ಮಂಡ್ಯ : ಒಂದು ಊರಿಗೆ ಅಥವಾ ಒಬ್ಬರಿಗೆ ಅಧಿಕಾರ ಸಿಗುವುದು ಅಪರೂಪ. ಆದರೆ, ತೈಲೂರು ಗ್ರಾಮಕ್ಕೆ ನಾಲ್ಕೈದು ಅಧಿಕಾರ ಸಿಕ್ಕಿರುವುದು ನಿಮ್ಮಗಳ ಆಶೀರ್ವಾದ ಎಂದು ಶಾಸಕ ಉದಯ್ ಬಣ್ಣಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಸಿ.ಚಲುವರಾಜ್ ಹಾಗೂ ಮಂಡ್ಯ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಟಿ.ಎಸ್.ಸತ್ಯಾನಂದ ಅವರುಗಳಿಗೆ ತೈಲೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ತವರಿನ ಸನ್ಮಾನ ನೀಡಿ ಗೌರವಿಸಿ ಅವರು ಮಾತನಾಡಿದರು.
ತಾಲೂಕು ಪಂಚಾಯತಿ ಸದಸ್ಯರಾಗಿ ಅವಧಿ ಮುಗಿದ ಮೇಲೆ ಯಾವುದೇ ಅಧಿಕಾರವಿಲ್ಲದೆ ಇದ್ದ ಚಲುವರಾಜ್ ಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ನಂತರ ಪ್ರಸನ್ನ ಕುಮಾರ್ ಅವರನ್ನ ನಗರಸಭಾ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಬಳಿಕ ಚಲುವರಾಜ್ ಗೆ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸಿವಂತೆ ಹೇಳಿದಾಗ ನನಗೆ ಬೇಡ ಪಕ್ಷದ ಕಾರ್ಯಕರ್ತರಿಗೆ ನೀಡುವಂತೆ ಚಲುವರಾಜು ಹೇಳಿದ್ದರು. ಆದರೆ, ಎರಡು ಬಾರಿ ಗೆದ್ದಿರುವ ವಿಶ್ವನಾಥ್ ಅವರಿಗೆ ನೀವೇ ಪ್ರಬಲ ಪ್ರತಿ ಸ್ಪರ್ಧಿ ಎಂದು ಮನವೊಲಿಸಿ ಚಲುವರಾಜು ಅವರನ್ನು ಚುನಾವಣೆಗೆ ತಯಾರಿ ಮಾಡಿಕೊಳ್ಳುವಂತೆ ಒತ್ತಡ ತಂದ ಪರಿಣಾಮ ಚಲುವರಾಜು ಸ್ಪರ್ಧಿಸಬೇಕಾದ ಅನಿವಾರ್ಯತೆ ಎದುರಾಯಿತು.
ಆದರೆ, ಶಕ್ತಿ ದೇವತೆ ತೈಲೂರಮ್ಮ ಹಾಗೂ ಗ್ರಾಮಸ್ಥರ ಆಶೀರ್ವಾದದಿಂದ ಚಲುವರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅದೇ ರೀತಿ ತಾಲೂಕಿನಿಂದ ಸಹಕಾರ ಬ್ಯಾಂಕ್ ನ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಜೋಗಿಗೌಡ, ಪಿ. ಸಂದರ್ಶ್ ಸೇರಿದಂತೆ ಜಿಲ್ಲೆಯ 9 ಮಂದಿ ಅವಿರೋಧವಾಗಿ ಆಯ್ಕೆಯಾಗಿ ಮತ್ತಿಬ್ಬರು ಚುನಾವಣೆಯಲ್ಲಿ ಗೆದ್ದು, ಡಿಸಿಸಿ ಬ್ಯಾಂಕ್ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಒಂದು ಊರಿಗೆ ಅಥವಾ ಒಬ್ಬರಿಗೆ ಅಧಿಕಾರ ಸಿಗುವುದು ಅಪರೂಪ. ಆದರೆ, ತೈಲೂರು ಗ್ರಾಮಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನ, ನಗರಸಭಾ ಉಪಾಧ್ಯಕ್ಷ ಸ್ಥಾನ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಅಧಿಕಾರ ಸಿಕ್ಕಿರುವುದು ನಿಮ್ಮಗಳ ಆಶೀರ್ವಾದ ಎಂದು ಶಾಸಕ ಉದಯ್ ಬಣ್ಣಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಚಲುವರಾಜ್ ಮಾತನಾಡಿ, ಎಲ್ಲೋ ಹುಟ್ಟಿ ಬೆಳೆದ ನನಗೆ ತೈಲೂರು ಗ್ರಾಮದ ಜನತೆ ನನ್ನನ್ನು ಮನೆಯ ಮಗನಾಗಿ ಸಾಕಿ ಬೆಳೆಸಿ ಇಂತಹ ಉನ್ನತ ಹುದ್ದೆಗಳನ್ನು ನೀಡಿದ್ದಿರಿ. ಈ ಅಧಿಕಾರಿದ ಅವಧಿಯಲ್ಲಿ ರೈತರಿಗೆ, ಸಹಕಾರಿಗಳಿಗೆ ಹಾಗೂ ಗ್ರಾಮಕ್ಕೆ ಮತ್ತಷ್ಟು ಅನುದಾನ ತಂದು ಮಾದರಿ ಗ್ರಾಮವನ್ನಾಗಿ ಮಾಡುತ್ತೇನೆ. ಹಾಗೂ ಯಾವುದೇ ಚ್ಯುತಿ ಬಾರದಂತೆ ಕೆಲಸ ಮಾಡಿ ನಿಮ್ಮಗಳ ಸೇವೆ ಮಾಡುತ್ತೇನೆ ಎಂದು ಗ್ರಾಮದ ಜನತೆ ವಾಗ್ದಾನ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ ಕಾರ್ಯಕ್ರಮ ಕುರಿತು ಮಾತನಾಡಿದರು.
ಇದೇ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜೋಗಿಗೌಡ, ಚಲುವರಾಜು, ಪಿ.ಸಂದರ್ಶ್, ಮನ್ ಮುಲ್ ನಿರ್ದೇಶಕ ಹರೀಶ್ ಬಾಬು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸತ್ಯಾನಂದ ಅವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ, ನಂದೀಶ್, ಮಾಜಿ ಸದಸ್ಯರಾದ ಗಿರೀಶ್, ನಾಗರಾಜ್, ಮುಖಂಡರಾದ ರಘು, ಸಿದ್ದರಾಜ್, ಸತೀಶ್, ಅಶೋಕ್, ಕನ್ನಡ ಜ್ಯೋತಿ ಯುವಕರು ಸಂಘದ ಪದಾಧಿಕಾರಿಗಳು ಹಾಗೂ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ








