ನವದೆಹಲಿ : 2000 ಮುಖಬೆಲೆಯ ನೋಟುಗಳ ಪೈಕಿ ಶೇ.97.76ರಷ್ಟು ನೋಟುಗಳು ವಾಪಸ್ ಬಂದಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಶುಕ್ರವಾರ ತಿಳಿಸಿದೆ. ಮೌಲ್ಯದ ದೃಷ್ಟಿಯಿಂದ, 2023ರ ಮೇ 19 ರಂದು ವ್ಯವಹಾರದ ಅಂತ್ಯದ ವೇಳೆಗೆ 3.56 ಲಕ್ಷ ಕೋಟಿ ರೂ.ಗಳಷ್ಟಿದ್ದ 2,000 ರೂ.ಗಳ ನೋಟುಗಳು ಈಗ 7,961 ಕೋಟಿ ರೂ.ಗೆ ಇಳಿದಿದೆ.

ಮೇ 19, 2023 ರಂದು ಆರ್ಬಿಐ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನ ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು.

ಮೇ 19, 2023 ರಂದು 2000 ರೂ.ಗಳ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದಾಗ ವ್ಯವಹಾರದ ಕೊನೆಯಲ್ಲಿ 3.56 ಲಕ್ಷ ಕೋಟಿ ರೂ.ಗಳಷ್ಟಿದ್ದ ಚಲಾವಣೆಯಲ್ಲಿರುವ 2000 ರೂ.ಗಳ ನೋಟುಗಳ ಒಟ್ಟು ಮೌಲ್ಯವು 2024ರ ಏಪ್ರಿಲ್ 30 ರಂದು ವ್ಯವಹಾರದ ಅಂತ್ಯದ ವೇಳೆಗೆ 7,961 ಕೋಟಿ ರೂ.ಗೆ ಇಳಿದಿದೆ. ಹೀಗಾಗಿ, ಮೇ 19, 2023 ರ ವೇಳೆಗೆ ಚಲಾವಣೆಯಲ್ಲಿದ್ದ 2000 ರೂ.ಗಳ ನೋಟುಗಳಲ್ಲಿ ಶೇಕಡಾ 97.76 ರಷ್ಟು ಹಿಂತಿರುಗಿದೆ ಎಂದು ಆರ್ಬಿಐ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

 

ಮಂತ್ರಿಗಳೆ ನಿಮ್ಮ ಒಂದು ವರ್ಷದ ಸಾಧನೆ ಏನು?: ಬಸವರಾಜ ಬೊಮ್ಮಾಯಿ ಪ್ರಶ್ನೆ

ಬಿಸಿಲಿನಿಂದ ತತ್ತರಿಸಿದ್ದ ಬೆಂಗಳೂರಿಗೆ ತಂಪೆರೆದ ‘ಮಳೆರಾಯ’: ನಗರದ ಹಲವೆಡೆ ‘ವರುಣಾರ್ಭಟ’ | Rain in Bengaluru

ICC T20 World Cup 2024 Anthem : ಟಿ20 ವಿಶ್ವಕಪ್ ಅಧಿಕೃತ ಗೀತೆ ‘ಔಟ್ ಆಫ್ ದಿಸ್ ವರ್ಲ್ಡ್’ ರಿಲೀಸ್, ಅದ್ಭುತ ಎಂದ ಅಭಿಮಾನಿಗಳು

Share.
Exit mobile version