ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ ಸಾಹೇಬರಿಗೆ ಪಾಪ ಸಿಎಂ ಕುರ್ಚಿ ಸಿಗದ ನಿರಾಸೆಯಿಂದ ರಾತ್ರಿಯೆಲ್ಲ ನಿದ್ದೆ ಬರುತ್ತಿಲ್ಲ ಅನ್ನಿಸುತ್ತೆ. ಹೀಗಾಗೇ ಸದನದಲ್ಲೇ ವಿಶ್ರಾಂತಿ ಪಡೆಯುತ್ತಿರಬೇಕು. ಮಲಗಿ ಮಲಗಿ ಜನ ಒದ್ದೋಡಿಸುವವರೆಗೂ ಏಳಬೇಡಿ ಎಂಬುದಾಗಿ ಡಿಕೆಶಿಯನ್ನು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಕುಟುಕಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವೇ ಉತ್ತರ ಕೊಡಬೇಕು ಎಂದು ಜಾರಿಕೊಂಡು ಸದನದಲ್ಲೇ ಪ್ರಗಾಢ ನಿದ್ರೆಗೆ ಜಾರಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಸಾಹೇಬರಿಗೆ ಪಾಪ ಸಿಎಂ ಕುರ್ಚಿ ಸಿಗದ ನಿರಾಸೆಯಿಂದ ರಾತ್ರಿಯೆಲ್ಲ ನಿದ್ದೆ ಬರುತ್ತಿಲ್ಲ ಅನ್ನಿಸುತ್ತೆ. ಹಾಗಾಗಿ ಸದನದಲ್ಲೇ ವಿಶ್ರಾಂತಿ ಪಡೆಯುತ್ತಿರಬೇಕು ಎಂಬುದಾಗಿ ವ್ಯಂಗ್ಯವಾಡಿದ್ದಾರೆ.
“ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ”, ಎಂದು ಸ್ವಾಮಿ ವಿವೇಕಾನಂದರು ಕರೆ ಕೊಟ್ಟಿದ್ದರು. ಆದರೆ ಕಾಂಗ್ರೆಸ್ ನಾಯಕರ ವರಸೆ “ಮಲಗಿ, ಮಲಗಿರಿ, ಜನ ಒದ್ದೋಡಿಸುವವರೆಗೂ ಎಳೆಬೇಡಿ” ಎನ್ನುವಂತಿದೆ ಎಂಬುದಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಛೇಡಿಸಿದ್ದಾರೆ.
ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವೇ ಉತ್ತರ ಕೊಡಬೇಕು ಎಂದು ಜಾರಿಕೊಂಡು ಸದನದಲ್ಲೇ ಪ್ರಗಾಢ ನಿದ್ರೆಗೆ ಜಾರಿರುವ ಡಿಸಿಎಂ @DKShivakumar ಸಾಹೇಬರಿಗೆ ಪಾಪ ಸಿಎಂ ಕುರ್ಚಿ ಸಿಗದ ನಿರಾಸೆಯಿಂದ ರಾತ್ರಿಯೆಲ್ಲ ನಿದ್ದೆ ಬರುತ್ತಿಲ್ಲ ಅನ್ನಿಸುತ್ತೆ. ಹಾಗಾಗಿ ಸದನದಲ್ಲೇ ವಿಶ್ರಾಂತಿ ಪಡೆಯುತ್ತಿರಬೇಕು.
"ಏಳಿ ಎದ್ದೇಳಿ, ಗುರಿ ಮುಟ್ಟುವ… pic.twitter.com/BPNnmYPm5x
— R. Ashoka (@RAshokaBJP) December 11, 2025








