ಬೆಂಗಳೂರು: ರಾಜ್ಯದಲ್ಲಿ ಇಂದು 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದೆ. ಇಂದು ಮಧ್ಯಾಹ್ನ.1 ಗಂಟೆಯ ನಂತ್ರ, ಮಧ್ಯಾಹ್ನ 3 ಗಂಟೆಯವರೆಗೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಶೇ.50.93ರಷ್ಟು ಮತದಾನ ನಡೆದಿದೆ.
ಈ ಕುರಿತಂತೆ ಚುನಾವಣಾ ಆಯೋಗದಿಂದ ಮಾಹಿತಿ ನೀಡಲಾಗಿದ್ದು, ಇಂದು ಮಧ್ಯಾಹ್ನ 3 ಗಂಟೆಯವರೆಗೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ 50.93ರಷ್ಟು ಮತದಾನ ಆಗಿದೆ ಎಂಬುದಾಗಿ ತಿಳಿಸಿದೆ.
ಇಲ್ಲಿದೆ 14 ಲೋಕಸಭಾ ಕ್ಷೇತ್ರಗಳ ಶೇಕಡವಾರು ಪ್ರಮಾಣ
- ಬೆಂಗಳೂರು ಸೆಂಟ್ರಲ್- ಶೇ.40.10
- ಬೆಂಗಳೂರು ಉತ್ತರ – ಶೇ.41.12
- ಬೆಂಗಳೂರು ಗ್ರಾಮಾಂತರ- ಶೇ.40.77
- ಬೆಂಗಳೂರು ದಕ್ಷಿಣ – ಶೇ.40.77
- ಚಾಮರಾಜನಗರ – ಶೇ.54.82
- ಚಿಕ್ಕಬಳ್ಳಾಪುರ – ಶೇ.55.90
- ಚಿತ್ರದುರ್ಗ – ಶೇ.52.14
- ದಕ್ಷಿಣ ಕನ್ನಡ- ಶೇ.58.76
- ಹಾಸನ- ಶೇ.55.92
- ಕೋಲಾರ- ಶೇ.54.66
- ಮಂಡ್ಯ- ಶೇ.57.44
- ಮೈಸೂರು-ಕೊಡಗು – ಶೇ.53.55
- ತುಮಕೂರು- ಶೇ.56.62
- ಉಡುಪಿ-ಚಿಕ್ಕಮಗಳೂರು – ಶೇ.57.49
ತುಮಕೂರಲ್ಲಿ ಮತಚಲಾಯಿಸಿ ಕೆಲವೇ ಕ್ಷಣಗಳಲ್ಲಿ ಮತದಾರ ಕುಸಿದು ಬಿದ್ದು ಸಾವು