ಧಾರವಾಡ : ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿಯ ವೇಳೆ 8 ಸಾವಿರ ಲಂಚ ಪಡೆಯುವಾಗ ಡೆಪ್ಯೂಟಿ ಮ್ಯಾನೇಜರ್ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಅಗಿ ಬಲೆಗೆ ಬಿದ್ದಿದ್ದಾನೆ.
ಹೌದು ಧಾರವಾಡ ನಗರದ ರಾಯಪುರ ಬಡಾವಣೆಯಲ್ಲಿರುವ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಕಚೇರಿಯ ಮೇಲೆ 8 ಸಾವಿರ ಲಂಚ ಪಡೆಯುವಾಗ ಬೆಳಗ್ಗೆ ಬಿದ್ದ ಅಧಿಕಾರಿ ಡೆಪ್ಯೂಟಿ ಮ್ಯಾನೇಜರ್ ರಮೇಶ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ . ವಾಹನ ಸಾಲಕ್ಕಾಗಿ ಹಾವೇರಿಯ ಪ್ರವೀಣ ಮಾಳಗಿ ಎಂಬಾತ ಅರ್ಜಿ ಹಾಕಿದ್ದ ಎನ್ನಲಾಗಿದೆ.
ಈ ವೇಳೆ ಕಾನೂನು ಸಲಹೆ ಕೊಡಲು ರಮೇಶ್ ಎಂಟು ಸಾವಿರ ಬೇಡಿಕೆಯನ್ನು ಇಟ್ಟಿದ್ದ ಇಂದು 8,000 ಲಂಚ ಪಡೆಯುವಾಗ ಅಧಿಕಾರಿ ಬಲೆಗೆ ಬಿದ್ದಿದ್ದಾನೆ. ಧಾರವಾಡ ಲೋಕಾಯುಕ್ತ ಎಸ್ ಪಿ ಶಂಕರ್ ರಾಗೇ ನೇತೃತ್ವದಲ್ಲಿ ಈ ಒಂದು ದಾಳಿ ನಡೆದಿದೆ.