ಉತ್ತರ ಕನ್ನಡ: ಜಿಲ್ಲೆಯ ಅಂಕೋಲ ಬಳಿಯ ಶಿರೂರು ಗ್ರಾಮ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತದಿಂದಾಗಿ ನಾಪತ್ತೆಯಾಗಿದ್ದಂತ ಮೂವರ ಸುಳಿವು ಇನ್ನೂ ಪತ್ತೆಯಾಗಿಲ್ಲ. ಇವರ ಪತ್ತೆಗಾಗಿ ಈಗ ಮುಳುಗು ತಜ್ಞರಿಂದ ಶೋಧಕಾರ್ಯಾಚರಣೆ ಮುಂದುವರೆಸಲಾಗಿದೆ.
ಇಂದು ಗಂಗಾವಳಿ ನದಿಯಲ್ಲಿ ಸ್ಕೂಬಾ ಡೈವ್ ತಂಡದ ಮುಳುಗು ತಜ್ಞರಿಂದ ನಾಪತ್ತೆಯಾಗಿರುವಂತ ಮೂವರ ಪತ್ತೆಗಾಗಿ ಶೋಧಕಾರ್ಯಾಚರಣೆ ನಡೆಸಲಾಯಿತು. ಈ ವೇಳೆಯಲ್ಲಿ ಲಾರಿಯ ಜಾಕ್ ಪತ್ತೆಯಾಗಿದೆ ಎಂಬುದಾಗಿ ತಿಳಿದು ಬಂದಿದೆ.
ಕೇರಳ ಮೂಲದ ಅರ್ಜುನ್ ಎಂಬ ಲಾರಿ ಡ್ರೈವರ್ ಶಿರೂರು ಗುಡ್ಡ ಕುಸಿತ ಘಟನೆಯ ನಂತ್ರ ನಾಪತ್ತೆಯಾಗಿದ್ದರು. ಇವರಲ್ಲದೇ ಇನ್ನೂ ಇಬ್ಬರ ಸುಳಿವು ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಕಳೆದ ಅರ್ಧ ಗಂಟೆಯಿಂದ ಇಂದು ಮುಳುಗು ತಜ್ಞರಿಂದ ಅವರ ಪತ್ತೆಗಾಗಿ ಗಂಗಾವಳಿ ನದಿಯಲ್ಲಿ ಅವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಲಾರಿಯ ಜಾಕ್ ಸೇರಿದಂತೆ 28 ಬಿಡಿ ಭಾಗಗಳು ಕೂಡ ಇಂದಿನ ಕಾರ್ಯಾಚರಣೆಯ ವೇಳೆಯಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಅವುಗಳು ಅರ್ಜುನ್ ಓಡಿಸುತ್ತಿದ್ದಂತ ಲಾರಿಯ ವಸ್ತುಗಳು ಎಂಬುದಾಗಿಯೂ ಮಾಲೀಕರು ಸ್ಪಷ್ಟ ಪಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಡೋಪಿಂಗ್ ನಿಯಮ ಉಲ್ಲಂಘನೆ: ಪ್ಯಾರಾಲಿಂಪಿಯನ್ ಪ್ರಮೋದ್ ಭಗತ್ ಗೆ 18 ತಿಂಗಳು ನಿಷೇಧ
BREAKING: ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ ಆರೋಪ ಕೇಸ್: ಆ.21ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್
BREAKING : ನಟ ದರ್ಶನ್ ಸೇರಿದಂತೆ 6 ಆರೋಪಿಗಳ ಬಟ್ಟೆ ಮೇಲೆ ರೇಣುಕಾ ಸ್ವಾಮಿಯ ರಕ್ತದ ಕಲೆ ಪತ್ತೆ!