ಕವರಟ್ಟಿ (ಲಕ್ಷದ್ವೀಪ): ರಾಷ್ಟ್ರಧ್ವಜ(National Flag)ಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಲಕ್ಷದ್ವೀಪ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕಾಸಿಂ ಎಚ್ಕೆ ವಿರುದ್ಧ ಕವರಟ್ಟಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾಸಿಂ ತನ್ನ ಪತ್ನಿಯೊಂದಿಗೆ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಿಡಿದಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪವಿದೆ. ಇದರ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಅವರಿಗೆ ನೋಟಿಸ್ ಕಳುಹಿಸಿದ್ದಾರೆ.
“CrPC ಯ ಕಲಂ 41-A ಸೆಕ್ಷನ್ (1) ಅಡಿಯಲ್ಲಿ ಸ್ವೀಕರಿಸಿದ ಮಾಹಿತಿಯ ಪ್ರಕಾರ, ನಿಮ್ಮ ಮೇಲೆ ರಾಷ್ಟ್ರಧ್ವಜವನ್ನು ಅಪವಿತ್ರಗೊಳಿಸಿರುವ ಆರೋಪವಿದೆ. ಅಪರಾಧ ತಡೆ ಕಾಯ್ದೆಯ ಕವರಟ್ಟಿ ಪೊಲೀಸ್ ಠಾಣೆ U/s 2 ರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಆ. 14 ರಂದು ನೀವು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಕ್ಕಾಗಿ ನಿಮ್ಮ ಮೇಲೆ ಆರೋಪವಿದೆ ಎಂದು ಈ ಮೂಲಕ ತಿಳಿಸಲಾಗಿದೆ. ಈ ಪ್ರಕರಣದ ವಿಚಾರಣೆಗಾಗಿ ಆಗಸ್ಟ್ 25 ರಂದು ಬೆಳಿಗ್ಗೆ 10:30 ಕ್ಕೆ ಲಕ್ಷದ್ವೀಪದ ಕವರಟ್ಟಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಈ ಆದೇಶವನ್ನು ಅನುಸರಿಸಲು ವಿಫಲವಾದರೆ ಶಿಕ್ಷೆಯಾಗುವುದು” ಎಂದು ತಿಳಿಸಲಾಗಿದೆ.
ರಾಜ್ಯ ಸರ್ಕಾರದಿಂದ ವಿವಿಧ ಮಠ, ಟ್ರಸ್ಟ್, ದೇಗುಲಗಳಿಗೆ ಭಂಪರ್ ಗಿಫ್ಟ್: 143 ಕೋಟಿ ಅನುದಾನ ಬಿಡುಗಡೆ