ಕೆಎನ್ಎನ್ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಬ್ಯಾಂಕಿನಿಂದ ಸಾಲ ತೆಗೆದುಕೊಳ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕಡಿಮೆ ಬಡ್ಡಿದರದ ಬ್ಯಾಂಕ್ ಸಾಲದ ಸೌಲಭ್ಯವನ್ನ ಒದಗಿಸ್ತಿದೆ. ಹೀಗಾಗಿ ಜನರು ಅಗತ್ಯಕ್ಕೆ ಅನುಗುಣವಾಗಿ ಗೃಹ ಸಾಲ, ವಾಹನ ಸಾಲ ಕಾರು ಸಾಲ ವಸೂಲಾತಿಯನ್ನ ತೆಗೆದುಕೊಳ್ಳುತ್ತಾರೆ. ಮೊಬೈಲ್ ಫೈನಾನ್ಸ್’ನಂತಹ ಸಾಲಗಳ ಮಾರುಕಟ್ಟೆಯೂ ಇಂದು ಸಾಕಷ್ಟು ಬೆಳೆಯುತ್ತಿದೆ.
ಅದ್ರಂತೆ, ಸಾಲವನ್ನ ತೆಗೆದುಕೊಂಡ ವ್ಯಕ್ತಿ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ರೆ ಈ ಪರಿಸ್ಥಿತಿಯಲ್ಲಿ, ಬ್ಯಾಂಕ್ ಸಾಲದ ಮೊತ್ತವನ್ನ ಯಾರಿಂದ ವಸೂಲು ಮಾಡುತ್ತೆ ಅನ್ನೋ ಪ್ರಶ್ನೆ ಉದ್ಭವಿಸುತ್ತೆ. ಇಲ್ಲಿ ಗಮನಿಸಲೇ ಬೇಕಾದ ದೊಡ್ಡ ವಿಷಯವೆಂದ್ರೆ, ಎಲ್ಲಾ ರೀತಿಯ ಸಾಲಗಳನ್ನ ಪಾವತಿಸೋದು ಅಗತ್ಯವೇ.? ಇನ್ನು ಬ್ಯಾಂಕು ಯಾವ ಸಂದರ್ಭಗಳಲ್ಲಿ ಸಾಲಗಾರನ ಉತ್ತರಾಧಿಕಾರಿಯಿಂದ ಹಣ ವಸೂಲು ಮಾಡುವ ಹಕ್ಕು ಹೊಂದಿದೆ.? ಈ ಪ್ರಶ್ನೆಗಳಿಗೆ ಉತ್ತರ ಮುಂದಿದೆ.
ವಾಹನ ಸಾಲ, ಕಾರು ಸಾಲ ಅಥವಾ ಬೈಕ್ ಸಾಲ (Car Loan Rules, Bike Loan Rules after Death)
ವಾಹನ ಸಾಲ ಪಡೆಯುವ ವ್ಯಕ್ತಿ ಹಠಾತ್ ಮರಣ ಹೊಂದಿದ್ರೆ, ಈ ಸಾಲವನ್ನು ಮರುಪಾವತಿ ಮಾಡುವ ಜವಾಬ್ದಾರಿ ಕುಟುಂಬದ ಮೇಲಿದೆ. ಅಂತಹ ಪರಿಸ್ಥಿತಿಯಲ್ಲಿ, ಬ್ಯಾಂಕ್ ಸಾಲವನ್ನ ಮರುಪಾವತಿಸಲು ಕುಟುಂಬ ಸದಸ್ಯರನ್ನು ಕೇಳಬಹುದು. ಕುಟುಂಬವು ಈ ಸಾಲವನ್ನ ಮರುಪಾವತಿ ಮಾಡದಿದ್ದರೆ, ಬ್ಯಾಂಕ್ ವಾಹನವನ್ನ ಸ್ವಾಧೀನಪಡಿಸಿಕೊಳ್ಳುತ್ತದೆ ಮತ್ತು ವಾಹನವನ್ನ ಹರಾಜು ಮಾಡುವ ಮೂಲಕ ಅದರ ಸಾಲವನ್ನ ವಸೂಲಿ ಮಾಡುತ್ತದೆ.
