ನವದೆಹಲಿ : ಏಪ್ರಿಲ್ 19 ರ ನಾಳೆ ಲೋಕಸಭೆ ಚುನಾವಣೆಗೆ ನಡೆಯುವ ಮೊದಲ ಹಂತದ ಚುನಾವನೆಗೆ ಬಹಿರಂಗ ಪ್ರಚಾರಕ್ಕೆ ಬುಧವಾರ ತೆರೆ ಬಿದ್ದಿದ್ದು, ನಾಳೆ ಮತದಾನ ನಡೆಯಲಿದೆ.
ಮೊದಲ ಹಂತದಲ್ಲಿ 21 ರಾಜ್ಯಗಳ 102 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ ಎಲ್ಲ ಕ್ಷೇತ್ರಗಳ ಫಲಿತಾಂಶ ಜೂನ್ 4 ರಂದು ಇತರ 6 ಹಂತಗಳ ಲೋಕಸಭೆ ಕ್ಷೇತ್ರಗಳ ಜೊತೆಗೆ ಪ್ರಕಟವಾಗಲಿದೆ.
ಲೋಕಸಭಾ ಚುನಾವಣೆ-1: ಪ್ರಮುಖ ಕ್ಷೇತ್ರಗಳು
ಲೋಕಸಭಾ ಚುನಾವಣೆಯ ಮೊದಲ ಹಂತದ ಪ್ರಮುಖ ಕ್ಷೇತ್ರಗಳು ಹೀಗಿವೆ:
ಅಸ್ಸಾಂ: ದಿಬ್ರುಘರ್, ಸೋನಿತ್ಪುರ
ತಮಿಳುನಾಡು: ಚೆನ್ನೈ ಉತ್ತರ, ಚೆನ್ನೈ ದಕ್ಷಿಣ, ಚೆನ್ನೈ ಸೆಂಟ್ರಲ್, ಕೊಯಮತ್ತೂರು, ತೂತುಕುಡಿ, ತಿರುನೆಲ್ವೇಲಿ, ಕನ್ಯಾಕುಮಾರಿ
ಬಿಹಾರ: ಜಮುಯಿ, ಗಯಾ
ಛತ್ತೀಸ್ ಗಢ: ಬಸ್ತಾರ್
ಉತ್ತರ ಪ್ರದೇಶ: ಸಹರಾನ್ಪುರ, ರಾಂಪುರ, ಪಿಲಿಭಿತ್, ಮುಜಾಫರ್ನಗರ
ಜಮ್ಮು ಮತ್ತು ಕಾಶ್ಮೀರ: ಉಧಂಪುರ
ಮಧ್ಯಪ್ರದೇಶ: ಚಿಂದ್ವಾರಾ
ರಾಜಸ್ಥಾನ: ಬಿಕಾನೇರ್
ಪಶ್ಚಿಮ ಬಂಗಾಳ: ಕೂಚ್ಬೆಹಾರ್, ಅಲಿಪುರ್ದುವಾರ್ಸ್
ಮಣಿಪುರ: ಒಳ ಮಣಿಪುರ, ಹೊರ ಮಣಿಪುರ
ಚುನಾವಣೆ 2024: ಪ್ರಮುಖ ಅಭ್ಯರ್ಥಿಗಳು
ಲೋಕಸಭಾ ಚುನಾವಣೆ 2024 ರ ಮೊದಲ ಹಂತದ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು:
ಚಿರಾಗ್ ಪಾಸ್ವಾನ್ (ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ) – ಜಮುಯಿ
ನಕುಲ್ ನಾಥ್ (ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರ ಪುತ್ರ) – ಚಿಂದ್ವಾರಾ
ತಮಿಳಿಸೈ ಸೌಂದರರಾಜನ್ (ತೆಲಂಗಾಣದ ಮಾಜಿ ರಾಜ್ಯಪಾಲರು) – ಚೆನ್ನೈ ದಕ್ಷಿಣ
ಕೆ ಅಣ್ಣಾಮಲೈ (ತಮಿಳುನಾಡು ಬಿಜೆಪಿ ಅಧ್ಯಕ್ಷ) – ಕೊಯಮತ್ತೂರು
* ಕನಿಮೋಳಿ ಕರುಣಾನಿಧಿ (ಡಿಎಂಕೆ ನಾಯಕಿ) – ತೂತುಕುಡಿ
ಪಿಲಿಭಿತ್ – ಜಿತಿನ್ ಪ್ರಸಾದ (ಬಿಜೆಪಿ ನಾಯಕ)
ನಿಸಿತ್ ಪ್ರಾಮಾಣಿಕ್ (ಬಿಜೆಪಿ ನಾಯಕ) – ಕೂಚ್ಬೆಹಾರ್
ಜಿತೇಂದ್ರ ಸಿಂಗ್ (ಹಿರಿಯ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ) – ಉಧಂಪುರ