ಬೆಂಗಳೂರು : ಲೋಕಸಭೆ ಚುನಾವಣೆಗೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾಗಿದ್ದು, ಸೋಮವಾರ ಒಂದೇ ದಿನ ಮಂಡ್ಯ ಸೇಇದಂತೆ ರಾಜ್ಯದ ವಿವಿಧೆಡೆ 1 ಕೋಟಿಗೂ ಹೆಚ್ಚು ದಾಖಲೆ ಇಲ್ಲದ ನಗದು ವಶಕ್ಕೆ ಪಡೆಯಲಾಗಿದೆ.
ಮಂಡ್ಯದಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ೯೯.೨೦ ಲಕ್, ತುಮಕೂರಿನಲ್ಲಿ 8 ಲಕ್ಷ ರೂ. ಚಿಕ್ಕಮಗಳೂರಿನಲ್ಲಿ 90 ಸಾವಿರ, ಹುಬ್ಬಳ್ಳಿಯಲ್ಲಿ 8 ಲಕ್ಷ, ಬಾಗಲಕೋಟೆಯಲ್ಲಿ 1.72 ಲಕ್ಷ ರೂ.ಗಳನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಎರಡು ದಿನಗಳಲ್ಲಿ 45.76 ಲಕ್ಷ ರೂ. ಸೇರಿದಂತೆ 15.89 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.