ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಯನ್ನು ವಿವಿಧ ಸಮೀಕ್ಷಾ ಸಂಸ್ಥೆಗಳಿಂದ ಪ್ರಕಟಿಸಲಾಗಿದೆ. ಈ ಸಮೀಕ್ಷೆಯಲ್ಲಿ ಎನ್ ಡಿ ಎ ಸ್ಪಷ್ಟ ಬಹುಮತ ಪಡೆಯಲಿದೆ ಎಂಬುದಾಗಿ ಹೇಳಲಾಗಿದೆ.
ಮಾಟ್ರಿಜ್ ಮತದಾನೋತ್ತರ ಸಮೀಕ್ಷೆಯ ಪ್ರಕಾರ ಎನ್ ಡಿಎ 147ರಿಂದ 167 ಸೀಟನ್ನು ಗೆಲ್ಲಲಿದೆ. ಕಾಂಗ್ರೆಸ್ ಪಕ್ಷದ ಎಂಜಿಪಿ 70 ರಿಂದ 90 ಸೀಟ್, ಜೆಎಸ್ ಪಿ 0, ಇತರೆ 2ರಿಂದ 6 ಸೀಟು ಗೆಲ್ಲುವ ಸಾಧ್ಯತೆಯನ್ನು ತಿಳಿಸಿದೆ.
ಪೀಪಲ್ ಇನ್ ಸೈಟ್ ಸಮೀಕ್ಷೆಯ ಪ್ರಕಾರ ಎನ್ ಡಿಎಗೆ ಸ್ಪಷ್ಟ ಬಹುಮತ ಬರಲಿದೆ ಎಂಬುದಾಗಿ ಹೇಳಲಾಗಿದೆ. ಎನ್ ಡಿಎ 133-143, ಮಹಾಘಟಬಂಧನ್ 93-102, ಇತರೆ 2-9 ಸ್ಥಾನವನ್ನು ಗೆಲ್ಲಲಿವೆ ಎಂಬುದಾಗಿ ಹೇಳಲಾಗಿದೆ.
Bihar Exit Polls | As per the Exit Polls by Times of India, out of 243 seats, NDA is predicted to get 147-167, the Mahagathbandhan to get 70-90, and others may get 2-6 seats pic.twitter.com/ZxBHXWgAxm
— ANI (@ANI) November 11, 2025
ಡಿವಿ ರಿಸರ್ಚ್ ನಂತೆ ಎನ್ ಡಿಎಗೆ ಸರಳ ಬಹುಮತ ಬರಲಿದೆ. ಎನ್ ಡಿಎ 132 ರಿಂದ 152, ಮಹಾಘಟಬಂಧನ್ ಗೆ 83-98 ಸೀಟ್, ಜೆಎಸ್ ಪಿ 2ರಿಂದ 4, ಇತರೆ 1 ರಿಂದ 8 ಸೀಟ್ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ದೈನಿಕ್ ಭಾಸ್ಕರ್ ಸಮೀಕ್ಷೆಯಂತೆ ಎನ್ ಡಿ ಎ ಗೆ ಸ್ಪಷ್ಟ ಬಹುಮತ ಬರಲಿದೆ ಎಂಬುದಾಗಿ ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. ಎನ್ ಡಿಎ 131, ಮಹಾಘಟಬಂಧನ್ 112 ಸೀಟ್, ಬಿಜೆಪಿ 80, ಜೆಡಿಯು 45, ಕಾಂಗ್ರೆಸ್ 19, ಆರ್ ಜೆ ಡಿಗೆ 77, ಇತರೆ 20 ಸ್ಥಾನಗಳನ್ನು ಪಡೆಯಲಿವೆ ಎಂದಿದೆ.
#BiharElections || Poll of Polls (Total Seats: 243):
– NDA: 138-155
– MGB: 82-98
– JSP: 0-2
– Oth: 3-7@navikakumar analyzes the Poll of Polls projections. pic.twitter.com/C87UWlsxOq
— TIMES NOW (@TimesNow) November 11, 2025
ಚಾಣಕ್ಯ ಸ್ಟ್ರಾಟಜೀಸ್ ಸಮೀಕ್ಷೆಯಂತೆ ಎನ್ ಡಿಎಗೆ ಸ್ಪಷ್ಟ ಬಹುಮತವೆಂದು ಹೇಳಲಾಗಿದೆ. ಎನ್ ಡಿ ಎ 130ರಿಂದ 138, ಮಹಾಘಟಬಂಧನ್ 100 ರಿಂದ 108, ಇತರೆ 3ರಿಂದ 5 ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂಬುದಾಗಿ ಹೇಳಿದೆ.
ಅಂದಹಾಗೇ ಬಿಹಾರ ವಿಧಾನಸಭಾ ಚುನಾವಣೆಯ ಸದಸ್ಯರ ಬಲಾಬಲ 243 ಆಗಿದೆ. ಬಿಹಾರದಲ್ಲಿ ಸರ್ಕಾರ ರಚಿಸಲು ಮ್ಯಾಜಿಕ್ ನಂಬರ್ 122 ಪಡೆಯಬೇಕಿದೆ.








