ಬೆಂಗಳೂರು : ಲೋಕಸಭಾ ಚುನಾವಣೆಗೆ ರಾಜ್ಯದ ಬೆಂಗಳೂರು ಗ್ರಾಮಾಂತರ ಕ್ಷೇತ್ರ ತೀವ್ರ ಜಿದ್ದಾ ಜಿದ್ದಿಗೆ ಕೂಡಿದ್ದು, ಬಿಜೆಪಿಯ ಮಾಜಿ ಸಚಿವ ಡಾ. ಅಶ್ವತ್ ನಾರಾಯಣ್ ಅವರು ಯಾರೇ ಕುಕ್ಕರ್ ಹಂಚಲಿ ತವಾ ಹಂಚಲಿ ಆದರೆ ನರೇಂದ್ರ ಮೋದಿ ವಿಸಿಲ್ ಕೂಗುವುದು ಮಾತ್ರ ಎಂದು ತಿಳಿಸಿದರು.
ಅಭ್ಯರ್ಥಿಯ ಎಲ್ಲ ‘ಚರಾಸ್ತಿ’ ಕುರಿತು ತಿಳಿಯುವ ಹಕ್ಕು ಮತದಾರರಿಗೆ ಇಲ್ಲ : ಸುಪ್ರೀಂ ಮಹತ್ವದ ತೀರ್ಪು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರದಲ್ಲಿ ಮಂಜುನಾಥ್ ಅವರು ನಮ್ಮ ಅಭ್ಯರ್ಥಿ ಆಗ್ತಾರೆ ಅಂತ ಯಾರೂ ನಿರೀಕ್ಷೆ ಮಾಡಿರ್ಲಿಲ್ಲ. ಅವರು ನಮ್ಮ ಅಭ್ಯರ್ಥಿ ಆಗಿದ್ದು ಪ್ರಕೃತಿ ನಿಯಮ ಅನ್ನಬಹುದು. ಯೋಗ್ಯ, ಜನಪ್ರಿಯ, ಜನರ ಧ್ವನಿಯಾಗಿ ಇರುವ ಮಂಜುನಾಥ್ ಅವರ ಮೇಲೆ ಪ್ರಕೃತಿಯ ಆಶೀರ್ವಾದ ಇದೆ. ಡಾ.ಮಂಜುನಾಥ್ ಅಂಥ ಯೋಗ್ಯ ಅಭ್ಯರ್ಥಿ ಎಂದು ಅಶ್ವಥ್ ನಾರಾಯಣ್ ಹೇಳಿದರು.
‘ದೆಹಲಿ ಹೈಕೋರ್ಟ್’ ಆದೇಶದ ವಿರುದ್ಧ ‘ಸುಪ್ರೀಂ ಕೋರ್ಟ್’ ಮೆಟ್ಟಿಲೇರಲಿರುವ ‘ಅರವಿಂದ್ ಕೇಜ್ರಿವಾಲ್’
ಗ್ರಾಮಾಂತರ ಕ್ಷೇತ್ರಕ್ಕೆ ಪ್ಯಾರಾ ಮಿಲಿಟರಿ ನಿಯೋಜನೆ ಆಗಬೇಕು. ಭಯದ ವಾತಾವರಣ ಇರಬಾರದು, ಭಯ ಇಲ್ಲದೇ ಜನ ಮತ ಹಾಗಬೇಕು. ಶಾಂತಿಯುತ ಮತದಾನ ಆಗಬೇಕು. ಈ ಕಾರಣಕ್ಕೆ ನಾವು ಪ್ಯಾರಾ ಮಿಲಿಟರಿ ದಳ ನಿಯೋಜನೆಗೆ ಕೇಳಿದ್ದೇವೆ. ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಭಯದ ವಾತಾವರಣ ಸೃಷ್ಟಿಸ್ತಿದೆ. ಭಯದ ವಾತಾವರಣ ಇದ್ರೇನೇ ಅವರಿಗೆ ಶಕ್ತಿ. ಜನರನ್ನ ಹತ್ತಿಕ್ಕುವುದು, ಗಲಾಟೆ ಸೃಷ್ಟಿಸೋದು ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಉತ್ತರಕನ್ನಡದಲ್ಲಿ ಭೀಕರ ಅಪಘಾತ :ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದವರ ಮೇಲೆ ಹರಿದ ಕಾರು, ಮಗು ಸೇರಿ ಐವರಿಗೆ ಗಾಯ
ದೇಶದಲ್ಲಿ ಈಗ ಲೋಕಸಭೆ ರೂಪದಲ್ಲಿ ಧರ್ಮ ಅಧರ್ಮದ ಯುದ್ಧ ನಡೀತಿದೆ. ದೇಶದ ಜನರ ವಿಶ್ವಾಸ ಗಳಿಸಿರುವ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಲೆಂದು ಜನ ಬಯಸಿದ್ದಾರೆ. ಮೋದಿಯವರ ಕೈ ಬಲಪಡಿಸಲು ಎಲ್ಲ 28 ಲೋಕಸಭೆ ಕ್ಷೇತ್ರ ಗೆಲ್ತೇವೆ. ಈ ನಿಟ್ಟಿನಲ್ಲಿ ಬಿಜೆಪಿ-ಜೆಡಿಎಸ್ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಕಳೆದ ಬಾರಿ ಕಾಂಗ್ರೆಸ್ ಒಂದೇ ಕ್ಷೇತ್ರದಲ್ಲಿ ಗೆದ್ದಿತ್ತು. ಅವರ ವೈಯಕ್ತಿಕ ಪ್ರತಿಷ್ಠೆ ಜನಕ್ಕೆ ಗೊತ್ತಿದೆ ಎಂದರು.