ತುಮಕೂರು : ಇನ್ನೇನು ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು ಎಲ್ಲಾ ಪಕ್ಷಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಗೆಲುವು ಖಚಿತ ಎಂಬುವುದು ಲೆಕ್ಕಾಚಾರ ಹಾಕಿ ಆಯಾ ಕ್ಷೇತ್ರಕ್ಕೆ ಅಭ್ಯರ್ಥಿಗಳಿಗೆ ಮಾಡುತ್ತವೆ.
ಹೈಕಮಾಂಡ್ ಭೇಟಿ ಬಳಿಕ ತುಮಕೂರು ಕ್ಷೇತ್ರದಲ್ಲಿ ವಿ ಸೋಮಣ್ಣ ಮತ್ತೆ ಆಕ್ಟಿವ್ ಆಗಿದ್ದು ಮದುವೆ ಕಾರ್ಯಕ್ರಮದಲ್ಲಿ ವಿ. ಸೋಮಣ್ಣ ಭಾಗಿಯಾಗಿದ್ದಾರೆ. ಈ ವೇಳೆ ಒಕ್ಕಲಿಗ ನಾಯಕರನ್ನು ಭೇಟಿಯಾಗಿ ಸೋಮಣ್ಣ ಮಾತುಕತೆ ನಡೆಸಿದ್ದಾರೆ. ಲಿಂಗಾಯತ ಸಮುದಾಯದ ಮುಖಂಡರ ಮನೆಗೂ ಭೇಟಿ ನೀಡಿ ಚರ್ಚಿಸಿದ್ದಾರೆ. ವಿ ಸೋಮಣ್ಣಗೆ ಶಾಸಕರಾದ ಜ್ಯೋತಿ ಗಣೇಶ ಸುರೇಶ್ ಗೌಡ ಕೂಡ ಸಾತ್ ನೀಡಿದ್ದಾರೆ.
ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿ ಎಂದು ಈಗಾಗಲೇ ಜೆಸಿ ಮಧು ಸ್ವಾಮಿ ತಿಳಿಸಿದ್ದಾರೆ.ಜೆಸಿ ಮಾಧುಸ್ವಾಮಿ ಹೇಳಿಕೆ ಬೆನ್ನಲ್ಲೇ ವಿಶ್ವಮಣ್ಣ ಇದೀಗ ತುಮಕೂರು ಕ್ಷೇತ್ರದಲ್ಲಿ ಫುಲ್ ಆಕ್ಟಿವ್ ಆಗಿ ಓಡಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದರ ಬೆನ್ನಲ್ಲೆ ರಾಜ್ಯದಲ್ಲಿ ಇಂದು ಕೇಂದ್ರ ಸಚಿವ ಅಮಿತ್ ಷಾ ಭೇಟಿ ನೀಡಿದ್ದು ಮೈಸೂರು, ಮಂಡ್ಯ ಹಾಸನ ಹಾಗೂ ಚಾಮರಾಜನಗರ ಕ್ಷೇತ್ರಗಳ ಕುರಿತಂತೆ ರಾಜ್ಯ ಬಿಜೆಪಿ ನಾಯಕರಿಗೆ ಸಭೆ ನಡೆಸಲಿದ್ದಾರೆ. ಅಲ್ಲದೆ ತುಮಕೂರು ಕ್ಷೇತ್ರ ಕೂಡ ಬಹಳ ಪ್ರಮುಖವಾದಂತಹ ಕ್ಷೇತ್ರವಾಗಿದ್ದು ಈಗಾಗಲೇ ಇಲ್ಲಿ ಮಾಜಿ ಸಚಿವ ವಿ ಸೋಮಣ್ಣ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದು ಫುಲ್ ಆಕ್ಟಿವ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.