ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ:ಲೊಕಾಯುಕ್ತ ನ್ಯಾಯಮೂರ್ತಿ ಶ್ರೀ. ಟಿ.ಎಸ್. ಪಾಟೀಲ್ ಅವರು  ವಿಜಯಪುರಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಸಾರಿಗೆ ಇಲಾಖೆಯ ಚೆಕ್‌ ಪೋಸ್ಟ್‌ಗಳಲ್ಲಿ ನಡೆಯುತ್ತಿರುವ ಅವ್ಯವಹಾರ ಹಾಗೂ ಅಕ್ರಮಗಳ ಬಗ್ಗೆ ಮೌಖಿಕವಾಗಿ ದೂರು ನೀಡಿದ್ದರ ಮೇರೆಗೆ  ಸ್ವಯಂಪ್ರೇರಿತ ದೂರನ್ನು ದಾಖಲಿಸಿಕೊಂಡು ಇಂದು ಏಕಕಾಲದಲ್ಲಿ ರಾಜ್ಯದ ಒಂಬತ್ತು ಕಡೆ ದಾಳಿ ನಡೆಸಿ ಹೆಚ್ಚುವರಿ ಹಣ ವಶಪಡಿಸಿಕೊಂಡು ಮುಂದಿನ ಕ್ರಮ     ಕೈಗೊಂಡಿದ್ದಾರೆ.          

 

   ಲೋಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳ ಮುಖಾಂತರ ಗೌಪ್ಯ ತನಿಖೆಯನ್ನು ನಡೆಸಿ ವರದಿಗಳನ್ನು ಪಡೆದುಕೊಂಡ ನಂತರ ಸಾರಿಗೆ ಇಲಾಖೆ ಚೆಕ್ ಪೋಸ್ಟ್‌ಗಳಲ್ಲಿ ಅವ್ಯವಹಾರಗಳು ಹಾಗೂ ಅಕ್ರಮಗಳು ಅವ್ಯಾಹತವಾಗಿ ನಡೆಯುತ್ತಿರುವ ಅಂಶವನ್ನು ಮನಗಂಡು ಚೆಕ್ ಪೊಸ್ಟ್‌ಗಳ ಮೇಲೆ ಶೋಧನೆ ನಡೆಸುವುದು ಅವಶ್ಯಕವೆಂದು ಪರಿಗಣಿಸಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪೊಲೀಸ್ ಅಧಿಕಾರಿಗಳಗೆ, 28,09,2022ರಂದು ಕರ್ನಾಟಕ ಲೋಕಾಯುಕ್ತ ಕಾಯ್ದ ಕಲಂ 10ರನ್ವಯ ದವಾ ವಾರೆಂಟ್‌ಗಳನ್ನ ನೀಡಿ ಶೋಧನೆ ನಡೆಸಲು ಸೂಚಿಸಿದ್ದರು. ಅದರಂತೆ ಚೆಕ್ ಪೋಸ್ಟ್‌ಗಳಲ್ಲಿ ಇಂದು (30.09.2022) ನಸುಕಿನ ಜಾವ 4:30 ಗಂಟೆಯಿಂದ ಶೋಧನೆಯನ್ನು  ರಾಜ್ಯದ ವಿವಿದೆಡೆ ಏಕಕಾಲಕ್ಕೆ ನಡೆಸಿದ್ದು, ಚೆಕ್ ಪೋಸ್ಟ್‌ಗಳಲ್ಲಿ ಅಕ್ರಮ ಹಾಗೂ ಅವ್ಯವಹಾರಗಳು ನಡೆದಿರುವುದನ್ನು ದಾಖಲು ಮಾಡಿಕೊಂಡಿದ್ದಾರೆ.ಅಲ್ಲದೆ  ಚೆಕ್ ಪೋಸ್ಟ್ ಗಳಲ್ಲಿ, ಶೋಧನೆ ಮಾಡಿದ ಸಂದರ್ಭ ಅಕ್ರಮ ಹಣ (unaccounted money) ಪತ್ತೆಯಾಗಿರುವುದು ಕಂಡುಬಂದಿದೆ.

 ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೋಕಿನ ಪಟಣದ ಐಬಿ ಹತ್ತಿರ ಇರುವ ಆರ್ಟಿಓ  ಚೆಕ್ ಪೊಸ್ಟ್ ತಲಾಸಣೆ ಮಾಡಿ    ರೂ.೯೭೭೯ ರೂ ಅಕ್ರಮ   ಹಣ ಜಪ್ತಿ ಮಾಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ಮೈಸೂರು ಲೊಕಾಯುಕ್ತ ಎಸ್ಪಿ ಸುರೇಶ್ ಬಾಬು. ಡಿವೈಸ್ಪಿಗಳಾದ ಸಣ್ಣತಮ್ಮಪ್ಪ ಒಡೆಯಾರ್, ಮಾಲ್ತೇಶ್, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಲೋಕೇಶ್, ರವಿಕುಮಾರ್, ಜಯರತ್ನ, ಪೊಲೀಸ್  ಸಿಬ್ಬಂದಿಗಳಾದ ಲೊಕೇಶ್, ಗೋಪಿ, ರಮೇಶ್, ಮಹಾಲಿಂಗಸ್ವಾಮಿ ಇತರರು ಭಾಗವಹಿಸಿದ್ದರು.ರಾಜ್ಯದ ವಿವಿದೆಡೆಯಲ್ಲಿ ನಡೆದ ಈ ಕಾರ್ಯಚರಣೆ ಮೇಲುಸ್ತುವಾರಿಯನ್ನು  ಲೋಕಾಯುಕ್ತ ಪೊಲೀಸ್ ಮಹಾನಿರ್ದೇಶಕರಾದ ಪ್ರಶಾಂತ್ ಕುಮಾರ್ ಅವರು ವಹಿಸಿಕೊಂಡಿದ್ದರು.

Share.
Exit mobile version