ಕೆಎನ್ಎನ್ಡಿಜಿಟಲ್ ಡೆಸ್ಕ್ : ಬಿರ್ಸಾ ಮುಂಡಾ, ಸಾವರ್ಕರ್ ಅವರಂತೆ ಬ್ರಿಟಿಷರಿಗೆ ತಲೆಬಾಗಲಿಲ್ಲ, ಅವ್ರು ಹುತಾತ್ಮರಾದ್ರು. ಹಿಂದುತ್ವ ಸಿದ್ಧಾಂತಿ ವಿ.ಡಿ.ಸಾವರ್ಕರ್ ಅವರು ಬ್ರಿಟಿಷರ ಪರವಾಗಿ ಕೆಲಸ ಮಾಡುತ್ತಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಇಂದು ‘ಭಾರತ್ ಜೋಡೋ ಯಾತ್ರೆ’ಯ 69ನೇ ದಿನವಾಗಿದ್ದು, ಹಿಂಗೋಲಿಯಿಂದ ಮಹಾರಾಷ್ಟ್ರದ ವಿದರ್ಭ ಪ್ರದೇಶದ ವಾಶಿಮ್ ಜಿಲ್ಲೆಯನ್ನ ತಲುಪಿದೆ. ಈ ವೇಳೆ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮದಿನದಂದು ಮಧ್ಯಾಹ್ನ ರಾಹುಲ್ ಗಾಂಧಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ “ದಲಿತರು, ಬುಡಕಟ್ಟು ಜನರು ಮತ್ತು ಬಡವರಿಗೆ ಹಕ್ಕುಗಳು ಸಿಗಬೇಕು ಎಂದು ಒಪ್ಪಿಕೊಳ್ಳಲು ಬಯಸದ ಭಾರತೀಯ ಜನತಾ ಪಕ್ಷ (BJP) ಪ್ರತಿದಿನ ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ” ಎಂದರು.
ಇನ್ನು ಬುಡಕಟ್ಟು ಸಮಾಜದ ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ “ಕಾಂಗ್ರೆಸ್ ಮಾತ್ರ ಸಂವಿಧಾನವನ್ನ ರಕ್ಷಿಸಲು, ಬುಡಕಟ್ಟು ಜನರಿಗೆ ಶಿಕ್ಷಣ ನೀಡಲು ಮತ್ತು ಅವರ ಭೂಮಿ ಮತ್ತು ಹಕ್ಕುಗಳನ್ನ ರಕ್ಷಿಸಲು ಸಾಧ್ಯ. ಬಿರ್ಸಾ ಮುಂಡಾ ಮತ್ತು ಸಾವರ್ಕರ್ ನಡುವೆ ಹೋಲಿಕೆ ಮಾಡಲು ಪ್ರಯತ್ನಿಸಿದರು, ಬಿರ್ಸಾ ಮುಂಡಾ ಅವರ ಆದರ್ಶಗಳ ಬಗ್ಗೆ ದೃಢವಾಗಿದ್ದರು” ಎಂದು ಹೇಳಿದರು.
ಬಿರ್ಸಾ ಮುಂಡಾ ಮತ್ತು ಸಾವರ್ಕರ್ ಬಗ್ಗೆ ಮಾತನಾಡಿದ ರಾಹುಲ್
ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಬುಡಕಟ್ಟು ಹೆಮ್ಮೆಯ ದಿನವಾಗಿ ಆಚರಿಸಲಾಗುತ್ತದೆ. “ಅವರು (ಮುಂಡಾ) ಒಂದು ಇಂಚು ಕೂಡ ಹಿಂದೆ ಸರಿಯಲಿಲ್ಲ. ಅವರು ಹುತಾತ್ಮರಾದರು. ಇವು ನಿಮ್ಮ (ಬುಡಕಟ್ಟು) ಸಂಕೇತಗಳು ಮತ್ತು ನಿಮಗೆ ಮಾರ್ಗವನ್ನ ತೋರಿಸುತ್ತವೆ. ಸಾವರ್ಕರ್ ಬಿಜೆಪಿ-ಆರ್ಎಸ್ಎಸ್’ನ ಸಂಕೇತ. ಅವರು ಎರಡು-ಮೂರು ವರ್ಷಗಳ ಕಾಲ ಅಂಡಮಾನ್ ನ ಜೈಲಿನಲ್ಲಿದ್ದರು. ನಂತ್ರ ಕ್ಷಮಾದಾನ ಅರ್ಜಿಗಳನ್ನ ಬರೆಯಲು ಪ್ರಾರಂಭಿಸಿದರು” ಎಂದು ಹೇಳಿದರು.
ಸಾವರ್ಕರ್ ತಮ್ಮ ಬಗ್ಗೆ ಬೇರೆ ಹೆಸರಿನಲ್ಲಿ ಒಂದು ಪುಸ್ತಕವನ್ನ ಬರೆದಿದ್ದಾರೆ ಮತ್ತು ಅವರು ಎಷ್ಟು ಧೈರ್ಯಶಾಲಿಯಾಗಿದ್ದರು ಎಂದು ಗಾಂಧಿ ಪ್ರತಿಪಾದಿಸಿದರು. “ಅವರು ಬ್ರಿಟಿಷರಿಂದ ಪಿಂಚಣಿ ಪಡೆಯುತ್ತಿದ್ದರು, ಅವರಿಗಾಗಿ ಕೆಲಸ ಮಾಡುತ್ತಿದ್ದರು ಮತ್ತು ಕಾಂಗ್ರೆಸ್ ವಿರುದ್ಧ ಕೆಲಸ ಮಾಡುತ್ತಿದ್ದರು” ಎಂದು ರಾಹುಲ್ ಹೇಳಿದರು.
BIGG NEWS: ಭಾರತದ ಜಿ20 ಅಧ್ಯಕ್ಷ ಸ್ಥಾನವು ಅಂತರ್ಗತ, ನಿರ್ಣಾಯಕ, ಕಾರ್ಯ ಆಧಾರಿತವಾಗಿರುತ್ತದೆ : ಪ್ರಧಾನಿ ಮೋದಿ
ಉಪ್ಪು, ಅಡುಗೆಗೆ ಮಾತ್ರವಲ್ಲ..ವಾಸ್ತುದೋಷ ನಿವಾರಣೆಗೂ ಬಹಳ ಸಹಾಯಕಾರಿ…!