ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಅಕ್ಟೋಬರ್ 21ರಂದು ಹುಕ್ಕೇರಿಯಲ್ಲಿ ಲಿಂಗಾಯತ ಪಂಚಮಸಾಲಿ ಬೃಹತ್ ಸಮಾವೇಶ ಮಾಡಲಾಗುತ್ತಿದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
BIGG NEWS: ಬೆಂಗಳೂರಿನ ಸಾರ್ವಜನಿಕ ಉದ್ಯಾನವನದಲ್ಲಿ ಅಕ್ರಮ ಈದ್ಗಾ ಗೋಪುರ;ನೆಲಸಮಕ್ಕೆ ಹಿಂದೂಪರ ಸಂಘಟನೆ ಆಗ್ರಹ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.21ರಂದು ನಡೆಯುವ ಸಮಾವೇಶದಲ್ಲಿ ಕಿತ್ತೂರು ಕರ್ನಾಟಕದ ಪ್ರಥಮ ರಾಷ್ಟ್ರಮಾತೆ ಚನ್ನಮ್ಮರವರ 244ನೇ ಜಯಂತಿ, 199ನೇ ವಿಜಯೋತ್ಸವ ಮಾಡಲಾಗುವುದು. ಅಕ್ಟೋಬರ್ 21ರೊಳಗೆ ಮೀಸಲಾತಿ ಘೋಷಿಸದಿದ್ದರೆ ಅಂತಿಮ ಹಂತದ ಹೋರಾಟದ ದಿನಾಂಕ ನಿಗದಿ ಮಾಡುತ್ತೇವೆ. 25 ಲಕ್ಷ ಜನ ಸೇರಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ದಿನಾಂಕ ನಿಗದಿ ಮಾಡುತ್ತೇವೆ ಎಂದರು.
ಮೀಸಲಾತಿ ಘೋಷಣೆ ವಿನಾಕಾರಣ ವಿಳಂಬ ಮಾಡಿ ಚುನಾವಣೆ ವೇಳೆ ನೀತಿ ಸಂಹಿತೆ ಜಾರಿಯಾದರೆ ನಮ್ಮ ಹೋರಾಟಕ್ಕೆ ಹಿನ್ನಡೆ ಆಗಬಾರದು. ಹೀಗಾಗಿ ಉಗ್ರವಾದ ಹೋರಾಟಕ್ಕೆ ನಾವು ತಯಾರಿ ಮಾಡಿದ್ದೇವೆ ಎಂದರು.