ಕಲಬುರಗಿ: ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಜನತೆ ಸಂಕಷ್ಟದಲ್ಲಿ ಎದುರಿಸುತ್ತಿರುವಾಗ ಸರ್ಕಾರ ಲೂಟಿಯಲ್ಲಿ ತೊಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಕಲಬುರಗಿ ಎನ್.ವಿ ಮೈದಾನದಲ್ಲಿ ಬಿಜೆಪಿ ಸಂಕಲ್ಪ ಸಮಾವೇಶದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ಭಾಷಣದುದ್ದಕ್ಕೂ ವಾಗ್ದಾಳಿ ನಡೆಸಿದರು.ಜನರಲ್ಲಿರುವ ಉತ್ಸಾಹವನ್ನು ನೋಡಿದರೆ, ಕರ್ನಾಟಕವು ಬಿಜೆಪಿಯನ್ನು ದಾಖಲೆಯ ಸ್ಥಾನಗಳಲ್ಲಿ ಗೆಲ್ಲಲು ನಿರ್ಧರಿಸಿದೆ ಎಂದು ತೋರುತ್ತಿದೆ ಎಂದ ಮೋದಿ ಚುನಾವಣೆ ಫಲಿತಾಂಶ ಘೋಷಣೆಗೂ ಮುನ್ನ ಕರ್ನಾಟಕ ತೀರ್ಪು ಏನೆಂದು ನಿರ್ಧರಿಸಿದೆ ಎಂದು ಹೇಳಿದರು.
ಹಲವು ಅವಕಾಶಗಳು ಸಿಕ್ಕಿದ್ದರೂ ಕಾಂಗ್ರೆಸ್ ಸುಧಾರಣೆ ಮಾಡಿಕೊಳ್ಳುವುದಕ್ಕೆ ತಯಾರಿಲ್ಲ. ಸಮಾಜಘಾತುಕ ಶಕ್ತಿಗಳಿಗೆ ರಾಜ್ಯದಲ್ಲಿ ಬಹಿರಂಗವಾಗಿಯೇ ಬೆಂಬಲ ಸಿಗುತ್ತಿದೆ. ಜನರ ಮನಸ್ಸಿನಲ್ಲಿ ಭಯ ಉಂಟುಮಾಡಲಾಗುತ್ತಿದೆ. ಜನರು ಆತಂಕಗೊಂಡಿರುವಾಗ ಕಾಂಗ್ರೆಸ್ ಲೂಟಿಯಲ್ಲಿ ನಿರತವಾಗಿದೆ. ಕಲ್ಲಿದ್ದಲಿನ ಕಪ್ಪುತನವನ್ನು ಹೋಗಲಾಡಿಸಬಹುದು ಆದರೆ ಭ್ರಷ್ಟಾಚಾರವನ್ನು ಕಾಂಗ್ರೆಸ್‌ನಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಇಂತಹವರಿಗೆ ಭ್ರಷ್ಟಾಚಾರವೇ ಆಮ್ಲಜನಕ ಎಂದು ಮೋದಿ ಹೇಳಿದ್ದಾರೆ.
ಬಾಗಲಕೋಟೆ : ಮಗಳ ಮೇಲೆ ಕಣ್ಣು ಹಾಕಬೇಡ ಎಂದಿದ್ದಕ್ಕೆ ಯುವತಿಯ ತಂದೆಯನ್ನು ಬರ್ಬರ ಕೊಲೆಗೈದ ಪಾಗಲ್ ಪ್ರೇಮಿ
ಜನತೆಗೆ ಕಾಂಗ್ರೆಸ್ ಬಗ್ಗೆ ಸತ್ಯ ಅರಿವಾಗಿದ್ದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ಹೇಳಿರುವ ಮೋದಿ, ಕಾಂಗ್ರೆಸ್ ಎಷ್ಟೇ ಬಾರಿ ತಮ್ಮ ಉಡುಪುಗಳನ್ನು ಬದಲಾಯಿಸಿದರೂ ಅವರ ದುಷ್ಕೃತ್ಯಗಳು ಬದಲಾಗುವುದಿಲ್ಲ, ಈ ಬಗ್ಗೆ ಜಾಗೃತರಾಗಿರುವ ಕರ್ನಾಟಕದ ಮಂದಿ ಕಾಂಗ್ರೆಸ್ ನೆಡೆಗೆ ಆಕ್ರೋಶಗೊಂಡಿದ್ದಾರೆ ಎಂದು ಮೋದಿ ವಾಗ್ದಾಳಿ ನಡೆಸಿದರು.