ಬೆಂಗಳೂರು: ಭಾರತ ಚುನಾವಣಾ ಆಯೋಗದ ಉಲ್ಲೇಖಿತ ಪತ್ರಿಕಾ ಪ್ರಕಟಣೆಯಂತೆ ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಸಂಬಂಧ ಚುನಾವಣಾ ವೇಳಾ ಪಟ್ಟಿಯನ್ನು ಘೋಷಿಸಲಾಗಿದ್ದು, ದಿನಾಂಕ: 16.03.2024(ಶನಿವಾರ) ರಿಂದ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿರುತ್ತದೆ.
ಮುಂದುವರಿದು, ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ದಿನಾಂಕ: 28.03.2024(ಗುರುವಾರ)ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು ಹಾಗೂ ಅದೇ ದಿನದಿಂದ ದಿನಾಂಕ: 08.04.2024(ಸೋಮವಾರ) ರವರೆಗೆ ನಾಮಪತ್ರಗಳ ಸ್ವೀಕೃತಿ, ಪರಿಶೀಲನೆ ಹಾಗೂ ಹಿಂಪಡೆಯುವ ಪ್ರಕ್ರಿಯೆಯನ್ನು ಆಯಾ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಈ ಕೆಳಕಾಣಿಸಿದ ವಿಳಾಸದಲ್ಲಿ ನಡೆಸಲಾಗುವುದೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ತಿಳಿಸಿರುತ್ತಾರೆ.
ನಾಮಪತ್ರಗಳನ್ನು ಸ್ವಲ್ಲಿಸುವ ಚುನಾವಣಾಧಿಕಾರಿಗಳ ಕಛೇರಿಗಳ ವಿವರ:
1. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ:
ಚುನಾವಣಾಧಿಕಾರಿಗಳ ಕಛೇರಿ,
ನಂ. 24 – ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ,
ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣ,
ಬೆಂಗಳೂರು ನಗರ ಜಿಲ್ಲೆ, 1ನೇ ಮಹಡಿ, ಕಂದಾಯ ಭವನ ಹಿಂಭಾಗ, ಬೆಂಗಳೂರು – 560009
2. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ:
ಚುನಾವಣಾಧಿಕಾರಿಗಳ ಕಛೇರಿ,
ನಂ. 25 – ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ,
ಸಭಾಂಗಣ – 01, ಕೇಂದ್ರ ಕಛೇರಿ,
ಬೃಹತ್ ಬೆಂಗಳೂರು ಮಹಾನಗರ ಪಾಲಿಕರ, ಬೆಂಗಳೂರು – 560002
3. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ:
ಚುನಾವಣಾಧಿಕಾರಿಗಳ ಕಛೇರಿ,
ನಂ.26 – ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ, ವಲಯ ಆಯುಕ್ತರು(ದಕ್ಷಿಣ)ರವರ ಕಾರ್ಯಾಲಯ, 2ನೇ ಮಹಡಿಯ ಕೊಠಡಿ ಸಂಖ್ಯೆ: 1, ಮಹಾನಗರ ಪಾಲಿಕೆ ಕಛೇರಿಗಳ ಸಂಕೀರ್ಣ, 2ನೇ ಬ್ಲಾಕ್, 9ನೇ ಕ್ರಾಸ್, ಜಯನಗರ, ಬೆಂಗಳೂರು- 560011
ಚುನಾವಣಾ ವೇಳಾ ಪಟ್ಟಿಯ ವಿವರ:
1. ಚುನಾವಣಾ ಅಧಿಸೂಚನೆ ಹೊರಡಿಸಿರುವ ದಿನಾಂಕ: 28.03.2024(ಗುರುವಾರ)
2. ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 04.04.2024(ಗುರುವಾರ)
3. ನಾಮಪತ್ರಗಳ ಪರಿಶೀಲನೆ ದಿನಾಂಕ: 05.04.2024(ಶುಕ್ರವಾರ)
4. ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನ: 08.04.2024(ಸೋಮವಾರ)
5. ಮತದಾನ ನಡೆಯುವ ದಿನಾಂಕ: 26.04.2024(ಶುಕ್ರವಾರ)
6. ಮತ ಎಣಿಕೆ ದಿನಾಂಕ: 04.06.2024(ಮಂಗಳವಾರ)
7. ಚುನಾವಣೆ ಪೂರ್ಣಗೊಳ್ಳುವ ದಿನಾಂಕ 06.06.2024(ಗುರುವಾರ)
BIG NEWS: ‘ಸಭಾಪತಿ ಕಚೇರಿ’ಯಲ್ಲಿ ‘ಕಾಂಗ್ರೆಸ್ MLC’ಗಳ ಹೈಡ್ರಾಮಾ: ‘ರಾಜೀನಾಮೆ ಪತ್ರ’ ತೋರಿಸಿ ಕೊಡದೇ ಪ್ರಹಸನ
BREAKING: ‘ಯತ್ನಾಳ್’ ವಿರುದ್ಧ ‘ಡಿಕೆಶಿ ಮಾನನಷ್ಟ’ ಕೇಸ್: ಅರ್ಜಿ ವರ್ಗಾವಣೆಗೆ ‘ಹೈಕೋರ್ಟ್ ನಕಾರ’