ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಜನರಿಗೆ ಮತ್ತೆ ಚಿರತೆ ಭಯ ಶುರುವಾಗಿದೆ.
ಬೆಂಗಳೂರಿನ ಸಿದ್ದನಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಸಿದ್ದನಪಾಳ್ಯದ ಬಿಎಂ ಕಾವಲು ಅರಣ್ಯ ಪ್ರದೇಶದ ಬಳಿ ನಿನ್ನೆ ರಾತ್ರಿ ಮನೆಯೊಂದರ ಕೊಟ್ಟಿಗೆಯಲ್ಲಿದ್ದ ಕರುವನ್ನು ಚಿರತೆ ತಿಂದು ಹಾಕಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ನೈಸ್ ರಸ್ತೆಯ ತುರುಹಳ್ಳಿಯಲ್ಲಿ ಚಿರತೆ ದಾಳಿ ನಡೆಸಿತ್ತು, ಇದೀಗ ಮತ್ತೆ ಚಿರತೆ ಆತಂಕ ಮನೆ ಮಾಡಿದೆ.
ಕೆಲವು ತಿಂಗಳಿನಿಂದ ರಾಜ್ಯದ ಹಲವು ಕಡೆ ಚಿರತೆ ಹಾವಳಿ ಉಂಟಾಗಿದ್ದು, ಜನರು ಭಯದಲ್ಲೇ ಮನೆಯಿಂದ ಹೊರಗೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧಕ್ಕಾಗಿ ರಾಷ್ಟ್ರೀಯ ಭದ್ರತೆಯಲ್ಲಿ ಭಾರತ ರಾಜಿ ಮಾಡಿಕೊಳ್ಳಲ್ಲ : ರಾಜನಾಥ್ ಸಿಂಗ್
BREAKING NEWS : ಯಾದಗಿರಿಯಲ್ಲಿ ಭೀಕರ ಕಾರು ಅಪಘಾತ : ಸ್ಥಳದಲ್ಲೇ ಇಬ್ಬರ ದುರ್ಮರಣ