ಬೆಂಗಳೂರು: ರಾಜ್ಯದಲ್ಲೇ ಅತಿಹೆಚ್ಚು ಎನ್ನುವಂತೆ ಕಳೆದ 7 ವರ್ಷಗಳಲ್ಲೇ ಅತ್ಯಧಿಕ ದಾಖಲೆಯ 46.7 ಡಿಗ್ರಿ ಸೆಲ್ಸಿಯಸ್ ತಾಪಮಾನ ಇಂದು ದಾಖಲಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಕಳೆದ 7 ವರ್ಷಗಳಲ್ಲೇ ಅತ್ಯಧಿಕ ಎನ್ನುವಷ್ಟು 46.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಮಾಹಿತಿ ಹಂಚಿಕೊಂಡಿರುವಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು, ಮೇ 02 ರಂದು ಕರ್ನಾಟಕ ರಾಜ್ಯದಲ್ಲಿ ದಾಖಲಾದ ಗರಿಷ್ಠ ತಾಪಮಾನದ ವರ್ಷವಾರು (2017-2024) ಹೋಲಿಕೆ. ಕಳೆದ 7 ವರ್ಷಕ್ಕೆ ಹೋಲಿಸಿದರೆ 46.7˚C ಅತಿ ಹೆಚ್ಚು ತಾಪಮಾನ ದಾಖಲಾಗಿದೆ ಎಂದು ತಿಳಿಸಿದೆ.

ಕೆಎಸ್ ಡಿಎಂಸಿ ನೀಡಿರುವಂತ ಮಾಹಿತಿಯ ಅಂಕಿ ಅಂಶಗಳ ಪ್ರಕಾರ 2017ರಲ್ಲಿ 42.30 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. 2018ರಲ್ಲಿ 45, 2019ರಲ್ಲಿ 43.70, 2020ರಲ್ಲಿ 41.90, 2021ರಲ್ಲಿ41.90, 2022ರಲ್ಲಿ 44.70, 2023ರಲ್ಲಿ 38.80 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಆದ್ರೇ 2024ರ ಮೇ.1ರ ಬೆಳಿಗ್ಗೆ 8.30ರಿಂದ ಮೇ.2ರ ಬೆಳಿಗ್ಗೆ 8.30ರವರೆಗೆ 49.70 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದಿದೆ.

ಮಂತ್ರಿಗಳೆ ನಿಮ್ಮ ಒಂದು ವರ್ಷದ ಸಾಧನೆ ಏನು?: ಬಸವರಾಜ ಬೊಮ್ಮಾಯಿ ಪ್ರಶ್ನೆ

Prajwal Revanna: ಪ್ರಜ್ವಲ್ ರೇವಣ್ಣ ವೀಡಿಯೋ ಬಿಡುಗಡೆಗೆ ಕ್ಷಣಗಣನೆ, 8AM: ಏ.8ರಂದೇ ‘ಫೇಸ್ ಬುಕ್’ನಲ್ಲಿ ‘ನವೀನ್ ಗೌಡ ಪೋಸ್ಟ್’

Share.
Exit mobile version