ಗೃಹ ಸಾಲ (Home Loan Rule After Death)
ಯಾರಾದರೂ ಜಂಟಿ ಗೃಹ ಸಾಲವನ್ನ ತೆಗೆದುಕೊಂಡರೆ ಮತ್ತು ಅದರಲ್ಲಿ ಪ್ರಾಥಮಿಕ ಅರ್ಜಿದಾರರು ಮರಣ ಹೊಂದಿದರೆ, ಸಾಲವನ್ನ ಮರುಪಾವತಿ ಮಾಡುವ ಸಂಪೂರ್ಣ ಜವಾಬ್ದಾರಿಯು ಇತರ ಸಹ-ಅರ್ಜಿದಾರರ ಮೇಲೆ ಬೀಳುತ್ತದೆ. ಎರಡನೇ ಅರ್ಜಿದಾರರೂ ಸಾಲವನ್ನ ಮರುಪಾವತಿ ಮಾಡದಿದ್ದರೆ, ಸಿವಿಲ್ ನ್ಯಾಯಾಲಯ, ಸಾಲ ವಸೂಲಾತಿ ನ್ಯಾಯಮಂಡಳಿ ಅಥವಾ SARFAESI ಕಾಯಿದೆಯಿಂದ ಸಾಲವನ್ನು ಮರುಪಡೆಯಲು ಬ್ಯಾಂಕ್ಗೆ ಹಕ್ಕಿದೆ. ಈ ಪರಿಸ್ಥಿತಿಯಲ್ಲಿ, ಬ್ಯಾಂಕ್ ಆಸ್ತಿಯನ್ನ ಸ್ವಾಧೀನಪಡಿಸಿಕೊಳ್ಳುತ್ತದೆ ಮತ್ತು ಅದನ್ನ ಮಾರಾಟ ಮಾಡುವ ಮೂಲಕ ಅದರ ಸಾಲವನ್ನ ಮರುಪಡೆಯುತ್ತದೆ. ಹೇಗಾದರೂ, ಬ್ಯಾಂಕ್ ಕುಟುಂಬ ಸದಸ್ಯರಿಗೆ ಸ್ವಲ್ಪ ಸಮಯ ಪರಿಹಾರವನ್ನ ನೀಡುತ್ತದೆ. ಕುಟುಂಬ ಸದಸ್ಯರು ಸಾಲದ ಬಾಕಿ ಮೊತ್ತವನ್ನ ನಿಗದಿತ ಮಿತಿಯೊಳಗೆ ಠೇವಣಿ ಮಾಡಿದ್ರೆ, ನಂತರ ಮನೆ ಹರಾಜು ಆಗುವುದಿಲ್ಲ.
ವೈಯಕ್ತಿಕ ಸಾಲ ಮತ್ತು ಕ್ರೆಡಿಟ್ ಕಾರ್ಡ್ (Personal Loan After Death, Credit Card Bill After Death)
ವೈಯಕ್ತಿಕ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಎರಡೂ ಅಸುರಕ್ಷಿತ ಸಾಲಗಳು. ವ್ಯಕ್ತಿಯೊಬ್ಬ ಹೀಗಾಗಿ ವೈಯಕ್ತಿಕ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸದೇ ಮೃತಪಟ್ಟರೇ, ಬ್ಯಾಂಕ್ ಅವರ ಕುಟುಂಬ ಅಥವಾ ಕಾನೂನು ಉತ್ತರಾಧಿಕಾರಿಗಳಿಂದ ಸಾಲವನ್ನ ಮರುಪಡೆಯಲು ಸಾಧ್ಯವಿಲ್ಲ. ಯಾಕಂದ್ರೆ, ಈ ಎರಡೂ ಅಸುರಕ್ಷಿತ ಸಾಲಗಳಾಗಿವೆ. ಈ ಪ್ರಕರಣಗಳಲ್ಲಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ. ಈ ಕಾರಣದಿಂದಾಗಿ, ಬ್ಯಾಂಕುಗಳು ಅಂತಹ ಸಾಲದ ಖಾತೆಗಳನ್ನ NPA ಎಂದು ಪರಿಗಣಿಸುತ್ವೆ.
ಚಲಿಸುತ್ತಿದ್ದ ಕಾರಿನಲ್ಲಿ 19 ವರ್ಷದ ರೂಪದರ್ಶಿಯ ಮೇಲೆ ಸಾಮೂಹಿಕ ಅತ್ಯಾಚಾರ, ಓರ್ವ ಮಹಿಳೆ ಸೇರಿದಂತೆ ನಾಲ್ವರ ಬಂಧನ
ಸರ್ಕಾರಿ ಭೂಮಿ ಉಳಿಮೆ ಮಾಡುವವರಿಗೆ ಸಿಹಿ ಸುದ್ದಿ: ಶೀಘ್ರವೇ ಹಕ್ಕುಪತ್ರ ವಿತರಣೆ, ಸಚಿವ ಬಸವರಾಜ ಭೈರತಿ
BREAKING NEWS : ಮಂಗಳೂರಿನಲ್ಲಿ ಚಲಿಸುತ್ತಿದ್ದ ‘ಆಟೋ ರಿಕ್ಷಾ’ದಲ್ಲಿ ದಿಢೀರ್ ನಿಗೂಢ ಸ್ಫೋಟ |Mysterious explosion