ಮೈಸೂರು: ಜಿಲ್ಲೆಯ ಕೆ ಆರ್ ನಗರ ಪಟ್ಟಣಕ್ಕೆ ಎಂಟ್ರಿ ಕೊಟ್ಟ ಚಿರತೆ ಜನರಲ್ಲಿ ಸಾಕಷ್ಟು ಆತಂಕ ಮೂಡಿಸಿದೆ.ಸಿಕ್ಕ ಸಿಕ್ಕವರ ಮೇಲೇ ಮನಸೋ ಇಚ್ಚೆ ದಾಳಿ ನಡೆಸುತ್ತಾ ಭೀತಿ ಮೂಡಿಸಿರುವ ಚಿರತೆ ಸುತ್ತಮುತ್ತಲಿನ ಜನರಲ್ಲಿ ತೀವ್ರ ಭೀತಿ ತಂದೊಡ್ಡಿದೆ .ಚಿರತೆ ದಾಳಿಯಿಂದ ಬೆಚ್ಚಿ ಬಿದ್ದಿರುವ ಕೆ ಆರ್ ನಗರ ಪಟ್ಟಣ ನಿವಾಸಿಗಳು ಮನೆಯಿಂದ ಆಚೆ ಬರಲು ಹೆದರುವ ಪರಿಸ್ಥಿತಿ ಉಂಟಾಗಿತ್ತು.
ತುಳಸಿ ಪೂಜೆಯ ಮಹತ್ವ, ಶುಭ ಮುಹೂರ್ತ, ಪೂಜಾ ವಿಧಿ ವಿಧಾನ, ಮಾಹಿತಿ ಇಲ್ಲಿದೆ ಓದಿ | Tulsi Puja 2022
ಶುಕ್ರವಾರ ಬೆಳಗ್ಗೆ ಜನರ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿದೆ. ಸಿಕ್ಕ ಸಿಕ್ಕವರ ಮೇಳೆ ದಾಳಿ ನಡೆಸುತ್ತಾ ಭೀತಿ ಉಂಟು ಮಾಡಿರುವ ಚಿರತೆ ಕಳೆದೊಂದು ವಾರದಿಂದ ಈ ಭಾಗದಲ್ಲಿ ಓಡಾಡುತ್ತಿತ್ತು ಅಂತ ಗೊತ್ತಾಗಿದೆ.ಕೆ ಆರ್ ನಗರದಿಂದ ಮುಳ್ಳೂರಿಗೆ ಹೋಗುವ ರಸ್ತೆಯಲ್ಲಿ ಕಂಡ ಕಂಡವರ ಮೇಲೆ ಚಿರತೆ ದಾಳಿ ನಡೆಸಿದೆ. ಚಿರತೆಯ ಆಟಾಟೋಪ ಕಂಡು ಆತಂಕಗೊಂಡಿರುವ ಕೆ ಆರ್ ನಗರದ ಜನತೆ ಬೆಚ್ಚಿಬಿದ್ದಿದ್ದಾರೆ.
ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಸವಾರನ ಮೇಲೆ ಚಿರತೆ ದಾಳಿಗೆ ಯತ್ನ ಮಾಡಿದೆ.ಇದೇ ವೇಳೆ ನಾಯಿಯೊಂದು ಚಿರತೆ ದಾಳಿಯಿಂದ ಜಸ್ಟ್ ಮಿಸ್ ಆಗಿದ್ದು ಚಿರತೆ ದಾಳಿ ಮಾಡುತ್ತಾ ಸಾಗಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿದೆ
#WATCH | Karnataka: A leopard entered the Kanaka Nagar of Mysuru & attacked some people, he was later captured & rescued by the forest department pic.twitter.com/yVBIcfOyxM
— ANI (@ANI) November 4, 2022
ಗುರುವಾರ ರಾತ್ರಿಯೇ ಕೆ ಆರ್ ನಗರ ಪಟ್ಟಣಕ್ಕೆ ಬಂದಿರುವ ಚಿರತೆ ರಸ್ತೆಯಲ್ಲಿ ಓಡಾಡಿತ್ತು.ರಸ್ತೆ ಮಧ್ಯೆ ಕುಳಿತಿರುವ ಚಿರತೆ ಕಂಡು ಭಯಭೀತರಾಗಿರುವ ಜನರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ರು.ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು..ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ತೀವ್ರ ಕಸರತ್ತು ನಡೆಸಿದ್ದರು.
ತುಳಸಿ ಪೂಜೆಯ ಮಹತ್ವ, ಶುಭ ಮುಹೂರ್ತ, ಪೂಜಾ ವಿಧಿ ವಿಧಾನ, ಮಾಹಿತಿ ಇಲ್ಲಿದೆ ಓದಿ | Tulsi Puja 2022
ಅಟ್ಟಹಾಸ ಮೆರೆದಿದ್ದ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಕಡೆಗೂ ಯಶಸ್ವಿಯಾಯ್ತು.ಚಿರತೆಗೆ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ ಸಿಬ್ಬಂದಿ ಅಂತಿಮವಾಗಿ ಬೋನಿನಲ್ಲಿ ಚಿರತೆಯನ್ನ ಬಂಧಿಸಿದ್ರು.
ಅರವಳಿಕೆ ಚುಚ್ಚುಮದ್ದು ಪ್ರಯೋಗಿಸುತ್ತಿದ್ದಂತೆ ಪ್ರಜ್ಞೆ ತಪ್ಪಿದ ಚಿರತೆಗೆ ಸ್ಥಳದಲ್ಲಿ ಆರೈಕೆ ಮಾಡಲಾಯ್ತು.ಸೆರೆ ಹಿಡಿದ ಚಿರತೆಯನ್ನು ದೂರದ ಅರಣ್ಯ ಪ್ರದೇಶಕ್ಕೆ ಬಿಡಲು ಕೊಂಡೊಯ್ದರು. ಚಿರತೆ ಸೆರೆ ಸಿಕ್ಕ ಸುದ್ದಿ ತಿಳಿದು ನಿರಾಳರಾದ ಕೆ ಆರ್ ನಗರ ಪಟ್ಟಣದ ಜನತೆ ಧನ್ಯವಾದ ಅರ್ಪಿಸಿದರು.
ತುಳಸಿ ಪೂಜೆಯ ಮಹತ್ವ, ಶುಭ ಮುಹೂರ್ತ, ಪೂಜಾ ವಿಧಿ ವಿಧಾನ, ಮಾಹಿತಿ ಇಲ್ಲಿದೆ ಓದಿ | Tulsi Puja 2022