ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಪೋನ್ ಪೇ ಮೂಲಕ 5000 ಸಾವಿರ ಲಂಚ ಪಡೆದಿದ್ದಂತ ಭ್ರಷ್ಟ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದಗ್ದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮೈಲನಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್ ಎಂಬ ಭ್ರಷ್ಟ ಅಧಿಕಾರಿಯೇ ಪೋನ್ ಪೇ ಮೂಲಕ 5000 ಲಂಚ ಪಡೆದು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿರುವಂತವರಾಗಿದ್ದಾರೆ.
ಜಮೀನಿನ ಖಾತಾ ಬದಲಾವಣೆಗಾಗಿ ಮಂಜುನಾಥ್ ಎಂಬುವರಿಗೆ 25,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಣದಲ್ಲಿ ಮುಂಗಡವಾಗಿ ರೂ.5,000 ಲಂಚದ ಹಣವನ್ನು ಪೋನ್ ಪೇ ಮೂಲಕ ಗ್ರಾಮ ಲೆಕ್ಕಿಗ ಶಿವಕುಮಾರ್ ಪಡೆದಿದ್ದರು.
ಭ್ರಷ್ಟ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್ ವಿರುದ್ಧ ಮಂಜುನಾಥ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಪೋನ್ ಪೇ ಮೂಲಕ ಲಂಚದ ಹಣವನ್ನು ಪಡೆದಿದ್ದಂತ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್ ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
‘ಅಶ್ಲೀವ ವಿಡಿಯೋ’ ಕೇಸ್: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ‘ಅರೆಸ್ಟ್ ವಾರೆಂಟ್’ ಜಾರಿ
ಬೆಂಗಳೂರಿನ ಈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ.22ರ ಬೆಳಿಗ್ಗೆ 6ರಿಂದ 23ರ ಸಂಜೆ 6ರವರೆಗೆ ‘ಮದ್ಯ ಮಾರಾಟ’ ನಿಷೇಧ