Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತೀಯರು ಚಿನ್ನದ ಮೇಲಿನ ವ್ಯಾಮೋಹ ಏಕೆ ಕಡಿಮೆ ಮಾಡಿಕೊಳ್ಳಬೇಕು? ಪ್ರಧಾನಿ ಮೋದಿ ಕರೆಯ ಹಿಂದಿರುವ ಆರ್ಥಿಕ ರಹಸ್ಯ ಇಲ್ಲಿದೆ

ನಿಮ್ಮ ಲೈಂಗಿಕ ಜೀವನಕ್ಕೆ ಹಾನಿ ಮಾಡುತ್ತಿರುವ 7 ದೈನಂದಿನ ಅಭ್ಯಾಸಗಳಿವು, ಇಂದೇ ಕಡಿಮೆ ಮಾಡಿ

‘ಯಾರೂ ಆತಂಕಕ್ಕೊಳಗಾಗಬೇಡಿ: ಪ್ರಧಾನಿ ಮೋದಿ ಕರೆಗೆ ತಪ್ಪು ಅರ್ಥ ಬೇಡ; ದೇಶದಲ್ಲಿ ಪೆಟ್ರೋಲ್, ಡೀಸೆಲ್ ದಾಸ್ತಾನು ಸಮೃದ್ಧವಾಗಿದೆ’ ಎಂದ ಕೇಂದ್ರ ಸರ್ಕಾರ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯಪಾಲರಿಗೆ ಅಗೌರವ ತೋರಿದ ಸದಸ್ಯರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ, ಸ್ಪೀಕರ್‌ಗೆ ಪತ್ರ: ಆರ್‌.ಅಶೋಕ ಆಕ್ರೋಶ
KARNATAKA

ರಾಜ್ಯಪಾಲರಿಗೆ ಅಗೌರವ ತೋರಿದ ಸದಸ್ಯರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ, ಸ್ಪೀಕರ್‌ಗೆ ಪತ್ರ: ಆರ್‌.ಅಶೋಕ ಆಕ್ರೋಶ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ವಿಶೇಷ ಅಧಿವೇಶನದ ದಿನವನ್ನು ಕರಾಳ ದಿನವನ್ನಾಗಿಸಿದ ಕಾಂಗ್ರೆಸ್‌ ಸರ್ಕಾರ, ರಾಜ್ಯಪಾಲರಿಗೆ ಅಗೌರವ ತೋರಿ ಸಂವಿಧಾನಕ್ಕೆ ಅಪಮಾನ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಸದನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಅಧಿವೇಶನದ ದಿನವನ್ನು ಕರಾಳ ದಿನವನ್ನಾಗಿಸಿದೆ. ರಾಜ್ಯಪಾಲರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಾರೆ. ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ಸಾಂಕೇತಿಕವಾಗಿ ಭಾಷಣ ಮಂಡಿಸಿ ಧನ್ಯವಾದ ಹೇಳಿ ಹೋಗಿದ್ದಾರೆ. ಹಿಂದೆ ಹಂಸರಾಜ್‌ ಭಾರಧ್ವಾಜ್‌ ಕೂಡ ಹಾಗೆಯೇ ಮಾಡಿದ್ದರು. ಇದರಲ್ಲಿ ತಪ್ಪೇನೂ ಇಲ್ಲ. ಸಂವಿಧಾನದ ಪ್ರಕಾರ ಸದನಕ್ಕೆ ಬಂದು ಸಾಂಕೇತಿಕ ಭಾಷಣ ಮಂಡಿಸಿ ಧನ್ಯವಾದ ಹೇಳುವ ಅವಕಾಶ ಇದ್ದೇ ಇದೆ. ಆದರೆ ಕಾಂಗ್ರೆಸ್‌ ಶಾಸಕರು ಗೂಂಡಾಗಿರಿ ಮಾಡಿ ರಾಜ್ಯಪಾಲರನ್ನು ತಳ್ಳಿದ್ದಾರೆ ಹಾಗೂ ದಾಳಿ ಮಾಡಿದ್ದಾರೆ. ಸದನದ ಹಿರಿಯ ಸದಸ್ಯರು ಹಾಗೂ ಕಾನೂನು ಸಚಿವರಾದ ಎಚ್‌.ಕೆ.ಪಾಟೀಲ್‌ ಅವರೇ ಸ್ವತಃ ಈ ಕೆಟ್ಟ ಸಂಪ್ರದಾಯಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿರುವುದು ನಿಜಕ್ಕೂ ನಾಚಿಕೆಗೇಡು ಮತ್ತು ಖಂಡನೀಯ. ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಆ ಸ್ಥಾನದಲ್ಲಿ ಒಂದು ಕ್ಷಣವೂ ಮುಂದುವರೆಯುವ ಅರ್ಹತೆ ಇಲ್ಲ ಎಂದು ಹೇಳಿದರು.

