ಬೆಂಗಳೂರು: ಮೊದಲ ಹಂತದ ಲೋಕಸಭಾ ಚುನಾವಣೆಗೆ ಇದೇ 26-04-2024ರಂದು ಮತದಾನ ನಡೆಯಲಿದೆ. ಈ ಚುನಾವಣೆಗೆ ಮಾ.28ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಇಂದಿನವರೆಗೆ ಎಷ್ಟು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಅಂತ ಮುಂದೆ ಓದಿ.
ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ದಿನಾಂಕ 26-04-2024ರಂದು ಮತದಾನ ನಡೆಯಲಿದೆ. ಉಡುಪಿ ಚಿಕ್ಕಮಗಳೂರು ಸೇರಿದಂತೆ 14 ಜಿಲ್ಲೆಗಳ ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.
ಮೊದಲ ಹಂತದ ಲೋಕಸಭಾ ಕ್ಷೇತ್ರಗಳಿಗೆ ಮಾರ್ಚ್.28ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭಗೊಂಡಿತ್ತು. ಅಂದಿನಿಂದ ಇಂದಿನವರೆಗೆ 50 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಪುರುಷ ಅಭ್ಯರ್ಥಿಗಳು 44 ಆಗಿದ್ದರೇ, ಮಹಿಳಾ ಅಭ್ಯರ್ಥಿಗಳು 6 ಮಂದಿಯಾಗಿದ್ದಾರೆ. ಒಟ್ಟು 50 ಮಂದಿ ಅಭ್ಯರ್ಥಿಗಳು ಮೊದಲ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರವನ್ನು ಈವರೆಗೆ ಸಲ್ಲಿಸಿದ್ದಾರೆ.
ದಿನಾಂಕ 30-03-2024 ರ ಪತ್ರಿಕಾ ಪ್ರಕಟಣೆ.#ceokarnataka #LokaSabhaElection2024#Election2024 #seizure #managament #illegal pic.twitter.com/0ERuLJZbBH
— Chief Electoral Officer, Karnataka (@ceo_karnataka) March 30, 2024
ಮೋದಿ ಮತ್ತೊಮ್ಮೆ ಪ್ರಧಾನಿ ಮಾಡಲು ತಮಗೆ ಮತ ನೀಡಿ: ಬಸವರಾಜ ಬೊಮ್ಮಾಯಿ ಮನವಿ
SSLC ಪರೀಕ್ಷೆ: ಇಂದು ‘8.41 ಲಕ್ಷ ವಿದ್ಯಾರ್ಥಿ’ಗಳು ಹಾಜರ್, ಓರ್ವ ಡಿಬಾರ್ | SSLC Exam