ಹಾವೇರಿ : ರಾಣೆಬೇನ್ನೂರು ತಾಲೂಕಿನ ಹುಣಸಿಕಟ್ಟೆ ಗ್ರಾಮದಲ್ಲಿ ಹಸುವನ್ನು ಚಿರತೆ ತಿಂದು ಹಾಕಿದ ದುರಂತ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಕಂಡ ಗ್ರಾಮಸ್ಥರನ್ನು ಬೆಚ್ಚಿ ಬೀಳುವಂತೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಸುತ್ತಮುತ್ತ ಜನರಿಗೆ ಆತಂಕ ಸೃಷ್ಟಿಯಾಗಿದೆ
BIGG NEWS : ‘ಆಂಧ್ರದ ರೌಡಿ’ ಮೇಲೆ ಮೇಲೆ ಗುಂಡಿನ ದಾಳಿ ಪ್ರಕರಣ : ಆರೋಪಿಗಳ ಪತ್ತೆಗೆ 3 ತನಿಖಾ ತಂಡ ರಚನೆ
ಹುಣಸಿಕಟ್ಟಿ ಗ್ರಾಮದ ಆಂಜನೇಯ ಓಲೇಕಾರ ಎಂಬುವರಿಗೆ ಸೇರಿದ ಕುರಿ ಫಾರ್ಮ್ಗೆ ನುಗ್ಗಿದ ಚಿರತೆ, ಪಕ್ಕದಲ್ಲಿ ಕಟ್ಟಿದ್ದ ಹಸುವಿನ ಮೇಲೆ ದಾಳಿ ನಡೆಸಿ ತಿಂದು ಹಾಕಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಫಾರ್ಮ್ ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
BIGG NEWS : ‘ಆಂಧ್ರದ ರೌಡಿ’ ಮೇಲೆ ಮೇಲೆ ಗುಂಡಿನ ದಾಳಿ ಪ್ರಕರಣ : ಆರೋಪಿಗಳ ಪತ್ತೆಗೆ 3 ತನಿಖಾ ತಂಡ ರಚನೆ
ಹೀಗಾಗಿ, ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳು, ಮಹಿಳೆಯರು ಮನೆಯಿಂದ ಹೊರಗಡೆ ತಿರುಗಾಡಲೂ ಭಯಬೀಳುತ್ತಿದ್ದಾರೆ. ಹೀಗಾಗಿ, ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಬೋನ್ ಇಟ್ಟು ಚಿರತೆ ಸೆರೆ ಹಿಡಿಯಬೇಕು ಎಂದು ರೈತರು ಒತ್ತಾಯ ಮಾಡುತ್ತಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.
BIGG NEWS : ‘ಆಂಧ್ರದ ರೌಡಿ’ ಮೇಲೆ ಮೇಲೆ ಗುಂಡಿನ ದಾಳಿ ಪ್ರಕರಣ : ಆರೋಪಿಗಳ ಪತ್ತೆಗೆ 3 ತನಿಖಾ ತಂಡ ರಚನೆ