ನವದೆಹಲಿ : ಕೇರಳದ ಉಳಿದ ನಾಲ್ಕು ಸ್ಥಾನಗಳಿಗೆ ಭಾರತೀಯ ಜನತಾ ಪಕ್ಷ (BJP) ತನ್ನ ಅಭ್ಯರ್ಥಿಗಳನ್ನ ಘೋಷಿಸಿದ್ದು, ರಾಜ್ಯ ಅಧ್ಯಕ್ಷ ಕೆ ಸುರೇಂದ್ರನ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ.
ಕಾಂಗ್ರೆಸ್ನ ಭದ್ರಕೋಟೆಯಾದ ವಯನಾಡ್ನಲ್ಲಿ ಕೆ ಸುರೇಂದ್ರನ್ ಅವರನ್ನ ಕಣಕ್ಕಿಳಿಸುವ ನಿರ್ಧಾರವು ರಾಹುಲ್ ಗಾಂಧಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನ ಮುಂದಿಡುವ ಮೂಲಕ ವಿರೋಧವನ್ನ ಎದುರಿಸುವ ಕಾರ್ಯತಂತ್ರದ ಕ್ರಮವಾಗಿದೆ. ವಯನಾಡ್’ನಲ್ಲಿ ಆಡಳಿತಾರೂಢ ಎಡಪಕ್ಷಗಳ ಅಭ್ಯರ್ಥಿಯಾಗಿ ಸಿಪಿಐನ ಅನ್ನಿ ರಾಜಾ ಕಣದಲ್ಲಿದ್ದಾರೆ.
ಶಬರಿಮಲೆ ದೇವಸ್ಥಾನಕ್ಕೆ ಯುವತಿಯರ ಪ್ರವೇಶದ ವಿರುದ್ಧ ಆಂದೋಲನಗಳನ್ನ ಮುನ್ನಡೆಸಿದ ಕೆ ಸುರೇಂದ್ರನ್ ಅವರು 2020ರಿಂದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಕೋಯಿಕ್ಕೋಡ್ ಜಿಲ್ಲೆಯ ಉಳ್ಳೇರಿಯವರಾದ ಸುರೇಂದ್ರನ್ ಅವರು ಭಾರತೀಯ ಜನತಾ ಯುವ ಮೋರ್ಚಾದ ವಯನಾಡ್ ಜಿಲ್ಲಾಧ್ಯಕ್ಷರಾಗಿ ತಮ್ಮ ರಾಜಕೀಯ ಜೀವನವನ್ನ ಪ್ರಾರಂಭಿಸಿದರು.
ಚಿಣ್ಣರೊಂದಿಗೆ ‘ಶಿವಮೊಗ್ಗ ರಂಗಾಯಣ’: ‘ಮಕ್ಕಳ ಬೇಸಿಗೆ ಶಿಬಿರ’ಕ್ಕೆ ಅರ್ಜಿ ಆಹ್ವಾನ
ಬಿಜೆಪಿ ಈಗ ಒಂದು ಮನೆ ‘ಮೂರು ಬಾಗಿಲು’ ಎಂಬಂತಾಗಿದೆ : ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಲೇವಡಿ
‘ವೀಳ್ಯದೆಲೆ’ಯಿಂದ ಅಸಾಧಾರಣ ಪ್ರಯೋಜನಾ, ಇದಕ್ಕಿದೆ ‘ಕ್ಯಾನ್ಸರ್ ಕೋಶ’ ಹೋಗಲಾಡಿಸುವ ಶಕ್ತಿ