ಉತ್ತರ ಪ್ರದೇಶ: ಜಿಮ್ಗೆಂದು ಹೋಗುತ್ತಿದ್ದ ಕಾನೂನು ವಿದ್ಯಾರ್ಥಿನಿ ಮೇಲೆ ತರಬೇತುದಾರ ಅತ್ಯಾಚಾರವೆಸಗಿದ್ದು, ಅದರ ವಿಡಿಯೋ ವೈರಲ್ ಆದ ನಂತ್ರವೇ ಸಂತ್ರಸ್ತೆಗೆ ನನ್ನ ಮೇಲೆ ಅತ್ಯಾಚಾರವಾಗಿದೆ ಎಂದು ತಿಳಿದು ಆಘಾತಕ್ಕೊಳಗಾಗಿರುವ ಘಟನೆ ಮೀರತ್ನಲ್ಲಿ ಬೆಳಕಿಗೆ ಬಂದಿದೆ.
ಮೀರತ್ನಲ್ಲಿ ಎಲ್ಎಲ್ಬಿ ವಿದ್ಯಾರ್ಥಿನಿಯು ಪ್ರತಿದಿನ ಜಿಮ್ಗೆಂದು ಹೋಗುತ್ತಿದ್ದಳು. ನಗರದ ನಿವಾಸಿ ಜಿಮ್ ತರಬೇತುದಾರ ಭರತ್ ಯಾದವ್ ಆಕೆಗೆ ಟ್ರೈನಿಂಗ್ ಕೊಡುತ್ತಿದ್ದ. ಅಕ್ಟೋಬರ್ 12 ರಂದು ವಿದ್ಯಾರ್ಥಿ ಎಂದಿನಂತೆ ಜಿಮ್ಗೆ ಹೋಗಿದ್ದಳು. ತಾಲೀಮು ಸಮಯದಲ್ಲಿ ಆಕೆಗೆ ತಲೆತಿರುಗುವಿಕೆ ಕಾಣಿಸಿಕೊಂಡಿದೆ. ಭರತ್ ಯಾದವ್ ಆಕೆಯಯನ್ನು ಊಟ ಕೊಡಿಸುವ ನೆಪದಲ್ಲಿ ಸಮೀಪದ ಹೋಟೆಲ್ಗೆ ಕರೆದೊಯ್ದಿದ್ದ ಎನ್ನಲಾಗಿದೆ. ಅಲ್ಲಿ ತಂಪು ಪಾನೀಯದಲ್ಲಿ ಅಮಲು ಬೆರೆಸಿ ಆಕೆಗೆ ಕುಡಿಸಿದ್ದಾನೆ. ಇದ್ರಿಂದ ಆಕೆ ಅಲ್ಲೇ ಪ್ರಜ್ಞಾಹೀನಳಾಗಿದ್ದಾಳೆ. ಇದೇ ವೇಳೆ ಭರತ್ ಯಾದವ್ ಹೋಟೆಲ್ ಕೋಣೆಗೆ ಕರೆದೊಯ್ದು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಮಾಡಿದ್ದಾನೆ.
ತನ್ನ ಮೇಲೆ ಅತ್ಯಾಚಾರವಾಗಿದೆ ಎಂಬ ಬಗ್ಗೆ ಸಂತ್ರಸ್ತೆಗೆ ತಿಳಿದಿಲ್ಲ. ಇದಾದ ಎರಡು ದಿನಗಳ ನಂತ್ರ, ಯಾದವ್ ರೆಕಾರ್ಡ್ ಮಾಡಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿಷಯ ತಿಳಿದ ಸಂತ್ರಸ್ತೆಗೆ ಆಘಾತವಾಗಿದೆ. ಶನಿವಾರ ಬಾಲಕಿ ಕುಟುಂಬಸ್ಥರೊಂದಿಗೆ ಠಾಣೆಗೆ ಬಂದು ವಿಷಯ ತಿಳಿಸಿದ್ದಾಳೆ. ಬಾಲಕಿಯ ಕುಟುಂಬಸ್ಥರ ದೂರಿನ ಮೇರೆಗೆ ಆರೋಪಿ ಜಿಮ್ ತರಬೇತುದಾರನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ತರಬೇತುದಾರನ ಹುಡುಕಾಟದಲ್ಲಿದ್ದಾರೆ ಎಂದು ನಗರ ಎಸ್ಪಿ ಪಿಯೂಷ್ ಸಿಂಗ್ ತಿಳಿಸಿದ್ದಾರೆ.
BIGG NEWS : ಸಿದ್ದರಾಮಯ್ಯ ಎಲ್ಲೇ ಸ್ಪರ್ಧಿಸಿದರೂ ಡಿ.ಕೆ. ಶಿವಕುಮಾರ್ ಭಯ ಕಾಡಲಿದೆ : ಸಚಿವ ಶ್ರೀರಾಮುಲು
ಕ್ಯಾನ್ಸರ್ ರೋಗಿಗಳಲ್ಲಿ ಹೊಸ ಭರವಸೆ ಮೂಡಿಸಿದ 2 ಚಿಕಿತ್ಸೆಗಳು!… ಅವ್ಯಾವುವು, ಪ್ರಯೋಜನ? ತಿಳಿಯಿರಿ
BIGG NEWS : ಸಿದ್ದರಾಮಯ್ಯ ಎಲ್ಲೇ ಸ್ಪರ್ಧಿಸಿದರೂ ಡಿ.ಕೆ. ಶಿವಕುಮಾರ್ ಭಯ ಕಾಡಲಿದೆ : ಸಚಿವ ಶ್ರೀರಾಮುಲು