ರೋಹ್ತಾಸ್(ಬಿಹಾರ): ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನಾಯಕ ವಿಜೇಂದ್ರ ಯಾದವ್ ಅವರನ್ನು ಶನಿವಾರ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಿಹಾರದ ಕಾರ್ಘರ್ನ ನಿಮ್ದಿಹಾರ ರಸ್ತೆ ಬಳಿ ನಡೆದಿದೆ.
ವಿಜೇಂದ್ರ ಯಾದವ್ ಕೃಷಿ ಕೆಲಸಕ್ಕೆ ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದ ಆರು ಮಂದಿ ಕಿಡಿಗೇಡಿಗಳು ವಿಜೇಂದ್ರ ಮೇಲೆ ಗುಂಡು ಹಾರಿಸಿದ್ದು, ಈ ವೇಳೆ ಎರಡು ಗುಂಡುಗಳು ವಿಜೇಂದ್ರನ ದೇಹಕ್ಕೆ ಹೊಕ್ಕಿವೆ ಎಂದು ವರದಿಯಾಗಿದೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ಅಪರಾಧಿಗಳನ್ನು ಬಂಧಿಸಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
6 ವರ್ಷಗಳ ರಿಲೇಷನ್ಶಿಪ್: ಬಾಂಗ್ಲಾದೇಶದ ಮಹಿಳೆಯನ್ನು ವರಿಸಿದ ತಮಿಳುನಾಡ ಯುವತಿ!