ಸದನದ ನಿಯಮಾವಳಿ ಪುಸ್ತಕದ 13 ನೇ ಪುಟದ 27 ನೇ ಕಲಂನಲ್ಲಿ, ರಾಜ್ಯಪಾಲರ ಭಾಷಣದ ಅವಧಿಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಅವರು ಭಾಷಣ ಮಾಡುವಾಗ ಯಾವುದೇ ಸದಸ್ಯರು ಅಡ್ಡಿ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. ಆ ರೀತಿ ಮಾಡಿದರೆ ಅದನ್ನು ತೀವ್ರ ಉಲ್ಲಂಘನೆ ಎಂದು ಪರಿಗಣಿಸಬೇಕಾಗುತ್ತದೆ. ಆದ್ದರಿಂದ ಸ್ಪೀಕರ್‌ ಯು.ಟಿ.ಖಾದರ್‌ ಅವರು ತಪ್ಪಿತಸ್ಥ ಸದಸ್ಯರನ್ನು ಶಿಕ್ಷೆಗೆ ಒಳಪಡಿಸಬೇಕು ಹಾಗೂ ಸದನದಿಂದ ಹೊರಗೆ ಹಾಕಬೇಕು. ರಾಜ್ಯಪಾಲರು ಅವರ ಘನತೆಯನ್ನು ಕಾಪಾಡಿಕೊಂಡಿದ್ದು, ಎಂದೂ ಸದನಕ್ಕೆ ಅಗೌರವ ತೋರಿಲ್ಲ. ಈ ಹಿಂದೆ ಎಲ್ಲ ಮಸೂದೆಗಳಿಗೆ ಅವರು ಸಹಿ ಹಾಕಿದ್ದಾರೆ. ಕಾಂಗ್ರೆಸ್‌ ಸರ್ಕಾರ ರಾಜಭವನವನ್ನು ಪಕ್ಷದ ಕಚೇರಿ ಮಾಡಲು ಹೊರಟಿದೆ ಎಂದು ದೂರಿದರು.

ರಾಜ್ಯಪಾಲರು ಸಿಎಂ ಹಾಗೂ ಸಚಿವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಅಂತಹ ರಾಜ್ಯಪಾಲರಿಗೆ ಕಾಂಗ್ರೆಸ್‌ ನಾಯಕರು ಘೇರಾವ್‌ ಹಾಕಿದ್ದಾರೆ. ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿಯನ್ನು ಮೆಚ್ಚಿಸಲು ಕಾಂಗ್ರೆಸ್‌ ಸದಸ್ಯರು ಈ ರೀತಿ ಮಾಡಿ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಬಾಬಾ ಸಾಹೇಬ್‌ ಅಂಬೇಡ್ಕರ್‌ಗೆ ಅಪಮಾನ ಮಾಡಿದ ಇವರು ಈಗ ಇಡೀ ಸದನಕ್ಕೆ ಅಪಮಾನ ಮಾಡಿದ್ದಾರೆ. ರಾಜ್ಯಪಾಲರ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲ್ಲ ಎಂದು ಸುಪ್ರೀಂ ಕೋರ್ಟ್‌ ಈ ಹಿಂದೆಯೇ ಹೇಳಿದೆ ಎಂದರು.

ಸ್ಪೀಕರ್‌ಗೆ ಪತ್ರ

ರಾಜ್ಯಪಾಲರು ಸದನದಿಂದ ನಿರ್ಗಮಿಸುವಾಗ ಅಗೌರವ ತೋರಿದ ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಸದಸ್ಯರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಪತ್ರದ ಮೂಲಕ ಸ್ಪೀಕರ್‌ ಯು.ಟಿ.ಖಾದರ್‌ ಅವರಿಗೆ ಆಗ್ರಹಿಸಿದ್ದಾರೆ. ಈ ಕುರಿತು ಅವರು ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸ್‌ ಪಕ್ಷದ ಶಾಸಕರು ಬೀದಿ ರೌಡಿಗಳಂತೆ ವರ್ತಿಸಿ ಸಂವಿಧಾನಕ್ಕೆ, ರಾಜ್ಯಪಾಲರಿಗೆ, ಸದನಕ್ಕೆ ಅಗೌರವ ತೋರಿದ್ದಾರೆ. ಸದನದ ಸಂಪ್ರದಾಯ ಹಾಗೂ ನಿಯಮಾವಳಿಗಳನ್ನು ಗಾಳಿಗೆ ತೂರಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಪಡಿಸುವ ಮೂಲಕ ಸದನಕ್ಕೆ ಅಪಮಾನ ಎಸಗಿದ್ದಾರೆ. ವಿಧಾನಪರಿಷತ್‌ನಲ್ಲಿ ಸದಸ್ಯ ಬಿ.ಕೆ.ಹರಿಪ್ರಸಾದ್‌ ಪುಡಿ ರೌಡಿ ರೀತಿ ನಡೆದುಕೊಂಡಿರುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಗೆ ಕನ್ನಡಿ ಹಿಡಿದಂತಿತ್ತು. ಇಂದಿನ ಘಟನಾವಳಿಗಳು ಕರ್ನಾಟಕದ ವಿಧಾನಮಂಡಲದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನವಾಗಿದ್ದು, ಸದನದ ಗೌರವಕ್ಕೆ ಚ್ಯುತಿ ತರುವ ರೀತಿ ಗೂಂಡಾ ವರ್ತನೆ ತೋರಿದ ಕಾಂಗ್ರೆಸ್ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಭಾಧ್ಯಕ್ಷ ಯು.ಟಿ.ಖಾದರ್‌ ಅವರಿಗೆ ಪತ್ರ ಮುಖೇನ ಒತ್ತಾಯಿಸಿದ್ದೇನೆ ಎಂದು ಆರ್‌.ಅಶೋಕ ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ಸಂಭ್ರಮಿಸಬೇಕಾದ ಹುಟ್ಟುಹಬ್ಬವೇ ಸಾವಿನ ದಿನವಾಯ್ತು; ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ

