅಧಿಕಾರಿಗಳಿಗೆ ಸಂಬಧಿಸಿದ ಮನೆ, ಕಛೇರಿ ಹಾಗೂ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು 48 ಸ್ಥಳಗಳಲ್ಲಿ ಏಕ ಕಾಲಕ್ಕೆ ಶೋಧನಾ ಕಾರ್ಯ ಕೈಗೊಂಡಿದ್ದು, ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಅಸಮತೋಲನ ಆಸ್ತಿ ಹೊಂದಿದ್ದ ಬಗ್ಗೆ ಮಾಹಿತಿ ತಿಳಿದುಬಂದಿರುತ್ತದೆ ಎಂದಿದೆ.
1) ಮಂಜುನಾಥ. ಜಿ, ವೈದ್ಯಾಧಿಕಾರಿಗಳು, ಹೆರಿಗೆ ಆಸ್ಪತ್ರೆ, ಮಲ್ಲಸಂದ್ರ, ಬೆಂಗಳೂರು.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 1 ನಿವೇಶನ, 1 ವಾಸದ ಮನೆ, 1 ಪ್ಲಾಟ್, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 1,85,00,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 10,53,240/- ನಗದು, ರೂ. 31,75,000/- ಬೆಲೆ ಬಾಳುವ ಚಿನ್ನಾಭರಣಗಳು, ರೂ 29,50,000/- ಬೆಲೆ ಬಾಳುವ ವಾಹನಗಳು, ರೂ. 67,35,000/- ಇತರೆ ಮತ್ತು ಗೃಹೋಪಯೋಗಿ ವಸ್ತುಗಳು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 1,39,13,240/-
(ಇ) ಒಟು ಆಸ್ತಿ ಮೌಲ್ಯ- ರೂ. 3,24,13,240/-
2) ವಿ. ಸುಮಂಗಳ, ನಿರ್ದೇಶಕರು, ರಾಜ್ಯ ಶಾಲಾ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ, ಹೊಸಕೆರೆಹಳ್ಳಿ, ಬೆಂಗಳೂರು.(ಹಾಲಿ ಅಮಾನತ್ತು)
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 4 ನಿವೇಶನಗಳು, 5 ವಾಸದ ಮನೆಗಳು, 19 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 5,08,42,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 1,00,50,000/- ಬೆಲೆ ಬಾಳುವ ಚಿನ್ನಾಭರಣಗಳು, ರೂ 22,00,000/- ಬೆಲೆ ಬಾಳುವ ವಾಹನಗಳು, ರೂ 96,73,000/- ಬೆಲೆಬಾಳುವ ಷೇರು ಮತ್ತು ಮ್ಯೂಚುವಲ್ ಫಂಡ್, ರೂ. 4,85,200/- ಬೆಲೆ ಬಾಳುವ ಗೋಲ್ಡ್ ಬಾಂಡ್-ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 2,24,08,200/-
(ಇ) ಒಟು ಆಸ್ತಿ ಮೌಲ್ಯ- ರೂ. 7,32,50,200/-
3) ಎನ್. ಕೆ. ಗಂಗಮರಿಗೌಡ, ಸರ್ವೆಯರ್, ಕೆ.ಐ.ಎ.ಡಿ.ಬಿ, ಬೆಂಗಳೂರು.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 2 ನಿವೇಶನಗಳು, 2 ವಾಸದ ಮನೆಗಳು, 2 ಎಕರೆ ಕೃಷಿ ಜಮೀನು-ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 3,58,15,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 7,73,200/- ನಗದು, ರೂ 51,61,960/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 24,21,752/- ಬೆಲೆಬಾಳುವ ವಾಹನಗಳು ಮತ್ತು ರೂ. 24,83,600/- ಇತರೆ ಮತ್ತು ಗೃಹೋಪಯೋಗಿ ವಸ್ತುಗಳು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 1,08,40,332/-
(ಇ) ಒಟು ಆಸ್ತಿ ಮೌಲ್ಯ- ರೂ 4,66,55,512/-
4)ಎನ್. ಚಂದ್ರಶೇಖರ್, ಕೃಷಿ ಸಹಾಯಕ ನಿರ್ದೇಶಕರು, ಹೊಳಲಕೆರೆ, ಚಿತ್ರದುರ್ಗ ಜಿಲ್ಲೆ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 4 ನಿವೇಶನಗಳು, 3 ವಾಸದ ಮನೆಗಳು, 15 ಎಕರೆ 08 ಗುಂಟೆ ಕೃಷಿ ಜಮೀನು-ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 4,02,00,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 26,100/- ನಗದು, ರೂ 60,39,233/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 18,50,000/- ಬೆಲೆಬಾಳುವ ವಾಹನಗಳು, ರೂ. 33,00,409/- ಬೆಲೆಬಾಳುವ ಇತರೆ ವಸ್ತುಗಳು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 1,12,15,742/-
