ಬೆಂಗಳೂರು: ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇಂದ್ರದ ಸಚಿವರಾಗಿದ್ದರು. ನೀವು ಕೊಟ್ಟ ಯಾವ ತೊಂದರೆಯಿಂದ ಬಾಬಾಸಾಹೇಬರಿಗೆ ನೋವಾಯಿತು? ಯಾವ ಕಾರಣಕ್ಕೆ ಅವರು ನೆಹರೂ ಅವರನ್ನು ವಿರೋಧಿಸಿ ರಾಜೀನಾಮೆ ಕೊಟ್ಟು ಹೊರಕ್ಕೆ ಬಂದರು ಎಂಬ ವಿಷಯದ ಕುರಿತು ಕಾಂಗ್ರೆಸ್ಸಿಗರು ಉತ್ತರ ಕೊಡಬೇಕು. ಯಾತ್ರೆ ಮಾಡಿ ಜನರಿಗೆ ಉತ್ತರಿಸಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸವಾಲು ಹಾಕಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಬಾಸಾಹೇಬರ ಜೊತೆ ಪಿಎ ಆಗಿ ಸೇವೆ ಮಾಡಿಕೊಂಡಿದ್ದ ಕಾರಜೋಳಕರ್ ಎಂಬವರನ್ನು ಅವರಿಂದ ಕಸಿದುಕೊಂಡು ಹೋಗಿ ಅವರ ವಿರುದ್ಧವೇ ಎತ್ತಿ ಕಟ್ಟಿ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದಿರಲ್ಲವೇ? ಜನಪ್ರಿಯತೆ ಬಾಬಾಸಾಹೇಬರಿಗೆ ಇತ್ತೇ ಅಥವಾ ಕಾರಜೋಳಕರ್ ಅವರಿಗಿತ್ತೇ? ಅಂದಮೇಲೆ ಮನೆ ಒಡೆಯುವ ಕೆಲಸವನ್ನು ನೀವು ಬಹಳ ಚೆನ್ನಾಗಿ ಮಾಡುತ್ತೀರಿ ಎಂದು ಆಕ್ಷೇಪಿಸಿದರು. ಇದು ಅಂಬೇಡ್ಕರರಿಗೆ ಮಾಡಿದ ದ್ರೋಹ; ಇದನ್ನೂ ಜನರಿಗೆ ತಿಳಿಸಿ ಎಂದು ಒತ್ತಾಯಿಸಿದರು.
ನೆಹರೂ, ಇಂದಿರಾಜೀ, ರಾಜೀವ್ ಗಾಂಧಿಯವರಿಗೆ ಕಾಂಗ್ರೆಸ್ಸಿಗರು ಭಾರತರತ್ನ ಕೊಟ್ಟರು. ಆದರೆ, ಮಾನ್ಯ ಬಾಬಾಸಾಹೇಬ ಅಂಬೇಡ್ಕರರಿಗೆ ಕೊಡದೆ ಇರಲು ಕಾರಣವೇನು? ಅಂಬೇಡ್ಕರರ ಪಿಎ ಆಗಿದ್ದ ಕಾರಜೋಳಕರ್ ಅವರಿಗೆ ನೀವು 1970ರಲ್ಲೇ ಪದ್ಮಭೂಷಣ ಪ್ರಶಸ್ತಿ ನೀಡಿದ್ದೀರಿ. ಅಂಬೇಡ್ಕರರು ಕಾರಜೋಳಕರ್ ಅವರಿಗಿಂತ ಕೀಳಾಗಿದ್ದರೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಅಂಬೇಡ್ಕರರನ್ನು ಕಾಂಗ್ರೆಸ್ಸಿಗರು ಸೋಲಿಸಿದ್ದರು. ನಂತರ ಅವರು ಗೆದ್ದ ಕ್ಷೇತ್ರವನ್ನು, ಪವಿತ್ರ ಜಾಗವನ್ನು 1947ರಲ್ಲಿ ನೀವು ಯಾಕೆ ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟಿರಿ? ಅವರು ಎಲ್ಲೂ ಗೆಲ್ಲಬಾರದು ಎಂಬ ಕಾರಣಕ್ಕೆ ತಾನೇ ಎಂದು ಕೇಳಿದರು.
