ಬೆಂಗಳೂರು : ಪತಿ-ಪತ್ನಿ ಕಲಹ, ವರದಕ್ಷಿಣೆ ಕಿರುಕುಳ, ಮದುವೆಯಾಗೋದಾಗಿ ನಂಬಿಸಿ ಮೋಸ ಹೀಗೆ ನಾನಾ ಕೇಸ್ಗಳನ್ನು ಆಟೆಂಡ್ ಮಾಡ್ತಿರುವ ಮಹಿಳಾ ಆಯೋಗಕ್ಕೆ ಈಗ ಹೊಸ ತಲೆನೋವು ಶುರುವಾಗಿದೆ ಅದೇ ಲಿವಿಂಗ್ ಟುಗೆದರ್ (Living Together) ಕಂಟಕ ಎದುರಾಗಿದೆ.
‘ಬಡವರ ಮಕ್ಕಳು ಬೆಳೀಬೇಕ್ ಕಣ್ರಯ್ಯ’ : ಸೋಶಿಯಲ್ ಮೀಡಿಯಾದಲ್ಲಿ ‘ಡಾಲಿ’ ಧನಂಜಯ್ ಪರ ನಿಂತ ‘ಫ್ಯಾನ್ಸ್ ‘
ಬೆಂಗಳೂರಿನಲ್ಲಿ ಈಗ ಲಿವಿಂಗ್ ಟುಗೆದರ್ ಕಲಹ ಹೆಚ್ಚಾಗ್ತಿದೆಯಂತೆ. ಅದರಲ್ಲೂ ಲಿವಿಂಗ್ ಟುಗೆದರ್ ಜೋಡಿಗಳಲ್ಲಿ ಕಲಹ ಉಂಟಾಗಿ ಅನೇಕ ಹೆಣ್ಣುಮಕ್ಕಳು ಮಹಿಳಾ ಆಯೋಗ (Women Commission) ದ ಮೆಟ್ಟಿಲೇರುತ್ತಿದ್ದಾರಂತೆ. ಕಾಲೇಜ್, ಕೆಲಸ ಮಾಡುವ ಸ್ಥಳದಲ್ಲಿ ಪರಿಚಯವಾಗಿ ಲಿವಿಂಗ್ ಟುಗೆದರ್ ನಿರ್ಧಾರವನ್ನು ತೆಗೆದುಕೊಂಡು ಒಟ್ಟಾಗಿ ಒಂದೇ ಮನೆಯಲ್ಲಿ ಜೀವನ ಸಾಗಿಸ್ತಾರೆ.
‘ಬಡವರ ಮಕ್ಕಳು ಬೆಳೀಬೇಕ್ ಕಣ್ರಯ್ಯ’ : ಸೋಶಿಯಲ್ ಮೀಡಿಯಾದಲ್ಲಿ ‘ಡಾಲಿ’ ಧನಂಜಯ್ ಪರ ನಿಂತ ‘ಫ್ಯಾನ್ಸ್ ‘
ಆದರೆ ವರ್ಷ ಕಳೆಯೋದ್ರೊಳಗೆ ಗಲಾಟೆ ಶುರುವಾಗಿ ಹೆಣ್ಣುಮಕ್ಕಳು ನ್ಯಾಯ ಕೊಡಿಸಿ ಅಂತಾ ಆಯೋಗದ ಮೆಟ್ಟಿಲೇರುತ್ತಿದ್ದಾರಂತೆ. ಲಿವಿಂಗ್ ಟುಗೆದರ್ ಚಾಳಿಯಿಂದ ಹೆಣ್ಣುಮಕ್ಕಳು ತಮ್ಮ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದ್ದಾರೆ. ಇನ್ನು ಇಂತಹ ಕೇಸ್ನಲ್ಲಿ ನ್ಯಾಯ ಒದಗಿಸೋದು ಕೂಡ ಕಷ್ಟ ಅಂತ ಆಯೋಗದ ಅಧ್ಯಕ್ಷರು ಹೇಳುತ್ತಾರೆ.
‘ಬಡವರ ಮಕ್ಕಳು ಬೆಳೀಬೇಕ್ ಕಣ್ರಯ್ಯ’ : ಸೋಶಿಯಲ್ ಮೀಡಿಯಾದಲ್ಲಿ ‘ಡಾಲಿ’ ಧನಂಜಯ್ ಪರ ನಿಂತ ‘ಫ್ಯಾನ್ಸ್ ‘
ಇನ್ನು ಪ್ರಮುಖವಾಗಿ ವಿದ್ಯಾರ್ಥಿನಿಯರಲ್ಲಿ, ಮಹಿಳೆಯರು ಕಾರ್ಯನಿರ್ವಹಿಸುವ ಸ್ಥಳದಲ್ಲಿ ಈಗಾಗಲೇ ಲಿವಿಂಗ್ ಟುಗೆದರ್ ಮೋಸದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಹಿಳಾ ಆಯೋಗ ಮಾಡಲು ನಿರ್ಧರಿಸಿದ್ದು ಹಲವಡೆ ಪ್ರಾಯೋಗಿಕವಾಗಿ ಆರಂಭಿಸಿದೆ. ಲಿವಿಂಗ್ ಟುಗೆದರ್ ಚಾಳಿಯಿಂದಾಗಿ ಮಹಿಳೆಯರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಕೂಡ ಸಮಸ್ಯೆಯಾಗುತ್ತಿದೆ. ಖಿನ್ನತೆಯಂತಹ ಸಮಸ್ಯೆ ಕೂಡ ಎದುರಿಸಬೇಕಾಗಿದ್ದು ಆತಂಕಕ್ಕೆ ಕಾರಣವಾಗ್ತಿದೆ.
‘ಬಡವರ ಮಕ್ಕಳು ಬೆಳೀಬೇಕ್ ಕಣ್ರಯ್ಯ’ : ಸೋಶಿಯಲ್ ಮೀಡಿಯಾದಲ್ಲಿ ‘ಡಾಲಿ’ ಧನಂಜಯ್ ಪರ ನಿಂತ ‘ಫ್ಯಾನ್ಸ್ ‘
ಮೋಸ ಹೋದ ಬಳಿಕ ನ್ಯಾಯಕ್ಕಾಗಿ ಮೊರೆ ಹೋಗುವ ಬದಲು, ಮೋಸ ಹೋಗದಂತೆ ಎಚ್ಚರ ವಹಿಸಬೇಕಾಗಿದೆ. ಬದುಕು ರೂಪಿಸಿಕೊಳ್ಳವ ಹಂತದಲ್ಲಿ ಮಹಿಳೆಯರು ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ.
‘ಬಡವರ ಮಕ್ಕಳು ಬೆಳೀಬೇಕ್ ಕಣ್ರಯ್ಯ’ : ಸೋಶಿಯಲ್ ಮೀಡಿಯಾದಲ್ಲಿ ‘ಡಾಲಿ’ ಧನಂಜಯ್ ಪರ ನಿಂತ ‘ಫ್ಯಾನ್ಸ್ ‘