ಬೆಂಗಳೂರು : ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದವರೇ ನಿಜವಾದ ನಾಯಕ. ನನ್ನ ಸುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸುತ್ತ ಗಿರಗಿಟ್ಲೆ ತರ ತಿರುಗಿದರೆ ನಾಯಕರಾಗಲ್ಲ. ಬ್ಯಾನರ್ ಫೋಟೋ ಹಾಕಿದವರು ನಾಯಕರಾಗಲ್ಲ. ಕಾಂಗ್ರೆಸ್ ಪಕ್ಷವನ್ನು ಯಾರು ಅಧಿಕಾರಕ್ಕೆ ತರುತ್ತಾರೆ ಅವರೇ ನಿಜವಾದ ನಾಯಕ ಎಂದು ಉಪಮುಖ್ಯಮಂತ್ರಿ ಶಿವಕುಮಾರ್ ಅವರು ತಿಳಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಎಚ್.ಎಸ್ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದವರೇ ನಿಜವಾದ ನಾಯಕ ಎಂದು ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಡಿಸಿಎಂ ಡಿಕೆ ಶಿವಕುಮಾರ್ ಶಿಸ್ತಿನ ಪಾಠ ಮಾಡಿದ್ದಾರೆ. ನನ್ನ ಮುಂದೆ ಸಿದ್ದರಾಮಯ್ಯ ಮುಂದೆ ಪೋಸ್ಟರ್ ಹಾಕಿದರೆ ನಾಯಕ ಆಗಲ್ಲ. ಪೋಸ್ಟರ್ ಬ್ಯಾನರ್ ಹಾಕಿದ ಮೇಲೆ ಯಾರು ನಾಯಕರು ಆಗುವುದಿಲ್ಲ.
ಶಿಸ್ತು ಇರಬೇಕು ಯಾರು ಬೂತ್ ಮಟ್ಟದಲ್ಲಿ ಹೆಚ್ಚು ಮತ ಕೊಡುತ್ತಾನೋ ಅವನೇ ನಿಜವಾದ ನಾಯಕ. ನನ್ನ ಮುಂದೆ ಸಿದ್ದರಾಮಯ್ಯ ಮುಂದೆ ಗಿರಗಿಟ್ಲೆ ತರ ತಿರುಗಿದರೆ ನಾಯಕನಾಗಲ್ಲ. ನಿಮ್ಮ ಬೂತ್ ನಲ್ಲಿ ಯಾರು ಅತಿ ಹೆಚ್ಚು ವೋಟು ತರುತ್ತಿರೋ, ಯಾರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತಿರೋ ಅವರು ಮಾತ್ರ ಪಕ್ಷದ ನಾಯಕ ಎಂದು ತಿಳಿಸಿದರು.