ಮೈಸೂರು: ನೈಋತ್ಯ ರೈಲ್ವೆ ಮೈಸೂರು ವಿಭಾಗವು ವಿಶ್ವ ಪರಿಸರ ದಿನಾಚರಣೆ (ಜೂನ್ 5, 2025) ಪ್ರಯುಕ್ತ “ಪ್ಲಾಸ್ಟಿಕ್ ಮಾಲಿನ್ಯ ಅಂತ್ಯಗೊಳಿಸೋಣ” ಎಂಬ ಜಾಗತಿಕ ವಾಕ್ಯದೊಂದಿಗೆ ಮೇ 22 ರಿಂದ ಜೂನ್ 5ರ ವರೆಗೆ ಎರಡು ವಾರಗಳ ಸುದೀರ್ಘ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಮೈಸೂರು, ದಾವಣಗೆರೆ, ಶಿವಮೊಗ್ಗ, ಅರಸೀಕೆರೆ ಸೇರಿದಂತೆ ಪ್ರಮುಖ ರೈಲು ನಿಲ್ದಾಣಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಜಾಗೃತಿ ಅಭಿಯಾನ, ಸ್ವಚ್ಛತಾ ಚಟುವಟಿಕೆ, ಕಾರ್ಯಾಗಾರ, ಪ್ಲಾಸ್ಟಿಕ್ ಬಾಟಲ್ ಕ್ರಶಿಂಗ್ ಯಂತ್ರಗಳ ಸ್ಥಾಪನೆ, ಬಯಲು ನಾಟಕಗಳು, ಶಾಲಾ ಸಂವಹನಗಳು ಮತ್ತು ಪರಿಸರ ಸ್ನೇಹಿ ಉತ್ಪನ್ನಗಳ ಪ್ರಚಾರವನ್ನು ಒಳಗೊಂಡಿವೆ.
ಜೂನ್ 5, 2025 ರಂದು ಮೈಸೂರು – ಒಂಟಿ ಕೊಪ್ಪಲು ರೈಲ್ವೆ ಕಾಲೊನಿಯಲ್ಲಿ ಈ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ. ವಿಭಾಗೀಯ ರೈಲ್ವೆ ಮ್ಯಾನೇಜರ್ ಮುದಿತ್ ಮಿತ್ತಲ್ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರೈಲ್ವೆ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಗಿಡಗಳ ವಿತರಣೆ ಮಾಡಲಿದ್ದು, “ಅತ್ಯುತ್ತಮ ಸಂರಕ್ಷಿತ ಗಿಡ” ಸ್ಪರ್ಧೆ ಘೋಷಿಸಲಾಗುವುದು.
ಸ್ಪರ್ಧೆಯಲ್ಲಿ ವಿಜೇತರನ್ನು ಮುಂದಿನ ವರ್ಷದ ವಿಶ್ವ ಪರಿಸರ ದಿನ (2026) ದಂದು ಗೌರವಿಸಲಾಗುತ್ತದೆ. ಕಾರ್ಯಕ್ರಮದ ಸಮಯದಲ್ಲಿ ಕೆಲವು ವಿಶೇಷ ಪ್ರದರ್ಶನ ನಡೆಸಲಾಗುವುದು ಮತ್ತು ಗಮನಾರ್ಹ ಕೊಡುಗೆ ನೀಡಿದ ವ್ಯಕ್ತಿಗಳು ಹಾಗೂ ನಿಲ್ದಾಣಗಳನ್ನು ಗೌರವಿಸಲಾಗುತ್ತದೆ. ಮೈಸೂರು ವಿಭಾಗವು ಎಲ್ಲಾ ಪಾಲುದಾರರಿಗೆ ಈ ಹಸಿರು ಅಭಿಯಾನದಲ್ಲಿ ಭಾಗವಹಿಸಲು ಮನವಿ ಮಾಡಲಾಗುತ್ತಿದೆ.
GOOD NEWS: ರಾಜ್ಯದ ಯಜಮಾನಿ ಮಹಿಳೆಯರಿಗೆ ‘ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ ಮತ್ತೊಂದು ಗುಡ್ ನ್ಯೂಸ್
GOOD NEWS: ರಾಜ್ಯದ ‘ಕ್ಯಾನ್ಸರ್ ರೋಗಿ’ಗಳಿಗೆ ಗುಡ್ ನ್ಯೂಸ್: 16 ಜಿಲ್ಲಾಸ್ಪತ್ರೆಗಳಲ್ಲಿ ‘ಕೀಮೋಥೆರಪಿ ಕೇಂದ್ರ’ ಆರಂಭ