ಮುಂಬೈ (ಮಹಾರಾಷ್ಟ್ರ) : ಟಾಟಾ ಸನ್ಸ್ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ(Cryus Mistry) ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮುಂಬೈನ ವರ್ಲಿ ಚಿತಾಗಾರದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
54 ವರ್ಷದ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಮಿಸ್ತ್ರಿ ಭಾನುವಾರ ಸಂಜೆ ಮುಂಬೈ ಬಳಿ ರಸ್ತೆ ಅಪಘಾತದಲ್ಲಿ ನಿಧನರಾದರು.
ಪಾಲ್ಘರ್ ಪೊಲೀಸರ ಪ್ರಕಾರ, ಮಿಸ್ತ್ರಿ ಅವರು ಅಹಮದಾಬಾದ್ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಅವರ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಅವರ ಕಾರಿನಲ್ಲಿ
ನಾಲ್ಕು ಜನರಿದ್ದರು. ಅಪಘಾತದಲ್ಲಿ ಮಿಸ್ತ್ರಿ ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರು. ಇನ್ನಿಬ್ಬರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಮಿಸ್ತ್ರಿ ಅವರನ್ನು ಹೊರತುಪಡಿಸಿ, ಮತ್ತೊಬ್ಬ ಮೃತನನ್ನು ಜಹಾಂಗೀರ್ ದಿನಶಾ ಪಾಂಡೋಲೆ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಅನಯತ ಪಾಂಡೋಲೆ ಮತ್ತು ಡೇರಿಯಸ್ ಪಂಡೋಲೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
BREAKING NEWS: ಚಲಿಸುತ್ತಿದ್ದ ರೈಲಿನ ಮುಂದೆ ‘ರೀಲ್ಸ್’ ಮಾಡುವಾಗ ಗಾಯಗೊಂಡಿದ್ದ ಯುವಕ ಸಾವು
BREAKING NEWS: ಬೆಂಗಳೂರು ಜನರೇ ಗಮನಿಸಿ….. ಗಮನಿಸಿ !; ಎರಡು ದಿನ ಕಾವೇರಿ ನೀರು ಬಂದ್
BIGG NEWS: ಮೈಸೂರಿನಲ್ಲಿ ಭಾರಿ ಮಳೆಗೆ ನಿಲ್ಲದ ಅವಾಂತರ; 50ಕ್ಕೂ ಹೆಚ್ಚು ಶೇಡ್ಗಳಿಗೆ ನುಗ್ಗಿದ ನೀರು