ಚಿಕ್ಕಬಳ್ಳಾಪುರ: ನಂದಿ ಬೆಟ್ಟದ ಎರಡು ಕಡೆಗಳಲ್ಲಿ ಗುಡ್ಡ ಕುಸಿತವಾಗಿದ್ದು, ಆತಂಕದಲ್ಲಿ ಜನತೆ ಮತ್ತು ಪ್ರವಾಸಿಗರು ಇದ್ದಾರೆ. ಕಳೆದ ಒಂದು ವಾರದಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ಮಳೆಯಿಂದ ರಾಜ್ಯದ ನಾನಾ ಭಾಗಗಳಲ್ಲಿ ಅವಾಂತರಗಳು ನಿರ್ಮಾಣವಾಗಿದ್ದು, ಅನೇಕ ಕಡೆಗಳಲ್ಲಿ ಮನೆ ಕುಸಿತವಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ಸುಲ್ತಾನಪೇಟೆಯಿಂದ ನಂದಿಬೆಟ್ಟಕ್ಕೆ ತೆರಳುವ ಮೆಟ್ಟಿಲು ಮಾರ್ಗದ ಕಡೆ ವೀರಭದ್ರ ಸ್ವಾಮಿ ದೇಗುಲದ ಭಾಗದಲ್ಲಿ ಮತ್ತು ಸುಲ್ತಾನಪೇಟೆ ಗ್ರಾಮದ ಕಡೆ ಮತ್ತದು ಭಾಗದಲ್ಲಿ ಭೂ ಕುಸಿತ ಆಗಿದೆ ಎನ್ನಲಾಗಿದೆ. ಇನ್ನೂ ಕಳೆದ ವರ್ಷ ಆಗಸ್ಟ್ 25ರಂದು ಕೂಡ ಇದೇ ರೀತಿ ಗುಡ್ಡ ಕುಸಿತ ಆಗಿತ್ತು ಆಗ ಕೆಲವು ತಿಂಗಳುಗಳ ಕಾಲ ನಂದಿ ಬೆಟ್ಟಕ್ಕೆ ಪ್ರವೇಶವನ್ನು ನಿಷೇಧಿಸಿದ್ದನ್ನು ನಾವು ಸ್ಮರಿಸಬಹುದು.