1 Min Read

Scam Alert: ವಾಟ್ಸ್ ಆಪ್ ನಲ್ಲಿ ಬರೋ ಮದುವೆ ಆಮಂತ್ರಣ ಪತ್ರಿಕೆ ಕ್ಲಿಕ್ ಮಾಡೋ ಮುನ್ನಾ ಈ ಸುದ್ದಿ ಓದಿ! | Wedding Invitation APK Scam

2 Mins Read

ಈ ರೈಲುಗಳ ಸೇವೆ ಮರುಸ್ಥಾಪನೆ, ಪರಿಷ್ಕರಣೆ

1 Min Read
Recent News

ಭಾರತೀಯರು ಚಿನ್ನದ ಮೇಲಿನ ವ್ಯಾಮೋಹ ಏಕೆ ಕಡಿಮೆ ಮಾಡಿಕೊಳ್ಳಬೇಕು? ಪ್ರಧಾನಿ ಮೋದಿ ಕರೆಯ ಹಿಂದಿರುವ ಆರ್ಥಿಕ ರಹಸ್ಯ ಇಲ್ಲಿದೆ

ನಿಮ್ಮ ಲೈಂಗಿಕ ಜೀವನಕ್ಕೆ ಹಾನಿ ಮಾಡುತ್ತಿರುವ 7 ದೈನಂದಿನ ಅಭ್ಯಾಸಗಳಿವು, ಇಂದೇ ಕಡಿಮೆ ಮಾಡಿ

‘ಯಾರೂ ಆತಂಕಕ್ಕೊಳಗಾಗಬೇಡಿ: ಪ್ರಧಾನಿ ಮೋದಿ ಕರೆಗೆ ತಪ್ಪು ಅರ್ಥ ಬೇಡ; ದೇಶದಲ್ಲಿ ಪೆಟ್ರೋಲ್, ಡೀಸೆಲ್ ದಾಸ್ತಾನು ಸಮೃದ್ಧವಾಗಿದೆ’ ಎಂದ ಕೇಂದ್ರ ಸರ್ಕಾರ

ಸಂಭ್ರಮಿಸಬೇಕಾದ ಹುಟ್ಟುಹಬ್ಬವೇ ಸಾವಿನ ದಿನವಾಯ್ತು; ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ

State News
KARNATAKA

ಸಂಭ್ರಮಿಸಬೇಕಾದ ಹುಟ್ಟುಹಬ್ಬವೇ ಸಾವಿನ ದಿನವಾಯ್ತು; ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಳಗಾವಿ: ಇಲ್ಲಿನ ಅಜಂ ನಗರದ ವಿದ್ಯಾರ್ಥಿನಿಲಯದಲ್ಲಿ ಯುವತಿಯೊಬ್ಬಳು ತನ್ನ ಜನ್ಮದಿನದಂದೇ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ನಡೆದಿದೆ. ಮೃತ ಯುವತಿಯನ್ನು…

Scam Alert: ವಾಟ್ಸ್ ಆಪ್ ನಲ್ಲಿ ಬರೋ ಮದುವೆ ಆಮಂತ್ರಣ ಪತ್ರಿಕೆ ಕ್ಲಿಕ್ ಮಾಡೋ ಮುನ್ನಾ ಈ ಸುದ್ದಿ ಓದಿ! | Wedding Invitation APK Scam

ಈ ರೈಲುಗಳ ಸೇವೆ ಮರುಸ್ಥಾಪನೆ, ಪರಿಷ್ಕರಣೆ

ಬೆಂಗಳೂರಿನಲ್ಲಿ ಭೀಕರ ದುರಂತ: ಶೆಡ್‌ಗೆ ಬೆಂಕಿ ಬಿದ್ದು ಇಬ್ಬರು ಕಂದಮ್ಮಗಳು ಜೀವಂತ ದಹನ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.