Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೂಲವ್ಯಾಧಿಯಿಂದ ಹಿಡಿದು ಮಧುಮೇಹದವರೆಗೆ : 50 ಕ್ಕೂ ಹೆಚ್ಚು ಕಾಯಿಲೆಗಳಿಗೆ ರಾಮಬಾಣ ಈ ಅದ್ಭುತ ಗಿಡಮೂಲಿಕೆ!

03/04/2026 7:26 AM

SHOCKING : ವಿದೇಶಗಳಲ್ಲಿ ಪ್ರತಿದಿನ ಸರಾಸರಿ 20 ಭಾರತೀಯ ಕಾರ್ಮಿಕರು ಸಾವು : ವರದಿ

03/04/2026 7:18 AM

ವಿಮಾನ ಪ್ರಯಾಣಿಕರಿಗೆ ಶಾಕ್: ಉಚಿತ ಸೀಟು ಹಂಚಿಕೆಯ ಆದೇಶ ವಾಪಸ್ ಪಡೆದ ಕೇಂದ್ರ; ಘೋಷಣೆಯಾದ ಕೆಲವೇ ವಾರಗಳಲ್ಲಿ ನಿಯಮ ರದ್ದು!

03/04/2026 7:17 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಮೋದಿ, ಅಮಿತ್ ಶಾ, ಯೋಗಿ ಪ್ರಚಾರಕ್ಕೆ ಮುಹೂರ್ತ ಫಿಕ್ಸ್
KARNATAKA

BIG NEWS: ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಮೋದಿ, ಅಮಿತ್ ಶಾ, ಯೋಗಿ ಪ್ರಚಾರಕ್ಕೆ ಮುಹೂರ್ತ ಫಿಕ್ಸ್

By kannadanewsnow0917/04/2024 3:18 PM

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸುವ ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರ ಸಭೆಯು ಇದೇ 20ರಂದು ಮಧ್ಯಾಹ್ನ ಚಿಕ್ಕಬಳ್ಳಾಪುರದಲ್ಲಿ ನಡೆಯಲಿದೆ ಎಂದು ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್ ಅವರು ತಿಳಿಸಿದರು.

ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸುಮಾರು 1 ಲಕ್ಷ ಜನರ ನಿರೀಕ್ಷೆ ಇದೆ. ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ಏರ್ಪಡಿಸಲಾಗುತ್ತದೆ. ಬೆಂಗಳೂರು ದಕ್ಷಿಣ, ಬೆಂಗಳೂರು ಮಧ್ಯ, ಬೆಂಗಳೂರು ಉತ್ತರ ಕ್ಷೇತ್ರಗಳು, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಸಭೆ ಇದಾಗಿರುತ್ತದೆ. 2 ಕಡೆ ವಿಜಯ ಸಂಕಲ್ಪ ಸಮಾವೇಶ ನಡೆಯಲಿದ್ದು, ಸಿದ್ಧತಾ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರವಾಸವೂ ಕೂಡ ನಿಗದಿಯಾಗಿದೆ. 23, 24ರಂದು ಕರ್ನಾಟಕದಲ್ಲಿ ವಿವಿಧ ಚುನಾವಣಾ ಪ್ರಚಾರ ಸಭೆಗಳಲ್ಲಿ ಅವರು ಭಾಗವಹಿಸುತ್ತಾರೆ. 23ರಂದು ಬೆಳಿಗ್ಗೆ ಯಶವಂತಪುರದಲ್ಲಿ ರೋಡ್ ಷೋ, ಬಳಿಕ ಯಲಹಂಕದಲ್ಲಿ ಸಾರ್ವಜನಿಕ ಸಭೆ ಇರುತ್ತದೆ. ಸಂಜೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಷೋ ಇರುತ್ತದೆ. ನಂತರ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಷೋ ಇರಲಿದೆ ಎಂದು ವಿವರಿಸಿದರು.

24ರಂದು ಬೆಳಿಗ್ಗೆ ಚಿಕ್ಕಮಗಳೂರಿನಲ್ಲಿ ಸಾರ್ವಜನಿಕ ಸಭೆ, ಮಧ್ಯಾಹ್ನ ತುಮಕೂರಿನಲ್ಲಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಂಜೆ ಹುಬ್ಬಳ್ಳಿ ರೋಡ್ ಷೋದಲ್ಲಿ ಪಾಲ್ಗೊಳ್ಳುತ್ತಾರೆ. ಇದೇ 24ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕರ್ನಾಟಕದಲ್ಲಿ ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತಾರೆ. ಬೆಳಿಗ್ಗೆ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಷೋ, ಮಧ್ಯಾಹ್ನ ಮಡಿಕೇರಿಯಲ್ಲಿ ಸಾರ್ವಜನಿಕ ಸಭೆ, ಸಂಜೆ ಉಡುಪಿಯ ಮಲ್ಪೆಯಲ್ಲಿ ಸಾರ್ವಜನಿಕ ಸಭೆ ಇರುತ್ತದೆ ಎಂದು ವಿವರಿಸಿದರು.

ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು 21ರಂದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 24ರಂದು ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದು ತಿಳಿಸಿದರು. ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ರಾಜ್ಯ ವಕ್ತಾರ ಡಾ. ನರೇಂದ್ರ ರಂಗಪ್ಪ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

‘ಸ್ಯಾನಿಟರಿ ಪ್ಯಾಡ್’ ನಂತೆ ಚೀನಾದಲ್ಲಿ ರೈಲು ನಿಲ್ದಾಣ ನಿರ್ಮಾಣ! ಫೋಟೋ ವೈರಲ್‌

ಮಂಡ್ಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಲಿಕಾಪ್ಟರ್ ಚುನಾವಣಾಧಿಕಾರಿಗಳಿಂದ ತಪಾಸಣೆ

Share. Facebook Twitter LinkedIn WhatsApp Email

Related Posts

ಮೂಲವ್ಯಾಧಿಯಿಂದ ಹಿಡಿದು ಮಧುಮೇಹದವರೆಗೆ : 50 ಕ್ಕೂ ಹೆಚ್ಚು ಕಾಯಿಲೆಗಳಿಗೆ ರಾಮಬಾಣ ಈ ಅದ್ಭುತ ಗಿಡಮೂಲಿಕೆ!

03/04/2026 7:26 AM1 Min Read

ಶೀತ, ಕೆಮ್ಮಿನಿಂದ ಮೈಕೈ ನೋವಿನವರೆಗೆ ಹಲವು ರೋಗಗಳಿಗೆ ರಾಮಬಾಣ ಜಿಂದಾ ತಿಲಿಸ್ಮತ್.!

03/04/2026 7:15 AM2 Mins Read

ಬೆಂಗಳೂರಿಗರೇ ಗಮನಿಸಿ : ಏ.5ರಂದು 2 ಗಂಟೆಗಳ ಕಾಲ `ನಮ್ಮ ಮೆಟ್ರೋ’ ಸೇವೆ ಸ್ಥಗಿತ.!

03/04/2026 7:06 AM1 Min Read
Recent News

ಮೂಲವ್ಯಾಧಿಯಿಂದ ಹಿಡಿದು ಮಧುಮೇಹದವರೆಗೆ : 50 ಕ್ಕೂ ಹೆಚ್ಚು ಕಾಯಿಲೆಗಳಿಗೆ ರಾಮಬಾಣ ಈ ಅದ್ಭುತ ಗಿಡಮೂಲಿಕೆ!

03/04/2026 7:26 AM

SHOCKING : ವಿದೇಶಗಳಲ್ಲಿ ಪ್ರತಿದಿನ ಸರಾಸರಿ 20 ಭಾರತೀಯ ಕಾರ್ಮಿಕರು ಸಾವು : ವರದಿ

03/04/2026 7:18 AM

ವಿಮಾನ ಪ್ರಯಾಣಿಕರಿಗೆ ಶಾಕ್: ಉಚಿತ ಸೀಟು ಹಂಚಿಕೆಯ ಆದೇಶ ವಾಪಸ್ ಪಡೆದ ಕೇಂದ್ರ; ಘೋಷಣೆಯಾದ ಕೆಲವೇ ವಾರಗಳಲ್ಲಿ ನಿಯಮ ರದ್ದು!

03/04/2026 7:17 AM

ಶೀತ, ಕೆಮ್ಮಿನಿಂದ ಮೈಕೈ ನೋವಿನವರೆಗೆ ಹಲವು ರೋಗಗಳಿಗೆ ರಾಮಬಾಣ ಜಿಂದಾ ತಿಲಿಸ್ಮತ್.!

03/04/2026 7:15 AM
State News
KARNATAKA

ಮೂಲವ್ಯಾಧಿಯಿಂದ ಹಿಡಿದು ಮಧುಮೇಹದವರೆಗೆ : 50 ಕ್ಕೂ ಹೆಚ್ಚು ಕಾಯಿಲೆಗಳಿಗೆ ರಾಮಬಾಣ ಈ ಅದ್ಭುತ ಗಿಡಮೂಲಿಕೆ!

By kannadanewsnow5703/04/2026 7:26 AM KARNATAKA 1 Min Read

ಪ್ರಕೃತಿಯಲ್ಲಿ ಸಿಗುವ ಅನೇಕ ಗಿಡಮೂಲಿಕೆಗಳು ನಮ್ಮ ಆರೋಗ್ಯಕ್ಕೆ ವರದಾನವಾಗಿವೆ. ಅಂತಹದ್ದೇ ಒಂದು ಅಪರೂಪದ ಮತ್ತು ಶಕ್ತಿಯುತ ಔಷಧೀಯ ಸಸ್ಯವೇ ‘ಅತಿಬಲ’…

ಶೀತ, ಕೆಮ್ಮಿನಿಂದ ಮೈಕೈ ನೋವಿನವರೆಗೆ ಹಲವು ರೋಗಗಳಿಗೆ ರಾಮಬಾಣ ಜಿಂದಾ ತಿಲಿಸ್ಮತ್.!

03/04/2026 7:15 AM

ಬೆಂಗಳೂರಿಗರೇ ಗಮನಿಸಿ : ಏ.5ರಂದು 2 ಗಂಟೆಗಳ ಕಾಲ `ನಮ್ಮ ಮೆಟ್ರೋ’ ಸೇವೆ ಸ್ಥಗಿತ.!

03/04/2026 7:06 AM

ಕಾಲಿನಲ್ಲಿ ಕಾಣಿಸಿಕೊಳ್ಳುವ`ಆಣಿ’ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ.! ತಪ್ಪದೇ ಹೀಗೆ ಮಾಡಿ

03/04/2026 6:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.