ಬೆಂಗಳೂರು: ರಾಜ್ಯಾಧ್ಯಂತ ಇಂದು ಲೋಕಾಯುಕ್ತ ಪೊಲೀಸರು ಭ್ರಷ್ಟ ಸರ್ಕಾರಿ ಅಧಿಕಾರಿಗಳನ್ನು ಬೇಟೆಯಾಡಿದ್ದಾರೆ. ಅಲ್ಲದೇ 11 ಭ್ರಷ್ಟರ ಬಳಿಯಲ್ಲಿ ಅಸಮತೋಲನ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಲೋಕಾಯುಕ್ತದಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಬೆಳಗಾವಿ, ದಾವಣಗೆರೆ, ಧಾರವಾಡ, ಚಿತ್ರದುರ್ಗ, ಮಂಡ್ಯ, ಕೋಲಾರ, ಮೈಸೂರು, ಹಾಸನ ಮತ್ತು ಕಲಬುರಗಿ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಒಟ್ಟು 11 ಸರ್ಕಾರಿ ಅಧಿಕಾರಿಗಳು ತಮ್ಮ ಬಲ್ಲ ಆದಾಯದ ಮೂಲಗಳಿಗಿಂತ ಹೆಚ್ಚು ಅಸಮತೋಲನ ಆಸ್ತಿಯನ್ನು ಹೊಂದಿದ್ದ ಬಗ್ಗೆ 11 ಪ್ರಕರಣಗಳು ದಾಖಲಾಗಿರುತ್ತವೆ ಎಂದಿದೆ.
ಈ ದಿನ ದಿನಾಂಕ: 11.07.2024 ರಂದು ಆರೋಪಿತ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಕಛೇರಿ ಹಾಗೂ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು 56 ಸ್ಥಳಗಳಲ್ಲಿ ಏಕ ಕಾಲಕ್ಕೆ ಶೋಧನಾ ಕಾರ್ಯ ಕೈಗೊಂಡಿದ್ದು, ಶೋಧನಾ ಸಮಯದಲ್ಲಿ ಅಸಮತೋಲನ ಆಸ್ತಿ ಹೊಂದಿದ್ದ ಬಗ್ಗೆ ಮಾಹಿತಿ ತಿಳಿದುಬಂದಿರುತ್ತದೆ ಅಂತ ತಿಳಿಸಿದೆ.
ಹೀಗಿದೆ 11 ಭ್ರಷ್ಟ ಸರ್ಕಾರಿ ಅಧಿಕಾರಿಗಳ ಬಳಿ ದೊರೆತ ಅಸಮತೋಲನ ಆಸ್ತಿಯ ಮೌಲ್ಯದ ಮಾಹಿತಿ
1) ಡಿ. ಮಹದೇವ ಬನ್ನೂರ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ, ಬೆಳಗಾವಿ
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 3 ವಾಸದ ಮನೆಗಳು, ಎಲ್ಲಾ ಸೇರಿ ಒಟ್ಟು ಮೌಲ್ಯ
1,00,50,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 1,84,122/- 20, 20. 20,33,526/- ಬೆಲೆ ಬಾಳುವ ಚಿನ್ನಾಭರಣಗಳು, 7,50,000/- ರೂ ಬೆಲೆ ಬಾಳುವ ವಾಹನಗಳು, ಎಲ್ಲಾ ಸೇರಿ ಒಟ್ಟು ಮೌಲ್ಯ 29,67,648/-
(ಇ) ಒಟು ಮೌಲ್ಯ- ರೂ. 97,51,648/-
2) ಡಿ. ಹೆಚ್. ಉಮೇಶ್, ಕಾರ್ಯಪಾಲಕ ಅಭಿಯಂತರರು(ವಿ), ಕೆ.ಪಿ.ಟಿ.ಸಿ.ಎಲ್, ಚಿಕ್ಕಮಗಳೂರು.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 4 ನಿವೇಶನಗಳು, 4 ವಾಸದ ಮನೆಗಳು, 2 ಎಕರೆ ಕೃಷಿ ಜಮೀನು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 4,83,00,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ ರೂ. 40,00,000/- ಬೆಲೆ ಬಾಳುವ ಚಿನ್ನಾಭರಣಗಳು, ರೂ 15,00,000/- ಬೆಲೆಬಾಳುವ ವಾಹನಗಳು, ಎಲ್ಲಾ ಸೇರಿ ಒಟ್ಟು ಮೌಲ್ಯ 55,00,000/-
(ಇ) ಒಟು ಮೌಲ್ಯ 5,38,00,000/-
3) ಎಸ್. ಪ್ರಭಾಕರ್, ಸಹಾಯಕ ಕಾರ್ಯಪಾಲಕ ಅಭಿಯಂತರರು(ವಿ), ಬೆಸ್ಕಾಂ ವಿಜಿಲೆನ್ಸ್ ಪೊಲೀಸ್ ಠಾಣೆ, ದಾವಣಗೆರೆ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 2 ನಿವೇಶನಗಳು, 2 ವಾಸದ ಮನೆಗಳು, 4 ಎಕರೆ 33 ಗುಂಟೆ ಕೃಷಿ ಜಮೀನು, ಒಟ್ಟು ಮೌಲ್ಯ ರೂ. 1,57,97,391/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 3,00,000/- ನಗದು, ರೂ. 30,00,000/- ಬೆಲೆ ಬಾಳುವ ಚಿನ್ನಾಭರಣಗಳು, ರೂ 50,000/- ಬೆಲೆಬಾಳುವ ವಾಹನಗಳು, ರೂ 10,00,000/- ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು. ಎಲ್ಲಾ ಸೇರಿ ಒಟ್ಟು ಮೌಲ್ಯ 4,35,00,00/-
