ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್ ಅವರು ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಭಾನುವಾರ ತೆರಳಿದ್ದಾರೆ.
BIGG NEWS : ವಸತಿ ರಹಿತರಿಗೆ ಗುಡ್ ನ್ಯೂಸ್ : 22 ಸಾವಿರ ಮಂದಿಗೆ ನಿವೇಶನ : ಸಚಿವ ಆರ್. ಅಶೋಕ್ ಘೋಷಣೆ
ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ತಮ್ಮ ಒಂದು ಮೂತ್ರಪಿಂಡವನ್ನು ಅನಾರೋಗ್ಯದ ತಂದೆಗೆ ನೀಡಲಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಇತ್ತ ರೋಹಿಣಿ ಆಚಾರ್ಯ, ತಂದೆಯ ಕುರಿತಂತೆ ಟ್ವೀಟ್ ನಲ್ಲಿ ಭಾನನಾತ್ಮಕವಾಗಿ ಬರೆದುಕೊಂಡಿದ್ದಾರೆ. ನೀವು ನಮ್ಮ ತಂದೆಯೊಂದಿಗೆ ಇರುವಾಗ ಪ್ರತಿ ಕ್ಷಣವೂ ಸಂತೋಷದಿಂದ ತುಂಬಿರುತ್ತದೆ. ನನಗೆ ಎಲ್ಲಾ ಕಷ್ಟಗಳನ್ನು ಹೇಗೆ ಜಯಿಸಬೇಕೆಂದು ಕಲಿಸಿದರು. ಬಡವರು, ವಂಚಿತರು ಮತ್ತು ಶೋಷಿತರಿಗೆ ಸಹಾಯ ಮಾಡಿದ್ದಾರೆ ಎಂದು ಬರೆದಿದ್ದಾರೆ.
खुशी का हर लम्हा होता है पास
पिता का साया जो होता है साथ🤞💕हर मुसीबत से लड़ना हमें है सिखाया
गरीब,वंचित,शोषित समाज को जिन्होंने अधिकार है दिलाया🙏 pic.twitter.com/TW2xZGaZip— Rohini Acharya (@RohiniAcharya2) November 27, 2022
ಲಾಲು ಪುತ್ರಿ ತನ್ನ ತಂದೆ ಸಿಂಗಾಪುರಕ್ಕೆ ಆಗಮಿಸಿದ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
ನನಗೆ ಧ್ವನಿ ನೀಡಿದ ತಂದೆಗಾಗಿ ನಾನು ಏನನ್ನಾದರೂ ಮಾಡಲು ಸಾಧ್ಯವಾದರೆ ಅದು ನನ್ನ ಅದೃಷ್ಟ, ಮಕ್ಕಳ ಪಾಲಿಗೆ ಪಾಲಕರು ದೇವರಿಗಿಂತ ಕಡಿಮೆಯಿಲ್ಲ. ಅವರ ಸೇವೆ ಮಾಡುವುದು ಎಲ್ಲ ಮಕ್ಕಳ ಕರ್ತವ್ಯ. ನಿಮ್ಮ ಹಾರೈಕೆಗಳು ನನ್ನನ್ನು ಬಲಗೊಳಿಸಿವೆ.ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಬರೆದಿದ್ದಾರೆ.
माँ- पिता मेरे लिए भगवान हैं. मैं उनके लिए कुछ भी कर सकती हूँ. आप सबों के शुभकामनाओं ने मुझे और मजबूत बनाया है.
मैं आप सबके प्रति दिल से आभार प्रकट करती हूँ. आप सब का विशेष प्यार और सम्मान मिल रहा है.
मैं भावुक हो गयी हूँ. आप सबको दिल से आभार कहना चाहती हूँ. pic.twitter.com/ipvrXrFitS
— Rohini Acharya (@RohiniAcharya2) November 11, 2022
ಲಾಲು ಯಾದವ್ ಅವರು ತಮ್ಮ ಮತ್ತೋರ್ವ ಪುತ್ರಿ ಮಿಸಾ ಭಾರತಿ ಅವರೊಂದಿಗೆ ಸಿಂಗಾಪುರ ವಿಮಾನ ನಿಲ್ದಾಣಕ್ಕೆ ಮೀಲ್ ಚೇರ್ ನಲ್ಲಿ ಆಗಮಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹದು.
BIGG NEWS : ಮಂಗಳೂರಿನಲ್ಲಿ ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರ ಆರೋಪ : ಇಬ್ಬರ ವಿರುದ್ಧ ದೂರು ದಾಖಲು