ಬೆಂಗಳೂರು : ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆಯು ದಾಳಿ ನಡೆಸಿ, ಉಗ್ರರ ಹುಟ್ಟಡಗಿಸಿದೆ. ಭಾರತೀಯ ಸೇನೆಯ ಈ ದಿಟ್ಟ ಆಪರೇಷನ್ ಸಿಂಧೂರ ದಾಳಿಯ ಬಗ್ಗೆ ಇಡೀ ದೇಶವೆ ಹೆಮ್ಮೆ ಪಡುತ್ತಿದೆ. ಕನ್ನಡ ಚಿತ್ರರಂಗದ ಕೆಲ ಗಣ್ಯರು ಸಹ ಸೇನೆಯ ಈ ದಿಟ್ಟ ಉತ್ತರವನ್ನು ಮನಸಾರೆ ಕೊಂಡಾಡಿದ್ದಾರೆ.
ಇದೀಗ ಕನ್ನಡ ಚಿತ್ರರಂಗದ ಕೆಲ ಗಣ್ಯರು ಸಹ ಸೇನೆಯ ಈ ದಿಟ್ಟ ಉತ್ತರವನ್ನು ಮನಸಾರೆ ಕೊಂಡಾಡಿದ್ದಾರೆ. ನಟ ಪ್ರೇಮ್ ಸಹ ಈ ಬಗ್ಗೆ ಮಾತನಾಡಿದ್ದು, ಸೇನೆಗೆ ಅಭಿನಂದನೆ ಸಲ್ಲಿಸಿರುವ ಜೊತೆಗೆ ಪಾಕಿಸ್ತಾನವು ಮರಳಿ ಭಾರತದ ಮೇಲೆ ಆಕ್ರಮಣ ಮಾಡುವ ಉದ್ಧಟತನ ಪ್ರದರ್ಶಿಸಬಾರದು ಎಂದಿದ್ದಾರೆ.
ಹೆಂಡತಿ ಮಕ್ಕಳೊಂದಿಗೆ ಕಾಲ ಕಳೆದು ಎಂಜಾಯ್ ಮಾಡಲು ಪ್ರವಾಸಕ್ಕೆ ಹೋದಾಗ ನಿನ್ನ ಧರ್ಮ ಯಾವುದು ಎಂದು ಹೇಳಿ ಕೊಲೆ ಮಾಡುತ್ತಾರೆ ಅಂದರೆ ಇದಕ್ಕಿಂತ ದೊಡ್ಡದಾದ ಕ್ರೈಂ ಜಗತ್ತಿನಲ್ಲಿ ಯಾವುದು ಇಲ್ಲ. ಪಾಕಿಸ್ತಾನ ಅಷ್ಟೇ ಅಲ್ಲ ಪ್ರಪಂಚದ ಯಾವುದೇ ದೇಶ ಭಾರತದ ಮೇಲೆ ಯುದ್ಧ ಮಾಡಲಿ ನೋಡೋಣ ತಾಕತ್ತಿದ್ದರೆ ಯುದ್ಧ ಸಾರಲಿ ಎಂದು ನಟ ಪ್ರೇಮ್ ಭಾರತೀಯ ಸೈನಿಕರ ಕುರಿತು ಅಪಾರವಾದ ಮೆಚ್ಚುಗೆ ವ್ಯಕ್ತಪಡಿಸಿದರು.
ಉಗ್ರರ ಕ್ಯಾಂಪ್ ಮೇಲೆ ಭಾರತೀಯ ಸೈನಿಕರು ದಾಳಿ ಮಾಡಿ ಉಗ್ರರನ್ನು ಕೊಂದಿದ್ದು ಯಾವುದೇ ತಪ್ಪಿಲ್ಲ. ಪ್ರಪಂಚದಲ್ಲಿ ಯಾವುದೇ ದೇಶದಲ್ಲಿ ಉಗ್ರರಿದ್ದರು ಅವರನ್ನು ಕೊಂದು ಹೊಡೆದು ಉಳಿಸುವುದರಲ್ಲಿ ಸಹ ಯಾವುದೇ ತಪ್ಪಿಲ್ಲ. ಯಾವುದೇ ದೇಶವಾದರೂ ಭಯೋತ್ಪಾದಕ ಮುಕ್ತ ಆಗಬೇಕು. ಸತ್ಯಮೇವ ಜಯತೆ ಎಂಬಂತೆ ನಮಗೆ ಯಾವತ್ತೂ ಜಯ ಇರುತ್ತದೆ. ನಾವು ಧರ್ಮವನ್ನು ಕಾಪಾಡಿದರೆ ನಮ್ಮನ್ನು ಧರ್ಮ ಕಾಪಾಡುತ್ತದೆ. ತಾಕತ್ತಿದ್ದರೆ ಯಾವುದೇ ರಾಷ್ಟ್ರ ಭಾರತದ ಮೇಲೆ ಯುದ್ಧ ಸಾರಲಿ ಎಂದು ತಿಳಿಸಿದರು.
ಇಡೀ ಪ್ರಪಂಚದಲ್ಲಿ ನೀವು ಎಲ್ಲೇ ಹೋದರು, ಅರ್ಧ ಲೀಟರ್ ನೀರು ಕುಡಿಯಬೇಕೆಂದರೂ ನೀವು ದುಡ್ಡು ಖರ್ಚು ಮಾಡಬೇಕು ಆದರೆ ನಮ್ಮ ಭಾರತಕ್ಕೆ ಬಂದರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಉಚಿತವಾಗಿ ಅನ್ನದಾಸೋಹವಿದೆ. ಯಾವುದೇ ಜಾತಿ ಧರ್ಮ ಯಾವುದು ಏನು ಕೇಳಲ್ಲ ಬಂದವರಿಗೆಲ್ಲ ಫ್ರೀಯಾಗಿ ಊಟ ಕೊಡ್ತಾರೆ ಇದು ನನ್ನ ಭಾರತ ಎಂದು ನಟ ಪ್ರೇಮ್ ಅವರು ತಿಳಿಸಿದರು.