(ಇ) ಒಟು ಆಸ್ತಿ ಮೌಲ್ಯ- ರೂ 5,14,15,742/-
5) ಜಗದೀಶ ನಾಯ್ಕ. ಕೆ. ಹೆಚ್, ಸಹಾಯಕ ಅಭಿಯಂತರರು, ಕೆ.ಆರ್.ಐ.ಡಿ.ಎಲ್, ದಾವಣಗೆರೆ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 5 ನಿವೇಶನಗಳು, 3 ವಾಸದ ಮನೆ, 17 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 1,55,71,500/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 1,82,625/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 27,00,000/- ಬೆಲೆಬಾಳುವ ವಾಹನಗಳು, ರೂ. 20,00,000/- ಇತರೆ ವಸ್ತುಗಳು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 48,82,625/-
(ಇ) ಒಟು ಆಸ್ತಿ ಮೌಲ್ಯ- ರೂ 2,04,54,125/-
6) ಬಿ. ಎಸ್. ನಡುವಿನ ಮನೆ, ಕಿರಿಯ ಸಹಾಯಕ (ಪ್ರಸ್ತುತ ಹಿರಿಯ ಸಹಾಯಕ), ಕರ್ನಾಟಕ ಆಹಾನ ಮತ್ತು ನಾಗರೀಕ ಸರಬರಾಜು ನಿಗಮ, ದಾವಣಗೆರೆ ಜಿಲ್ಲೆ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 7 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 1 ನಿವೇಶನ, 4 ವಾಸದ ಮನೆಗಳು, 20 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 1,70,79,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 60,554/- ನಗದು, ರೂ. 16,25,130/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 42,90,000/- ಬೆಲೆಬಾಳುವ ವಾಹನಗಳು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 59,75,684/-
(ಇ) ಒಟು ಆಸ್ತಿ ಮೌಲ್ಯ- ರೂ 2,30,54,684/-
7)ಬಸವೇಶ ಶಿವಪ್ಪ ಶಿಡೆನೂರ, ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ, ಸವಣೂರು ತಾಲ್ಲೂಕು ಪಂಚಾಯಿತಿ, ಹಾವೇರಿ ಜಿಲ್ಲೆ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 2 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 6 ನಿವೇಶನಗಳು, 1 ವಾಸದ ಮನೆ, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 65,07,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 4,450/- ನಗದು, ರೂ. 48,97,279/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 13,00,000/- ಬೆಲೆಬಾಳುವ ವಾಹನಗಳು, ರೂ. 40,10,000/- ಇತರೆ ವಸ್ತುಗಳು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 10211729/-
(ಇ) ಒಟು ಆಸ್ತಿ ಮೌಲ್ಯ- ರೂ 1,67,18,729/-
8)ಅಶೋಕ್ ಶಂಕರಪ್ಪ ಅರಳೇಶ್ವರ್, ರಾಜಸ್ವ ನಿರೀಕ್ಷಕರು, ತಾಲ್ಲೂಕು ಕಛೇರಿ, ರಾಣೆಬೆನ್ನೂರು ತಾಲ್ಲೂಕು, ಹಾವೇರಿ ಜಿಲ್ಲೆ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 2 ನಿವೇಶನಗಳು, 2 ವಾಸದ ಮನೆಗಳು, 11 ಎಕರೆ 20 ಗುಂಟೆ ಕೃಷೀ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 1,26,06,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 1,45,650/- ನಗದು, ರೂ. 26,02,812/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 15,00,000/- ಬೆಲೆಬಾಳುವ ವಾಹನಗಳು, ರೂ. 57,42,000/- ಇತರೆ ವಸ್ತುಗಳು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 99,90,462/-