(ಇ)ಒಟು ಮೌಲ್ಯ 2,01,47,391/-
4) ಶೇಖರ್ ಗೌಡ ಹನುಮಗೌಡ ಕುರಡಗಿ, ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ, ಬೆಳಗಾವಿ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 7 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ 5 ನಿವೇಶನ, 4 ವಾಸದ ಮನೆಗಳು, 83 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 6,73,18,999/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 1,65,000/- BAD, Lo. 16,90,000/- ಬೆಲೆ ಬಾಳುವ ಚಿನ್ನಾಭರಣಗಳು, ರೂ 8,35,000/- ಬೆಲೆಬಾಳುವ ವಾಹನಗಳು, ರೂ 88,17,645/- ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು. ಎಲ್ಲಾ ಸೇರಿ ಒಟ್ಟು ಮೌಲ್ಯ 1,15,07,645/-
(ಇ) ಒಟು ಮೌಲ್ಯ 7,88,26,644/-
5) ಎಂ. ರವೀಂದ್ರ, ಮುಖ್ಯ ಅಭಿಯಂತರರು(ನಿವೃತ್ತ), ಲೋಕೋಪಯೋಗಿ ಇಲಾಖೆ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ 4 ನಿವೇಶನಗಳು, 6 ವಾಸದ ಮನೆ, 49-16 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 3,92,55,000/-
ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 37,500/- ನಗದು, ರೂ. 83,00,000/- ಬೆಲೆ ಬಾಳುವ ಚಿನ್ನಾಭರಣಗಳು, ರೂ 1,00,00,000/- ಬೆಲೆಬಾಳುವ ವಾಹನಗಳು, ರೂ 50,00,000/- ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು. ಎಲ್ಲಾ ಸೇರಿ ಒಟ್ಟು ಮೌಲ್ಯ 23337500/-
(ಇ) ಒಟು ಮೌಲ್ಯ- ರೂ 5,75,55,000/-
6) ಕೆ. ಜಿ. ಜಗದೀಶ, ಮುಖ್ಯ ಅಭಿಯಂತರರು, ಲೋಕೋಪಯೋಗಿ ಇಲಾಖೆ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 5 ನಿವೇಶನಗಳು, 7 ವಾಸದ ಮನೆಗಳು, 36- 20 ಎಕರೆ ಕೃಷಿ ಜಮೀನು. ಒಟ್ಟು ಮೌಲ್ಯ ರೂ. 5,01,80,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 2,400/- ನಗದು, ರೂ. 3,11,302/- ಬೆಲೆ ಬಾಳುವ ಚಿನ್ನಾಭರಣಗಳು, ರೂ 18,0೦,೦೦೦/- ಬೆಲೆಬಾಳುವ ವಾಹನಗಳು, ರೂ 3,50,000/- ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು. ಎಲ್ಲಾ ಸೇರಿ ಒಟ್ಟು
24,61,302/-
(ಇ) ಒಟು ಮೌಲ್ಯ- ರೂ 5,26,41,302/-
7) ಶಿವರಾಜು. ಎಸ್, ಕಾರ್ಯಪಾಲಕ ಅಭಿಯಂತರರು(ನಿವೃತ್ತ), ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಮಂಡ್ಯ ಜಿಲ್ಲೆ,
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 3 ನಿವೇಶನ, 3 ವಾಸದ ಮನೆಗಳು, 10 ಎಕರೆ ಕೃಷಿ ಜಮೀನು, ಒಟ್ಟು ಮೌಲ್ಯ ರೂ. 2,91,04,500/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ ರೂ. 6,00,000/- ನಗದು, ರೂ. 8,00,000/- ಬೆಲೆ ಬಾಳುವ ಚಿನ್ನಾಭರಣಗಳು, ರೂ 90,00,000/- ಬೆಲೆಬಾಳುವ ವಾಹನಗಳು, ರೂ 2,06,48,500/- ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು. ಎಲ್ಲಾ ಸೇರಿ ಒಟ್ಟು ಮೌಲ್ಯ 3,05,48,590/-,
(ಇ) ಒಟು ಮೌಲ್ಯ- ರೂ 5,08,38,000/-
8) ವಿಜಯಣ್ಣ, ತಹಶೀಲ್ದಾರ್, ಹಾರೋಹಳ್ಳಿ ತಾಲ್ಲೂಕು, ರಾಮನಗರ ಜಿಲ್ಲೆ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 9 ವಾಸದ ಮನೆಗಳು, 13 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 2,53,98,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ ರೂ. 2,42,000/- ನಗದು, ರೂ. 22,57,000/- ಬೆಲೆ ಬಾಳುವ ಚಿನ್ನಾಭರಣಗಳು, ರೂ 43,15,000/- ಬೆಲೆಬಾಳುವ ವಾಹನಗಳು, ರೂ. 34,00,000/- ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಮತ್ತು ಇತರೆ, ಎಲ್ಲಾ ಸೇರಿ ಒಟ್ಟು ಮೌಲ್ಯ 1,02,14,000/-
(ಇ) ಒಟು ಮೌಲ್ಯ 2,45,46,000/-
9) ಮಹೇಶ್ ಕೆ, ಅಧೀಕ್ಷಕ ಅಭಿಯಂತರರು, ಕುನಿ ಮತ್ತು ವರುಣ ನಾಲಾ ವೃತ್ತ, ಮೈಸೂರು.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 3 ನಿವೇಶನ, 3 ವಾಸದ ಮನೆಗಳು, 11 ಎಕರೆ 20 ಗುಂಟೆ ಕೃಷಿ ಜಮೀನು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 3,93,00,000/- (ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ ರೂ. 22,80,705/- ಬೆಲೆ ಬಾಳುವ ಚಿನ್ನಾಭರಣಗಳು, ರೂ 4,00,000/- ಬೆಲೆಬಾಳುವ ವಾಹನಗಳು, ರೂ. 76,00,000/- ಬೆಲೆಬಾಳುವ ಇತರೆ ವಸ್ತುಗಳು- ಎಲ್ಲಾ ಸೇರಿ ಒಟ್ಟು ಮೌಲ್ಯ 50,00,000/-
(ಇ) ಒಟು ಮೌಲ್ಯ 3,79,00,000/-
10) ಎನ್. ಎಂ. ಜಗದೀಶ್, ಗ್ರೇಡ್-1 ಕಾರ್ಯದರ್ಶಿ, ದಾಸನಪುರ ಗ್ರಾಮ ಪಂಚಾಯಿತಿ, ಬೆಂಗಳೂರು.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 3 ವಾಸದ ಮನೆ, 2 ಎಕರೆ 28 ಗುಂಟೆ ಕೃಷಿ ಜಮೀನು. ಎಲ್ಲಾ ಸೇರಿ ww we do. 2,04,68,000/-
ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 28,00,000/- ನಗದು, 1,21,70,000/- ಬೆಲೆ ಬಾಳುವ ಚಿನ್ನಾಭರಣಗಳು, ರೂ 33,90,000/- ಬೆಲೆಬಾಳುವ ವಾಹನಗಳು, ರೂ 10,00,000/- ರೂ ಬೆಲೆಬಾಳುವ ಇತರೆ ಮತ್ತು ಗೃಹೋಪಯೋಗಿ ವಸ್ತುಗಳು. ಎಲ್ಲಾ ಸೇರಿ ಒಟ್ಟು ಮೌಲ್ಯ 1,18,00,000/-
(ಇ) ಒಟು ಮೌಲ್ಯ- 3,22,68,000/-
11) ಬಸವರಾಜ ಮಗಿ, ಕಂದಾಯಾಧಿಕಾರಿಗಳು, ಮಹದೇವಪುರ ವಿಭಾಗ, ಬಿಬಿಎಂಪಿ, ಬೆಂಗಳೂರು.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 11 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 15 ನಿವೇಶನಗಳು, 2 ವಾಸದ ಮನೆಗಳು, 32 ಎಕರೆ 20 ಗುಂಟೆ ಕೃಷಿ ಜಮೀನು. ಎಲ್ಲಾ ಸೇರಿ ಒಟ್ಟು ಮೌಲ್ಯ do. 3,08,30,000/- (ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 2,32,410/- ನಗದು, 59,40,830/- ಬೆಲೆ ಬಾಳುವ ಚಿನ್ನಾಭರಣಗಳು ಎಲ್ಲಾ ಸೇರಿ ಒಟ್ಟು ಮೌಲ್ಯ 61,73,240/- (583 ಕ್ಯಾಸಿನೋ
ಕಾಯಿನ್ಸ್)
(ಇ) ಒಟು ಮೌಲ್ಯ 3,31,70,830/-
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
‘ಲೈನ್ ಮೆನ್’ಗಳಿಗೆ ಗುಡ್ ನ್ಯೂಸ್: 15 ದಿನಗಳಲ್ಲಿ ಏಕಕಾಲಕ್ಕೆ ‘ವರ್ಗಾವಣೆ’ಗೆ ಅಧಿಸೂಚನೆ ಪ್ರಕಟ