ದಲಿತರಿಗೆ ಇಲ್ಲಿ ಭವಿಷ್ಯವಿಲ್ಲ ಎಂದುದು ಯಾಕೆ? ಮಾನ್ಯ ಹರಿಪ್ರಸಾದ್ ಅವರು ಇದಕ್ಕೂ ಉತ್ತರಿಸಬೇಕು ಎಂದು ಒತ್ತಾಯಿಸಿದರು. ಗಾಂಧಿ ಕುಟುಂಬಕ್ಕೆ ಸುಮಾರು 100 ಎಕರೆ ಭೂಮಿಯನ್ನು ದೆಹಲಿಯಲ್ಲಿ ಕೊಟ್ಟಿದ್ದ ನೀವು ದೆಹಲಿಯಲ್ಲೇ ಡಾ.ಬಾಬಾಸಾಹೇಬ ಅಂಬೇಡ್ಕರರು ಸ್ವರ್ಗಸ್ಥರಾದಾಗ ಅವರ ಅಂತ್ಯಕ್ರಿಯೆಗೆ ಯಾಕೆ ದೆಹಲಿಯಲ್ಲೇ ಜಾಗ ಕೊಡಲಿಲ್ಲ ಎಂದು ಆಕ್ಷೇಪಿಸಿದರು. ಇಂಥ ಕಾರಣಕ್ಕೆ ಕೊಟ್ಟಿಲ್ಲ ಎಂದು ನೀವು ಜನರ ಮುಂದೆ ಭಾಷಣ ಮಾಡಿ ತಿಳಿಸಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಎಂಬುದೇ ಒಂದು ನಕಲಿ ಕಾಂಗ್ರೆಸ್; ಗಾಂಧೀಜಿಯವರೇ ಸ್ವಾತಂತ್ರ್ಯ ಬಂದಿದೆ. ಈ ಪಕ್ಷವನ್ನು ವಿಸರ್ಜಿಸಿ ಎಂದು ತಿಳಿಸಿದ್ದರು. ನೀವ್ಯಾಕೆ ಅದೇ ಪಕ್ಷ ಇಟ್ಟುಕೊಂಡಿದ್ದೀರಿ ಎಂದು ಪ್ರಶ್ನೆಯನ್ನೂ ಮುಂದಿಟ್ಟರು. ನೆಹರೂ ಆದ ಬಳಿಕ ನಿಮಗೆ ಗಾಂಧಿ ಹೆಸರು ಬಂತು; ಇಂದಿರಾ ಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಎಲ್ಲಿ ಬಂತು ಗಾಂಧಿ ನಿಮಗೆ? ಈ ಕಾಂಗ್ರೆಸ್ ಫೇಕ್ ಗಾಂಧಿಗಳ ಪಕ್ಷ. ರಿಯಲ್ ಗಾಂಧಿ ಕಾಂಗ್ರೆಸ್ ಇದಲ್ಲವೇ ಅಲ್ಲ ಎಂದು ಪ್ರತಿಪಾದಿಸಿದರು.
ಕಾಂಗ್ರೆಸ್ ಪಕ್ಷವು ಅಂಬೇಡ್ಕರರಿಗೆ ಮಾಡಿದ ಅವಮಾನ, ನೋವು, ತೊಂದರೆ, ಹಿಂಸೆಯನ್ನು ಇಡಿಯಾಗಿ ಬಿಡಿಸಿಟ್ಟು, ಇಡೀ ದೇಶ ನೋಡುವಂತೆ ಮಾಡಿ ಕಾಂಗ್ರೆಸ್ ಮುಖವಾಡ ಕಳಚಿದ್ದಾರೆ. ಇದರಿಂದ ಕಾಂಗ್ರೆಸ್ಸಿಗರಿಗೆ ಅವಮಾನವಾಗಿದೆ. ಈಗ ಕಾಂಗ್ರೆಸ್ಸಿಗೆ ನೋವು ಏನೆಂದು ಅರ್ಥವಾಗಿದೆ. ಕಾಂಗ್ರೆಸ್ಸಿಗೆ ಆದ ನೋವು, ಅಪಮಾನವನ್ನು ಅಂಬೇಡ್ಕರರಿಗೆ ಆದ ಅವಮಾನ ಎಂಬಂತೆ ಬಿಂಬಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.
ಅಂಬೇಡ್ಕರ್ ಎಂದರೆ ನಿಮಗೆ ಆಗುತ್ತಿರಲಿಲ್ಲ; ಅವರ ಬಗ್ಗೆ ಯಾವಾಗ ಕಾಂಗ್ರೆಸ್ಸಿಗರಿಗೆ ಪ್ರೀತಿ ಬಂತು? ಅಂಬೇಡ್ಕರರು ಕಾಂಗ್ರೆಸ್ ಒಂದು ಸುಡುವ ಮನೆ ಎಂದಿದ್ದರು. ದಲಿತರಿಗೆ ಅಲ್ಲಿ ಭವಿಷ್ಯವಿಲ್ಲ ಎಂದು ದೂರವಿಟ್ಟ ಮೇಲೆ ನಿಮಗೆ ಅವರ ಬಗ್ಗೆ ಇದ್ದಕ್ಕಿದ್ದಂತೆ ಪ್ರೀತಿ ಬರಲು ಕಾರಣವೇನು ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಪ್ರಿಯಾಂಕ್ ಖರ್ಗೆಯವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ, ನಾನು ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ಅವರು ನೈಜ ಅಂಬೇಡ್ಕರ್ ವಾದಿ ಅಲ್ಲ; ನಾನು ನಿಜವಾದ ಅಂಬೇಡ್ಕರ್ ವಾದಿ ಎಂದು ತಿಳಿಸಿದರು.
ಮಂಡ್ಯದಲ್ಲಿ ಕನ್ನಡದ ಸಮ್ಮೇಳನ- ಹಬ್ಬ ನಡೆಯುತ್ತಿದ್ದು, ಈ ಸಮ್ಮೇಳನವನ್ನು ನಾನು ಬಹಿಷ್ಕರಿಸಿದ್ದೇನೆ. ಆದರೆ, ಕನ್ನಡವನ್ನಲ್ಲ; ಆ ವೇದಿಕೆಯನ್ನು ರಾಜಕೀಯ ವೇದಿಕೆ ಮಾಡಿಕೊಂಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
BIG NEWS: ಮೃತ ದೇಹದೊಂದಿಗಿನ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ತಮ್ಮ ಮನೆಯ ಮಹಿಳೆಯರಿಗೂ ಬಿಜೆಪಿ ನಾಯಕರು ಗೌರವ ಕೊಡುವುದಿಲ್ಲ: ಡಿ.ಕೆ. ಸುರೇಶ್
BREAKING : ಕಲಬುರ್ಗಿಯ ‘ಹೈಟೆಕ್ ಜಯದೇವ ಹೃದ್ರೋಗ’ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದ CM ಸಿದ್ದರಾಮಯ್ಯ