ಹಾವೇರಿ: ಜಿಲ್ಲೆಯ ಹಾನಗಲ್ ತಹಶೀಲ್ದಾರ್ ಕಚೇರಿಯಲ್ಲಿ 12,000 ಲಂಚದ ಹಣವನ್ನು ಪಡೆಯುತ್ತಿದ್ದಂತ ವೇಳೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ಮೂಲಕ ಶಿರಸ್ತೇದಾರ ಹಾಗೂ ಇಬ್ಬರು ದ್ವಿತೀಯ ದರ್ಜೆ ಸಹಾಯಕರನ್ನು ಬಂಧಿಸಿದ್ದಾರೆ.
ಹಾವೇರಿ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ನವೀನ ಬಸವನಗೌಡ ಪಾಟೀಲ್ ಎಂಬುವರು ಪಹಣಿ ಪತ್ರ ಅಂದರೆ ಆರ್ ಟಿ ಸಿ ತಿದ್ದುಪಡಿ ಮಾಡಲು ಹಾನಗಲ್ ತಹಶೀಲ್ದಾರರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ತಿದ್ದುಪಡಿ ಮಾಡಲು ಹಾನಗಲ್ ತಹಶೀಲ್ದಾರ್ ಕಚೇರಿಯ ಶಿರಸ್ತೆದಾರರು, ಇಬ್ಬರು ಎಸ್ ಡಿ ಎ 12,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಹಿನ್ನಲೆಯಲ್ಲಿ ನವೀನ ಬಸವನಗೌಡ ಪಾಟೀಲ್ ಎಂಬುವರು ಹಾವೇರಿ ಜಿಲ್ಲಾ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಇಂದು 12,000 ಲಂಚದ ಹಣ ಸ್ವೀಕರಿಸುತ್ತಿದ್ದಾಗ ಹಾವೇರಿ ತಹಶೀಲ್ದಾರರ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಈ ದೇಳಿಯ ಸಂದರ್ಭದಲ್ಲಿ 12,000 ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ಹಾನಗಲ್ ತಹಶೀಲ್ದಾರರ ಕಚೇರಿಯಲ್ಲಿ ಶಿರಸ್ತೆದಾರ ತಮ್ಮಣ್ಣ ಕಾಂಬಳೆ, ಎಸ್ ಡಿಎ ಗೂಳಪ್ಪ ಮನಗೂಳಿ ಹಾಗೂ ಕೃತ್ಯಕ್ಕೆ ಸಹಕರಿಸಿದಂತ ಮತ್ತೊಬ್ಬ ಎಸ್ ಡಿಎ ಶಿವಾನಂದ ಬಡಿಗೇರ ಎಂಬುವರನ್ನು ಬಂಧಿಸಿಸಲಾಗಿದೆ.
ಅಂದಹಾಗೇ ನವೀನ್ ಅವರ ಪರಿಚಯಸ್ಥರಾದ ಶಂಕ್ರಪ್ಪ ಗುಮಗುಂಡಿ ಅವರ ಕೆಡಿಟಿ ಪ್ರಕಾರ ಪಹಣಿ ಪತ್ರ ತಿದ್ದುಪಡಿಗಾಗಿ ತಹಶೀಲ್ದಾರರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು ಆರೋಪಿಗಳು 12,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಹಾನಗಲ್ ತಹಶೀಲ್ದಾರರ ಕಚೇರಿಯಲ್ಲೇ ಲಂಚದ ಹಣ ಪಡೆಯುತ್ತಿದ್ದಾಗ ಮೂವರನ್ನು ಬಂಧಿಸಲಾಗಿದೆ.
ಚಿತ್ತಾಪುರದ ಪಥಸಂಚಲನಕ್ಕೆ ಅನುಮತಿ ನಿರಾಕರಣೆಗೆ ಛಲವಾದಿ ನಾರಾಯಣಸ್ವಾಮಿ ಆಕ್ಷೇಪ
ಬೆಂಗಳೂರು ಜನತೆಗೆ ಗಮನಕ್ಕೆ: ‘ಬನಶಂಕರಿ ವಿದ್ಯುತ್ ಚಿತಾಗಾರ’ ತಾತ್ಕಾಲಿಕವಾಗಿ ಸ್ಥಗಿತ