(ಇ) ಒಟು ಆಸ್ತಿ ಮೌಲ್ಯ- ರೂ 2,25,96,462/-
9) ಧೂಳಪ್ಪ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಔರದ್, ಬೀದರ್ ಜಿಲ್ಲೆ
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 2 ನಿವೇಶನಗಳು, 1 ವಾಸದ ಮನೆ, 33 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 1,82,87,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 83,09,000/- ನಗದು, ರೂ 5,02,500/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 43,77,000/- ಬೆಲೆಬಾಳುವ ವಾಹನಗಳು, ರೂ. 24,60,000/- ಇತರೆ ವಸ್ತುಗಳು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 1,56,48,500/-
(ಇ) ಒಟು ಆಸ್ತಿ ಮೌಲ್ಯ- ರೂ 3,39,35,500/-
10) ಲಕ್ಷ್ಮೀ ನಾರಾಯಣ ಪಿ ನಾಯಕ್, ಆರ್.ಟಿ.ಓ, ಉಡುಪಿ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 3 ನಿವೇಶನಗಳು, 2 ವಾಸದ ಮನೆಗಳು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 47,50,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 1,15,000/- ನಗದು, ರೂ. 5,10,000/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 1,67,39,234/- ಇತರೆ (ಫೋನ್, ಎನ್.ಆರ್.ಐ ಬ್ಯಾಂಕ್ ಬ್ಯಾಲೆನ್ಸ್, ಎಫ್‌ಡಿ ಹಾಗೂ ಬ್ರೋಕರ್ ಆಫೀಸ್), ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 1,73,64,234/-
(ಇ) ಒಟು ಆಸ್ತಿ ಮೌಲ್ಯ- ರೂ 2,21,14,234/-
11) ಚೇತನ್, ಕಿರಿಯ ಅಭಿಯಂತರರಿ, ಕೆ.ಬಿ.ಜೆ.ಎನ್.ಎಲ್, ಎ.ಆರ್.ಬಿ.ಸಿ, ವಿಭಾಗ-2, ಕಮಟಗಿ, ಬಾಗಲಕೋಟೆ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 2 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 4 ನಿವೇಶನಗಳು, 1 ವಾಸದ ಮನೆ-ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 1,20,00,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 36,200/- ನಗದು, ರೂ. 24,81,360/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 20,00,000/- ಬೆಲೆಬಾಳುವ ವಾಹನಗಳು, ರೂ. 2,11,214/- ಬ್ಯಾಂಕ್ ಬ್ಯಾಲೆನ್ಸ್-ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 47,28,774/-
(ಇ) ಒಟು ಆಸ್ತಿ ಮೌಲ್ಯ- ರೂ 1,67,28,774/-
12)ಜ್ಯೋತಿ ಮೇರಿ, ಪ್ರಥಮ ದರ್ಜೆ ಸಹಾಯಕರು, ಅಕೌಂಟ್ ಶಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಸನ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 3 ನಿವೇಶನಗಳು, 1 ವಾಸದ ಮನೆ, 5 ಎಕರೆ 20 ಗುಂಟೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 1,12,53,425/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 15,09,490/- ನಗದು, ರೂ. 15,31,848/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 64,53,000/- ಬೆಲೆಬಾಳುವ ವಾಹನಗಳು, ರೂ. 10,00,000/- ಇತರೆ ವಸ್ತುಗಳು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 1,04,94,338/-
(ಇ) ಒಟು ಆಸ್ತಿ ಮೌಲ್ಯ- ರೂ 2,17,47,763/-
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು